twitter
    For Quick Alerts
    ALLOW NOTIFICATIONS  
    For Daily Alerts

    ರೆಸ್ಟೋರೆಂಟ್ ಒಳಗೆ KGF ನರಾಚಿ ಲೋಕ: 'ಕನ್ನಡಿಗಾಸ್ ಗೋಲ್ಡನ್ ಫುಡ್' ಹೋಟೆಲ್ ವಿಶೇಷತೆಗಳೇನು?

    |

    'KGF' ಸಿನಿಮಾ ಅಂದಾಕ್ಷಣ ಬರೀ ರಾಕಿಭಾಯ್, ಗರುಡ, ಅಧೀರ ಮಾತ್ರವಲ್ಲ, ನರಾಚಿ ಚಿನ್ನದ ಗಣಿ ಕೂಡ ನೆನಪಾಗುತ್ತದೆ. ಇದೀಗ ಇದೇ ರೀತಿಯ ನರಾಚಿ ಸಾಮ್ರಾಜ್ಯ ಬೆಂಗಳೂರಿನ ಸಹಕಾರ ನಗರದಲ್ಲೂ ತಲೆಯೆತ್ತಿದೆ. ಆದರೆ ಇಲ್ಲಿ ಚಿನ್ನದ ಬದಲು ಊಟ ಸಿಗುತ್ತದೆ.

    ಪ್ರಶಾಂತ್‌ ನೀಲ್ ಕಟ್ಟಿದ ರಾಕಿಭಾಯ್ ಕಥೆಗೆ ನರಾಚಿ ಸಾಮ್ರಾಜ್ಯವೇ ಕೇಂದ್ರಬಿಂದುವಾಗಿತ್ತು. ಪಾಳುಬಿದ್ದ 'KGF' ಗಣಿ ಜಾಗದಲ್ಲೇ ಆರ್ಟ್‌ ಡೈರೆಕ್ಟರ್ ಶಿವಕುಮಾರ್ ಅದ್ಭುತ ಸೆಟ್‌ ಹಾಕಿ ಹುಬ್ಬೇರಿಸುವಂತಹ ಲೋಕ ಸೃಷ್ಟಿಸಿದರು. ಇದೀಗ ಇದೇ ಮಾದರಿಯಲ್ಲಿ ಒಂದು ರೆಸ್ಟೋರೆಂಟ್ ತಲೆ ಎತ್ತಿದೆ. ಆ ರೆಸ್ಟೋರೆಂಟ್ ಹೆಸರು ಕೂಡ 'KGF'. ಆದರೆ ಇದು ಕೋಲಾರ್ ಗೋಲ್ಡ್ ಫೀಲ್ಡ್ಸ್ ಅಲ್ಲ. ಬದಲಿಗೆ 'ಕನ್ನಡಿಗಾಸ್ ಗೋಲ್ಡನ್ ಫುಡ್'. ಸಿನಿಮಾದಲ್ಲಿ 'ನರಾಚಿ', ಗೋಲ್ಡ್ ಮೈನಿಂಗ್ ಕಾರ್ಪೋರೇಷನ್ ಆಗಿತ್ತು. ಆದರೆ ಇದು ಫುಡ್ ಮೈನಿಂಗ್ ಕಾರ್ಪೋರೇಷನ್.

    "KGF" ಕಾನ್ಫಿಡೆನ್ಸ್, 'ಕಾಂತಾರ' ಎಮೋಷನ್.. ಪ್ರಾಮಾಣಿಕ ಪ್ರಯತ್ನಕ್ಕೆ ಯಶಸ್ಸು ಶತಸಿದ್ಧ": ವಿ. ರವಿಚಂದ್ರನ್

    ಶ್ರೀನಿವಾಸ್ ಎಂಬುವವರು ಸಹಕಾರ ನಗರದ ಸ್ಟೆರ್ಲಿಂಗ್ ಹೈಟ್ಸ್ ಅಪಾರ್ಟ್‌ಮೆಂಟ್‌ ಪಕ್ಕ 'KGF' ರೆಸ್ಟೋರೆಂಟ್ ತೆರೆದಿದ್ದಾರೆ. ಥೇಟ್ ಕೆಜಿಎಫ್ ಚಿತ್ರದ ನರಾಚಿ ಸಾಮ್ರಾಜ್ಯವನ್ನು ನೆನಪಿಸುವಂತೆ ರೆಸ್ಟೋರೆಂಡ್ ಹೊರಾಂಗಣ, ಒಳಾಂಗಣ ವಿನ್ಯಾಸ ಮಾಡಲಾಗಿದೆ.

    ನರಾಚಿಗೆ ಹೋದಂತಹ ಅನುಭವ

    ನರಾಚಿಗೆ ಹೋದಂತಹ ಅನುಭವ

    'ಕನ್ನಡಿಗಾಸ್ ಗೋಲ್ಡನ್ ಫುಡ್' ರೆಸ್ಟೋರೆಂಟ್ ಸಹಕಾರ ನಗರದಲ್ಲಿ ಓಡಾಡುವವರನ್ನು ಕೈ ಬೀಸಿ ಕರೆಯುತ್ತಿದೆ. ನರಾಚಿ ಕೋಟೆಯಂತಹ ರೆಸ್ಟೋರೆಂಟ್ ಮುಂಭಾಗ ನೋಡಿದಾಗಲೇ ಒಳಗೆ ಹೋಗಬೇಕು ಅನ್ನಿಸದೇ ಇರುವುದಿಲ್ಲ. ಇನ್ನು ಒಳ ಹೊಕ್ಕರೆ ಚಿನ್ನದ ಗಣಿಯ ಒಳಗೆ ಹೋಗುವ ಅನುಭವ ಆಗುತ್ತದೆ. ಚಿತ್ರದಲ್ಲಿ ತೋರಿಸಿದ್ದಂತಹ ಯಂತ್ರಗಳು, ಚಿನ್ನದ ಗಟ್ಟಿಗಳ ಮಾದರಿ ರಚನೆ, ಹೆಲಿಕ್ಯಾಪ್ಟರ್ ಎಲ್ಲರೂ ಕಾಣಸಿಗುತ್ತದೆ.

