For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್2 ರಮಿಕಾ ಸೇನ್‌ಗೆ ಹುಟ್ಟು ಹಬ್ಬದ ಸಂಭ್ರಮ!

  |

  ನಟಿ ರವೀನಾ ಟಂಡನ್‌ ಅವರನ್ನು ಸದ್ಯ ಕನ್ನಡಿಗರು ರಮಿಕಾ ಸೇನ್‌ ಅಂತಲೇ ಕರೆಯುತ್ತಿದ್ದಾರೆ. ಇದಕ್ಕೆ ಕಾರಣ ಕನ್ನಡದ ಕೆಜಿಎಫ್2 ಚಿತ್ರ. ಈ ಚಿತ್ರದ ಮೂಲಕವೇ ರವೀನಾ ಟಂಡನ್ ಇತ್ತೀಚಿಗೆ ಕನ್ನಡಿಗರಿಗೆ ತುಂಬಾ ಹತ್ತಿರವಾಗಿದ್ದಾರೆ. ಇಂದು ರವೀನಾ ಬಗ್ಗೆ ಮಾತನಾಡಲು ಕಾರಣ ರವೀನಾ ಹುಟ್ಟುಹಬ್ಬ. ಹೌದು ಇಂದು ರವೀನಾ ಟಂಡನ್ 47ನೇ ವರ್ಷದ ಹುಟ್ಟು ಹಬ್ಬವನ್ನ ಆಚರಿಸಿ ಕೊಳ್ಳುತ್ತಿದ್ದಾರೆ.

  ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಮಸ್ತು, ಮಸ್ತು ಹುಡುಗಿಯ ರಂಗು!

  ಮಸ್ತ್‌, ಮಸ್ತ್‌ ಹುಡುಗಿ ಅಂತಲೇ ಬಾಲಿವುಡ್‌ನಲ್ಲಿ ಫೇಮಸ್ ಆಗಿದ್ದ ರವೀನಾ ಅವರನ್ನು ಕನ್ನಡದ ರಿಯಲ್‌ ಸ್ಟಾರ್‌ ಉಪೇಂದ್ರ ಅವರು ಕನ್ನಡಕ್ಕೆ ಕರೆ ತಂದರು. ಮೊದಲ ಕನ್ನಡದ ಚಿತ್ರದಲ್ಲಿ ಯಶಸ್ಸು ಸಿಕ್ಕರು ಕೂಡ ರವೀನಾ ಕನ್ನಡದ ಮತ್ತೆ ಸಿನಿಮಾ ಮಾಡುವ ಮನಸ್ಸು ಮಾಡಿಲ್ಲ. ಹಾಗಾಗಿ ಇಷ್ಟು ದಿನಗಳ ಕಾಲ ರವೀನಾ ಕನ್ನಡ ಸಿನಿಮಾದಿಂದ ದೂರ ಉಳಿದಿದ್ದರು. ರವೀನಾ ಈಗ ಇಪ್ಪತ್ತು ವರ್ಷಗಳ ಬಳಿಕ ಮತ್ತೆ ಕೆಜಿಎಫ್ ಸಿನಿಮಾದ ಮೂಲಕ ರಮಿಕಾ ಸೇನ್ ಆಗಿ ಕನ್ನಡಕ್ಕೆ ಕಾಲಿಟ್ಟಿದ್ದಾರೆ.

  ಕೆಜಿಎಫ್ ತಂಡದಿಂದ ರವೀನಾಗೆ ಶುಭಾಯಯ!

  ಕನ್ನಡದ ಕೆಜಿಫ್ ಸಿನಿಮಾನೆ ಒಂದು ದೊಡ್ಡ ಪ್ರಪಂಚ. ಈ ಪ್ರಂಚಕ್ಕೆ ಎಂಟ್ರಿ ಕೊಟ್ಟ ರವೀನಾ ಮತ್ತಷ್ಟು ಕೆಜಿಎಫ್ ತೂಕವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಕೆಜಿಎಫ್2 ಟೀಸರ್‌ನಲ್ಲಿ ರವೀನ ಅಬ್ಬರಿಸಿರುವ ರೀತಿ, ಆಕೆಯ ಪಾತ್ರದ ಮೇಕೆ ಎಲ್ಲಿಲ್ಲದ ನಿರೀಕ್ಷೆ ಹುಟ್ಟು ಹಾಕಿದೆ. ಇನ್ನೂ ಈಗಾಗಲೇ ಚಿತ್ರದ ಮೇಕಂಗ್‌ ಸ್ಟಿಲ್‌ಗಳನ್ನೂ ಕೂಡ ಹೊರ ಬಂದಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ರವೀನಾಗೆ ಕೆಜಿಎಫ್ ಟೀಮ್‌ ಶುಭಕೋರಿದೆ. ನಿರ್ದೇಶಕ ಪ್ರಶಾಂತ್‌ ನೀಲ್‌ "ನಿಮ್ಮನ್ನ ಹೊರತು ಪಡಿಸಿ ಈ ರೀತಿ ರಮಿಕಾ ಪಾತ್ರಕ್ಕೆ ಯಾರೂ ಜೀವತುಂಬಲು ಸಾಧ್ಯವಿಲ್ಲ" ಎಂದು ಟ್ವೀಟ್‌ ಮಾಡುವ ಮೂಲಕ ಶುಭಕೋರಿದ್ದಾರೆ. ಜೊತೆಗೆ ಹೊಂಬಾಳೆ ನಿರ್ಮಾಣ ಸಂಸ್ಥೆ ಕೂಡ ರವೀನಾ ಟಂಡನ್‌ಗೆ ಶುಭಕೋರಿದೆ.

