For Quick Alerts
  ALLOW NOTIFICATIONS  
  For Daily Alerts

  'KGF' ಟ್ರೇಲರ್ ದಾಖಲೆ ಮಾಡಿದೆ : ಮೊದಲ ಹಾಡು ಈಗ ಬರ್ತಿದೆ

  |
  KGF kannada movie : ನಾಳೆ 6:30ಕ್ಕೆ KGF ಮೊದಲ ಹಾಡು ಬಿಡುಗಡೆ | FILMIBEAT KANNADA

  19 ದಿನ ಉಳಿದಿದೆ... 'ಕೆ ಜಿ ಎಫ್' ಎಂಬ ಮಹಾ ಸಿನಿಮಾ ಆಗಮನಕ್ಕೆ ದಿನಗಣನೇ ಶುರುವಾಗಿದೆ. ಕನ್ನಡ ಮಾತ್ರವಲ್ಲದೆ ಇಡೀ ಭಾರತ ಚಿತ್ರರಂಗ ಈ ಸಿನಿಮಾಗಾಗಿ ಕಾಯುತ್ತಿದೆ. ಈ ಮಟ್ಟಿಗೆ ಕ್ರೇಜ್ ಸೃಷ್ಟಿ ಮಾಡಿರುವ ಕನ್ನಡದ ಮೊದಲ ಸಿನಿಮಾ ಇದಾಗಿದೆ.

  ಈ ಸಿನಿಮಾದಿಂದ ಕನ್ನಡ ಚಿತ್ರರಂಗ ಲೆವೆಲ್ ಬೇರೆಯದ್ದೆ ಮಟ್ಟಕ್ಕೆ ಹೋಗುತ್ತದೆ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಎರಡು ವರ್ಷಗಳ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗುತ್ತದೆ ಎಂಬ ನಂಬಿಕೆ ಚಿತ್ರತಂಡದಾಗಿದೆ.

  'KGF'ಗೆ ಪೈಪೋಟಿ ನೀಡಲು ಡಿಸೆಂಬರ್ ಗೆ ಬರ್ತಿರೋ ಕನ್ನಡ ಸಿನಿಮಾಗಳಿವು

  ಈಗಾಗಲೇ, ರಿಲೀಸ್ ಆಗಿರುವ ಟ್ರೇಲರ್ ದೊಡ್ಡ ಮಟ್ಟದ ಪ್ರತಿಕ್ರಿಯೆ ಪಡೆದುಕೊಂಡಿದೆ. ಟ್ರೇಲರ್ ವೀಕ್ಷಣೆಯಲ್ಲಿ ದಾಖಲೆ ನಿರ್ಮಾಣ ಆಗಿದೆ. ಟ್ರೇಲರ್ ನಂತರ ಹಾಡುಗಳು ಕೂಡ ಬರಲು ಸಿದ್ಧವಾಗಿವೆ. ಮುಂದೆ ಓದಿ...

  45 ಮಿಲಿಯನ್ ಹಿಟ್ಸ್

  45 ಮಿಲಿಯನ್ ಹಿಟ್ಸ್

  'ಕೆಜಿಎಫ್' ಚಿತ್ರದ ಟ್ರೇಲರ್ 45 ಮಿಲಿಯನ್ ಹಿಟ್ಸ್ ಅನ್ನು ಯೂ ಟ್ಯೂಬ್ ನಲ್ಲಿ ಪಡೆದಿದೆ ಎಂದು ಚಿತ್ರತಂಡ ತಿಳಿಸಿದೆ. ಕನ್ನಡ ಟ್ರೇಲರ್ 10 ಮಿಲಿಯನ್ + ತಮಿಳು ಟ್ರೇಲರ್ 3.4 ಮಿಲಿಯನ್ + ಹಿಂದಿ ಟ್ರೇಲರ್ 16 ಮಿಲಿಯನ್ + ತೆಲುಗು ಟ್ರೇಲರ್ 6.6 ಮಿಲಿಯನ್ ಹಾಗೂ ಮಲೆಯಾಳಂ ಟ್ರೇಲರ್ ಸೇರಿ ಒಟ್ಟು 45 ಮಿಲಿಯನ್ ವ್ಯೂವ್ಸ್ ಅನ್ನು ಟ್ರೇಲರ್ ಪಡೆದುಕೊಂಡಿದೆ. ಇದು ಕನ್ನಡ ಚಿತ್ರರಂಗದ ಪಾಲಿಗೆ ದಾಖಲೆಯಾಗಿದೆ.

  'ಕೆ ಜಿ ಎಫ್' ಮೊದಲ ಅಧ್ಯಾಯದ ಅವಧಿ ಎಷ್ಟು?