    ಪಾರ್ಟಿ ಮಾಡಲು ಒಳ್ಳೆ ಸ್ಪಾಟ್

    ಪಾರ್ಟಿ ಮಾಡಲು ಒಳ್ಳೆ ಸ್ಪಾಟ್

    ಫ್ಯಾಮಿಲಿ ಸಮೇತ ಎಲ್ಲರೂ ಹೋಗಿ ಈ ರೆಸ್ಟೋರೆಂಟ್‌ನಲ್ಲಿ ಭೂರಿ ಭೋಜನ ಸವಿಯಬಹುದು. ವೆಜ್‌, ನಾನ್‌ ವೆಜ್‌ ಶೈಲಿಯ ಊಟ ಲಭ್ಯವಿದೆ. ನಾಟಿ ಸ್ಟೈಲ್, ಚೈನೀಸ್, ಸೌತ್‌ ಇಂಡಿಯನ್‌, ನಾರ್ತ್‌ ಇಂಡಿಯನ್ ಫುಡ್ ಸಿಗುತ್ತದೆ. ಉತ್ತಮ ಆಸನದ ವ್ಯವಸ್ಥೆ, ಥ್ರಿಲ್ಲಿಂಗ್ ನೀಡುವ ಅನುಭವ ಸಿಗುತ್ತದೆ. ಇನ್ನು ಫ್ರೆಂಡ್ಸ್ ಜೊತೆ ಪಾರ್ಟಿ ಮಾಡಲು, ಬರ್ತ್‌ಡೇ ಕೇಕ್ ಕತ್ತರಿಸಿ ಎಂಜಾಯ್ ಮಾಡಲು ಒಳ್ಳೆ ಸ್ಪಾಟ್ ಅಂತಲೇ ಹೇಳಬಹುದು.

    ತಮಿಳುನಾಡಿನಲ್ಲಿ ತಲೆ ಎತ್ತಿದ್ದ ನರಾಚಿ

    ತಮಿಳುನಾಡಿನಲ್ಲಿ ತಲೆ ಎತ್ತಿದ್ದ ನರಾಚಿ

    ಪ್ರಶಾಂತ್ ನೀಲ್ ನಿರ್ದೇಶನದ 'KGF' ಸಿನಿಮಾ 5 ವರ್ಷಗಳ ಹಿಂದೆ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಪರಭಾಷಿಕರು ಕೂಡ ಸಿನಿಮಾ ನೋಡಿ ಫಿದಾ ಆಗಿದ್ದರು. 'KGF' ಸರಣಿ ಸಿನಿಮಾ ಹೊರ ರಾಜ್ಯಗಳಲ್ಲೂ ಭರ್ಜರಿ ಕಲೆಕ್ಷನ್ ಮಾಡಿತ್ತು. ಯಶ್‌ಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿಯಾಗುವಂತೆ ಮಾಡಿತ್ತು. ಇತ್ತೀಚೆಗೆ ಗಣೇಶ ಹಬ್ಬದ ಸಂಭ್ರಮದಲ್ಲಿ ತಮಿಳುನಾಡಿನಲ್ಲಿ ನರಾಚಿ ಕೋಟೆ ತಲೆ ಎತ್ತಿತ್ತು. ಚಿತ್ರದಲ್ಲಿ ತೋರಿಸಿದ್ದಂತೆ ನರಾಚಿ ಕೋಟಿ ಮಾದರಿಯ ಸೆಟ್‌ ನಿರ್ಮಿಸಿ, ಅಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಅಭಿಮಾನಿಗಳು ಪೂಜಿಸಿದ್ದರು.

    ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ್ದ 'KGF'

    ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ್ದ 'KGF'

    ರಾಕಿಂಗ್ ಸ್ಟಾರ್ ಯಶ್ ನಟನೆಯ 'KGF' ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ. ಸರಣಿಯ ಮೊದಲ ಸಿನಿಮಾ 250 ಕೋಟಿ ಕಲೆಕ್ಷನ್ ಮಾಡಿದರೆ 2ನೇ ಸಿನಿಮಾ 1250 ಕೋಟಿ ರೂ. ಗಳಿಸಿ ಎಲ್ಲರ ಹುಬ್ಬೇರಿಸಿತ್ತು. ಈ ಸಿನಿಮಾ ಸೃಷ್ಟಿಸಿದ ಸಂಚಲನ, ಕ್ರೇಜ್ ಅಷ್ಟಿಷ್ಟಲ್ಲ. ಇದೀಗ ಈ ಚಿತ್ರದಿಂದ ಪ್ರೇರಣೆಗೊಂಡು ಈ ರೀತಿ 'KGF' ರೆಸ್ಟೋರೆಂಟ್ ನಿರ್ಮಾಣ ಮಾಡಲಾಗಿದೆ. ಸಿನಿಮಾ ಕ್ರೇಜ್ ಎಂಥದ್ದು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

    English summary
    KGF Narachi Themed Restaurant Opened in Bengaluru Sahakara nagar. The film has completed more than 6 months now, but the craze is refusing to slow down. now Kannadiga's Golden Food restaurant grabbing all the attention.
    Thursday, November 24, 2022, 12:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X