ಬಾಹುಬಲಿ 2 ಕನ್ನಡಕ್ಕೆ ಡಬ್ ಆಗಲಿ- ಟ್ವೀಟ್ ಅಭಿಯಾನ

ಬಾಹುಬಲಿ- ದಿ ಕನ್ ಕ್ಲೂಸನ್' ಸಿನಿಮಾ ತೆಲುಗು, ತಮಿಳು, ಹಿಂದಿ ಮತ್ತು ಮಲೆಯಾಳಂ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ರಾಜಮೌಳಿ ನಿರ್ದೇಶನದ ಈ ಚಿತ್ರ ಕನ್ನಡದಲ್ಲಿ ಡಬ್ ಆಗಲಿ ಎಂದು ಅಭಿಯಾನ ಹಮ್ಮಿಕೊಳ್ಳಲಾಗಿದೆ.

By Mahesh

'ಬಾಹುಬಲಿ- ದಿ ಕನ್ ಕ್ಲೂಸನ್' ಸಿನಿಮಾ ತೆಲುಗು, ತಮಿಳು, ಹಿಂದಿ ಮತ್ತು ಮಲೆಯಾಳಂ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ರಾಜಮೌಳಿ ನಿರ್ದೇಶನದ ಈ ಚಿತ್ರ ಕನ್ನಡದಲ್ಲಿ ಡಬ್ ಆಗಲಿ ಎಂದು ಅಭಿಯಾನವನ್ನು ಕನ್ನಡ ಗ್ರಾಹಕರ ಕೂಟ ಹಮ್ಮಿಕೊಂಡಿದೆ.

ಫೆಬ್ರವರಿ 16,2017 ರಂದು ಬೆಳಗ್ಗೆಯಿಂದ ಸಂಜೆ ತನಕ #Bahubali2inKannada ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಕನ್ನಡ ಗ್ರಾಹಕರ ಕೂಟ ಟ್ವಿಟ್ಟರ್ ನಲ್ಲಿ ಅಭಿಯಾನ ನಡೆಸಲಿದೆ. ಆಸಕ್ತರು ಪಾಲ್ಗೊಂಡು ಡಬ್ಬಿಂಗ್ ಪರ ತಮ್ಮ ದನಿಗೂಡಿಸಬಹುದು.

KGP twitter campaign demand for Dubbing of Bahubali 2 in Kannada

ಹಿಂದಿ ಡಬ್ಬಿಂಗ್ ರೈಟ್ಸ್ ಅನ್ನು ಕರಣ್ ಜೋಹರ್ ಅವರು 120 ಕೋಟಿಗೆ ಖರೀದಿಸಿದ್ದು, ಧರ್ಮಾ ಪ್ರೊಡಕ್ಷನ್ ಅಡಿಯಲ್ಲಿ ಚಿತ್ರದ ಹಿಂದಿ ಡಬ್ ಅವತರಣಿಕೆಯನ್ನು ಬಿಡುಗಡೆ ಮಾಡುತ್ತಿದ್ದಾರೆ. ಏಪ್ರಿಲ್ 28ರಂದು 'ಬಾಹುಬಲಿ-2' ಚಿತ್ರ ಏಕಕಾಲದಲ್ಲಿ ನಾಲ್ಕು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ಪ್ರಭಾಸ್, ಅನುಷ್ಕಾ ಶೆಟ್ಟಿ, ತಮನ್ನಾ, ರಾಣಾ ದಗ್ಗುಬಾತಿ ಸೇರಿದಂತೆ ಬಹು ತಾರಾಗಣದ ಈ ಚಿತ್ರ ಬಿಡುಗಡೆಗೂ ಮುನ್ನವೇ 500 ಕೋಟಿ ರು ಗಳಿಕೆ ಮಾಡಿ ದಾಖಲೆ ಬರೆದಿದೆ. ಈ ಬಹುಕೋಟಿ ಚಿತ್ರವನ್ನು ಕನ್ನಡದ ಪ್ರೇಕ್ಷಕರು ತಮ್ಮ ಭಾಷೆಯಲ್ಲೇ ನೋಡಿ ಆನಂದಿಸಲಿ ಎಂದು ಗ್ರಾಹಕರ ಕೂಟ ಬಯಸಿದೆ.

More from Filmibeat

English summary
Rajamouli's 'Baahubali 2' will be released in four languages Telugu, Tamil, Hindi and Malayalam. Kannada Grahara Koota is demanding dubbing in Kannada. A twitter campaign #Bahubali2InKannada is scheduled on Feb 16,2017 in support of dubbing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X