  ರವೀನಾ ಟಂಡನ್ ರೋಚಕ ಸಿನಿ ಜರ್ನಿ!

  ರವೀನಾ ಟಂಡನ್ ತಮ್ಮ ಸಿನಿ ಕೆರಿಯರ್‌ನಲ್ಲಿ ಸಾಕಷ್ಟು ಸಿನಿಮಾಗಳನ್ನು ನೀಡಿದ್ದಾರೆ. ಹೆಚ್ಚಿನದಾಗಿ ಗ್ಲಾಮರಸ್ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿ ಕೊಂಡಿದ್ದಾರೆ. ಹಿಂದಿ, ತೆಲುಗು ಹಾಗೂ ಕನ್ನಡದಲ್ಲಿ ನಟಿಸಿರುವ ರವಿನಾ ಟಂಡನ್ ಒಂದು ಕಾಲದ ಟಾಪ್ ನಟಿ. ಮೊದಲ ಚಿತ್ರದ ಮೂಲಕವೇ ರವಿನಾ ಟಂಡನ್ ಅಭಿಮಾನಿಗಳ ಹೃದಯದಲ್ಲಿ ಜಾಗ ಗಿಟ್ಟಿಸಿಕೊಂಡರು. 1991ರ ಪತ್ತರ್ ಕೆ ಪೂಲ್ ಚಿತ್ರದ ಮೂಲಕ ರವೀನಾ ತಮ್ಮ ಸಿನಿ ಜರ್ನಿಯನ್ನ ಶುರು ಮಾಡಿದ್ದರು. ನಂತರ ಮೋಹ್ರಾ, ಅಂದಾಜ್‌ ಅಪ್ನಾ ಅಪ್ನಾ, ದಿಲ್ವಾಲೆ ದುಲ್ಹೆ ರಾಜ ಸೇರಿದಂತೆ ಹಲವು ಹಿಟ್‌ ಚಿತ್ರಗಳನ್ನು ಕೊಟ್ಟಿದ್ದಾರೆ.

  ರವೀನಾ ಕುಟುಂಬ ಸಿನಿಮಾ ಕುಟುಂಬ ಆಗಿದ್ದರಿಂದ ಆಕೆಗೆ ಬಣ್ಣದ ಎಂಟ್ರಿ ಕಷ್ಟವಾಗಿರಲಿಲ್ಲ. 17 ವರ್ಷ ಇದ್ದಾಗಲೆ ರವೀನಾ ಟಂಡನ್ ಬಣ್ಣದಲೋಕಕ್ಕೆ ಎಂಟ್ರಿ ಕೊಟ್ಟರು. ಇತ್ತೀಚಿಗಷ್ಟೇ ರವೀನಾ ತಮ್ಮ ಸಿನಿಮಾ ಜರ್ನಿಯ 23ನೇ ವರ್ಷದ ಸಂಭ್ರಮವನ್ನು ಆಚರಿಸಿಕೊಂಡಿದ್ದರು.

  ಕೆಲ ಸಮಯ ಸಿನಿಮಾರಂಗದಿಂದ ರವೀನಾ ಅಂತರ ಕಾಯ್ದು ಕೊಂಡಿದ್ರು. ತಮ್ಮ ಕುಟುಂಬದ ಜತೆ ಕಾಲ ಕಳೆಯಲು ಸಿನಿರಂಗದಿಂದ ದೂರಾದ್ರು. ಆದ್ರೆ ಮತ್ತೆ 2017ರಲ್ಲಿ ಬಂದ "ಮಾತೃ" ಸಿನಿಮಾದಲ್ಲಿ ರವೀನ ಅದ್ಭುತ ಅಭಿನಯ ನೀಡಿದರು. ಈಗಲೂ ಸಹ ಸಿನಿಮಾಗಳಲ್ಲಿ ನಟಿಸುತ್ತಿರುವ ರವೀನಾ ಕನ್ನಡಕ್ಕೆ ಕೆಜಿಎಫ್ 2 ಚಿತ್ರದ ಮೂಲಕ ರಮಿಕಾ ಸೇನ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ ಕ್ನನಡ ಮಾತ್ರವಲ್ಲದೇ ವಿಶ್ವಾದ್ಯಂತ ರವೀನಾ ಅಭಿನಯದ ಕೆಜಿಎಫ್ ರಮಿಕಾ ಸೇನ್ ಪಾತ್ರವನ್ನ ಕಾಣ್ತುಂಬಿಕೊಳ್ಳಲು ಸಿನಿಪ್ರಿಯರು ಕಾಯುತ್ತಿದ್ದಾರೆ.

  English summary
  Kgf2 Director Prashanth Neel Special Wishes Actress Raveena Tandon
  Wednesday, October 27, 2021, 9:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X