ಕೆಜಿಎಫ್ vs ಕೆಜಿಎಫ್: ಕನ್ನಡಕ್ಕಿಂತ ಪರಭಾಷೆಯಲ್ಲೇ ವೀವ್ಸ್ ಜಾಸ್ತಿ

Recommended Video

KGF Kannada Movie : ಕೆಜಿಎಫ್ ಟ್ರೈಲರ್ ಯುಟ್ಯೂಬ್ ನಲ್ಲಿ ಟ್ರೆಂಡಿಂಗ್ | ಎಷ್ಟು ಲೈಕ್ಸ್? ಎಷ್ಟು ಡಿಸ್ ಲೈಕ್ಸ್?

ಕೆಜಿಎಫ್ ಕನ್ನಡ ಸಿನಿಮಾ. ಈ ಚಿತ್ರಕ್ಕೆ ಕನ್ನಡದಲ್ಲೇ ಹೆಚ್ಚು ಪ್ರಚಾರ, ಅಬ್ಬರ, ಹವಾ ಎಲ್ಲವೂ ಇರುತ್ತೆ ಎಂಬ ನಿರೀಕ್ಷೆ ಮಾಡಲಾಗಿತ್ತು. ಈಗ ನೋಡಿದ್ರೆ, ಕನ್ನಡಕ್ಕಿಂತ ಪರಭಾಷೆಯಲ್ಲಿ ಕೆಜಿಎಫ್ ಟ್ರೆಂಡಿಂಗ್ ಆಗ್ತಿದೆ.

ಕೆಜಿಎಫ್ ಟ್ರೈಲರ್ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಬಟ್, ಕನ್ನಡಕ್ಕಿಂತ ಬೇರೆ ಭಾಷೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಟ್ರೈಲರ್ ವೀಕ್ಷಣೆರಯಲ್ಲತೂ ಒಂದಕ್ಕಿಂತ ಮತ್ತೊಂದು ಭಾಷೆಯಲ್ಲಿ ರೇಸ್ ಜೋರಾಗಿದೆ.

ನಮ್ಮದೇ ಜಾಸ್ತಿ, ನಮ್ಮದು ಹೆಚ್ಚು ಎನ್ನುತ್ತಾ ಪೈಪೋಟಿ ಸಾಗುತ್ತಿದೆ. ಸದ್ಯ, ಯೂಟ್ಯೂಬ್ ನಲ್ಲಿ ಕೆಜಿಎಫ್ ಟ್ರೈಲರ್ ಬಿಡುಗಡೆಯಾಗಿ 23 ಗಂಟೆಯಾಗಿದೆ. ಈ 23 ಗಂಟೆಯಲ್ಲಿ ಯಾವ ಭಾಷೆಯಲ್ಲಿ ಟ್ರೈಲರ್ ಎಷ್ಟು ವೀಕ್ಷಕರನ್ನ ಪಡೆದಿದೆ. ಎಷ್ಟು ಲೈಕ್ಸ್ ಇದೆ, ಎಷ್ಟು ಡಿಸ್ ಲೈಕ್ಸ್ ಇದೆ ಎಂದು ನೋಡೋಣ ಬನ್ನಿ....ಮುಂದೆ ಓದಿ.....

(ಶನಿವಾರ ಮಧ್ಯಾಹ್ನ 1.40ರ ಪ್ರಕಾರ)

ಟ್ರೆಂಡಿಂಗ್ ನಲ್ಲಿ ತೆಲುಗು ಕೆಜಿಎಫ್

ಟ್ರೆಂಡಿಂಗ್ ನಲ್ಲಿ ತೆಲುಗು ಕೆಜಿಎಫ್

ಕೆಜಿಎಫ್ ತೆಲುಗು ಟ್ರೈಲರ್ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ನಂಬರ್ ವನ್ ಸ್ಥಾನದಲ್ಲಿದೆ. ಆದ್ರೆ, ವೀವ್ಸ್ ನಲ್ಲಿ ಹಿಂದೆ ಇದೆ. 25.5 ಲಕ್ಷ ಮಂದಿ ತೆಲುಗು ಕೆಜಿಎಫ್ ಟ್ರೈಲರ್ ನೋಡಿದ್ದಾರೆ. 1.2 ಲಕ್ಷ ಲೈಕ್ಸ್ ಬಂದಿದ್ದರೇ, 3.3 ಸಾವಿರ ಡಿಸ್ ಲೈಕ್ಸ್ ಬಂದಿದೆ.