  ಕನ್ನಡಕ್ಕಿಂತ ಹಿಂದಿ ಟ್ರೇಲರ್ ಹಿಟ್

  ಕನ್ನಡಕ್ಕಿಂತ ಹಿಂದಿ ಟ್ರೇಲರ್ ಹಿಟ್

  ಕನ್ನಡಕ್ಕೆ ಹೋಲಿಸಿದರೆ ಹಿಂದಿ ಟ್ರೇಲರ್ ಹೆಚ್ಚು ಜನರನ್ನು ತಲುಪಿದೆ. ಹೌದು, ಇದು ಆಶ್ಚರ್ಯ ಎನಿಸಿದರೂ ನಿಜ. ಮೂಲತಃ ಕನ್ನಡ ಸಿನಿಮಾವಾಗಿರುವ 'ಕೆಜಿಎಫ್' 10 ಮಿಲಿಯನ್ + ಹಿಟ್ಸ್ ಪಡೆದುಕೊಂಡಿದ್ದರೆ, ಹಿಂದಿಯಲ್ಲಿ 16 ಮಿಲಿಯನ್ ಬಾರಿ ಟ್ರೇಲರ್ ಅನ್ನು ವೀಕ್ಷಣೆ ಮಾಡಲಾಗಿದೆ. ಬಾಲಿವುಡ್ ನಲ್ಲಿ ಚಿತ್ರದ ಕ್ರೇಜ್ ಎಷ್ಟಿದೆ ಎನ್ನುವುದು ಈ ಮೂಲಕ ತಿಳಿಯುತ್ತಿದೆ.

  ನಿಜವಾದ 'ಹವಾ' ಅಂದ್ರೆ ಇದು: ಆಡಿಯೋದಿಂದಲೇ 'ಕೋಟಿ' ಬಾಚಿದ ಅಣ್ತಮ್ಮ.!

  ನಾಳೆ ಮೊದಲ ಹಾಡು

  ನಾಳೆ ಮೊದಲ ಹಾಡು

  ಚಿತ್ರದ ಹಾಡುಗಳ ಮೇಲೆ ಕೂಡ ಸಾಕಷ್ಟು ನಿರೀಕ್ಷೆ ಇದೆ. 'ಕೆಜಿಎಫ್' ಮೊದಲ ಹಾಡು ನಾಳೆ ಬಿಡುಗಡೆಯಾಗುತ್ತಿದೆ. 'ಸಲಾಮ್ ರಾಕಿ ಭಾಯ್' ಎಂಬ ಹಾಡು ನಾಳೆ ಸಂಜೆ 6.30ಕ್ಕೆ ರಿಲೀಸ್ ಆಗುತ್ತಿದೆ. ರವಿ ಬಸ್ರೂರ್ ಸಿನಿಮಾಗೆ ಸಂಗೀತ ನೀಡಿದ್ದಾರೆ. ವಿ ನಾಗೇಂದ್ರ ಪ್ರಸಾದ್ ಈ ಹಾಡು ಬರೆದಿದ್ದಾರೆ. ವಿಜಯ್ ಪ್ರಕಾಶ್, ಸಂತೋಷ್ ವೆಂಕಿ ಸೇರಿದಂತೆ ಕೆಲವು ಗಾಯಕರು ಈ ಹಾಡು ಹಾಡಿದ್ದಾರೆ.

  '2.O' ಸಿನಿಮಾದ ನಡುವೆ ದರ್ಶನ ನೀಡಿದ 'KGF'!

  ಹೈದರಬಾದ್ ನಲ್ಲಿ ಅದ್ದೂರಿ ಕಾರ್ಯಕ್ರಮ

  ಹೈದರಬಾದ್ ನಲ್ಲಿ ಅದ್ದೂರಿ ಕಾರ್ಯಕ್ರಮ

  ಸದ್ಯ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಯಶ್ ಬ್ಯುಸಿ ಇದ್ದಾರೆ. ಹಿಂದಿ ವಾಹಿನಿ, ಪತ್ರಿಕೆ, ದೊಡ್ಡ ವೆಬ್ ಸೈಟ್ ಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಮುಂಬೈನ ಬಳಿಕ ಹೈದರಬಾದ್ ನಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ. ಫ್ರೀ ರಿಲೀಸ್ ಕಾರ್ಯಕ್ರಮ ಡಿಸೆಂಬರ್ 7 ರಂದು ಆಗಲಿದೆ.

  19 ದಿನ ಬಾಕಿ ಇದೆ

  ಅಂತೂ ರಾಕಿಂಗ್ ಸ್ಟಾರ್ ಸಿನಿಮಾ ನೋಡುವ ಭಾಗ್ಯ ಇನ್ನ 19 ದಿನಗಳಲ್ಲಿ ಸಿಗಲಿದೆ. ಪ್ರಶಾಂತ್ ನೀಲ್ ಈ ಚಿತ್ರದ ನಿರ್ದೇಶನ ಮಾಡಿದ್ದು, ಹೊಂಬಾಳೆ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣವಾಗಿದೆ. ಶ್ರೀನಿಧಿ ಶೆಟ್ಟಿ ಸಿನಿಮಾದ ನಾಯಕಿ ಆಗಿದ್ದಾರೆ. ಐದು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.

  English summary
  Rocking Star Yash starrer 'KGF' Movie trailer got 45 million views in youtube. The movie will be releasing on December 21st.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X