ಮೊದಲ ಸ್ಥಾನದಲ್ಲಿ ಹಿಂದಿ

ಮೊದಲ ಸ್ಥಾನದಲ್ಲಿ ಹಿಂದಿ

ಟಾಪ್ ಟ್ರೆಂಡಿಂಗ್ ನಲ್ಲಿ ಸ್ಥಾನ ಪಡೆಯದಿದ್ದರೂ ಅತಿ ಹೆಚ್ಚು ವೀಕ್ಷಕರನ್ನ ಹೊಂದಿರುವುದು ಹಿಂದಿ ಟ್ರೈಲರ್. 58.1 ಲಕ್ಷ ವೀಕ್ಷಕರನ್ನ ಹಿಂದಿ ಕೆಜಿಎಫ್ ಟ್ರೈಲರ್ ಹೊಂದಿದೆ. ಇದರಲ್ಲಿ 65 ಸಾವಿರ ಲೈಕ್ಸ್ ಮತ್ತು 2.3 ಸಾವಿರ ಡಿಸ್ ಲೈಕ್ಸ್ ಕೂಡ ಇದೆ.

ಎರಡನೇ ಸ್ಥಾನದಲ್ಲಿ ಕನ್ನಡ ಕೆಜಿಎಫ್

ಎರಡನೇ ಸ್ಥಾನದಲ್ಲಿ ಕನ್ನಡ ಕೆಜಿಎಫ್

ಹಿಂದಿ ಬಿಟ್ಟರೇ ಅತಿ ವೀಕ್ಷಕರನ್ನ ಹೊಂದಿರುವುದು ಕನ್ನಡ ಟ್ರೈಲರ್. 52.3 ಲಕ್ಷ ವೀಕ್ಷಕರ ಸಂಖ್ಯೆಯನ್ನ ಹೊಂದಿರುವ ಕನ್ನಡ ಕೆಜಿಎಫ್ ಟ್ರೈಲರ್, 24 ಸಾವಿರ ಲೈಕ್ಸ್ ಹೊಂದಿದೆ. ಮತ್ತು 9.9 ಸಾವಿರ ಡಿಸ್ ಲೈಕ್ಸ್ ಪಡೆದುಕೊಂಡಿದೆ.

ತಮಿಳಿನಲ್ಲಿ ಸ್ವಲ್ಪ ಕಮ್ಮಿ ಇದೆ

ತಮಿಳಿನಲ್ಲಿ ಸ್ವಲ್ಪ ಕಮ್ಮಿ ಇದೆ

ತೆಲುಗು, ಕನ್ನಡ, ಹಿಂದಿಗೆ ಹೋಲಿಸಿಕೊಂಡರೇ ತಮಿಳಿನಲ್ಲಿ ಕೆಜಿಎಫ್ ಹವಾ ಯೂಟ್ಯೂಬ್ ನಲ್ಲಿ ಸ್ವಲ್ಪ ಕಮ್ಮಿ ಇದೆ. ಸದ್ಯಕ್ಕೆ 6.8 ಲಕ್ಷ ವೀಕ್ಷಕರನ್ನ ಹೊಂದಿರುವ ತಮಿಳು ಕೆಜಿಎಫ್ 44 ಸಾವಿರ ಲೈಕ್ಸ್ ಹೊಂದಿದೆ. ಹಾಗೂ ಕೇವಲ 948 ಡಿಸ್ ಲೈಕ್ಸ್ ಪಡೆದುಕೊಂಡಿದೆ.

ಕೊನೆಯಲ್ಲಿ ಮಲಯಾಳಂ

ಕೊನೆಯಲ್ಲಿ ಮಲಯಾಳಂ

ಉಳಿದ ಎಲ್ಲ ಭಾಷೆಗಳಿಗೂ ಹೋಲಿಸಿಕೊಂಡರೇ ಮಲಯಾಳಂನಲ್ಲಿ ಕೆಜಿಎಫ್ ಹವಾ ಕಮ್ಮಿ ಇದೆ. 4.9 ಲಕ್ಷ ವೀಕ್ಷಕರನ್ನ ಹೊಂದಿರುವ ಮಲಯಾಳಂ ಕೆಜಿಎಫ್ 37 ಸಾವಿರ ಲೈಕ್ಸ್ ಹೊಂದಿದೆ ಮತ್ತು 867 ಡಿಸ್ ಲೈಕ್ಸ್ ಪಡೆದುಕೊಂಡಿದೆ. ಈ ಮೂಲಕ ಕೆಜಿಎಫ್ ರೇಸ್ ನಲ್ಲಿ ಮಲಯಾಳಂ ಕೊನೆಯ ಸ್ಥಾನದಲ್ಲಿದೆ.

More from Filmibeat

English summary
Kannada actor yash starrer kgf movie trailer released in five languages. Now, telugu trailer become a number 1 in youtube trending.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X