»   » 'ಖೈದಿ ನಂ.150' ಬಿಡುಗಡೆ: ಮೈಸೂರಿನ ಚಿತ್ರಮಂದಿರದಲ್ಲಿ ಹಬ್ಬ

'ಖೈದಿ ನಂ.150' ಬಿಡುಗಡೆ: ಮೈಸೂರಿನ ಚಿತ್ರಮಂದಿರದಲ್ಲಿ ಹಬ್ಬ

Posted By:
Subscribe to Filmibeat Kannada

ಟಾಲಿವುಡ್ ನ ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಬಹುನಿರೀಕ್ಷಿತ 150ನೇ ಚಿತ್ರ 'ಖೈದಿ ನಂ.150' ಇಂದು ಗ್ರ್ಯಾಂಡ್ ರಿಲೀಸ್ ಆಗಿ, ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಮೈಸೂರಿನ ಪದ್ಮಾ ಚಿತ್ರಮಂದಿರಲ್ಲಂತೂ 'ಖೈದಿ ನಂ.150' ಚಿತ್ರವನ್ನ ಚಿರಂಜೀವಿ ಅಭಿಮಾನಿಗಳು ಕೇಕ್ ಕತ್ತರಿಸಿ, ಪಟಾಕಿ ಸಿಡಿಸುವ ಮೂಲಕ ಸಂಭ್ರಮದಿಂದ ಬರಮಾಡಿಕೊಂಡರು.

'ಖೈದಿ ನಂ.150' ಚಿತ್ರವನ್ನ ಫಸ್ಟ್ ಡೇ ಫಸ್ಟ್ ಶೋ ನೋಡಲೇಬೇಕು ಎಂಬ ಕಾರಣಕ್ಕೆ ಬೆಳಂಬೆಳಗ್ಗೆಯೇ ಅಭಿಮಾನಿಗಳು ಸಾಲುಗಟ್ಟಿ ನಿಂತಿದ್ದರು.['ಖೈದಿ ನಂ-150' ಟ್ವಿಟ್ಟರ್ ವಿಮರ್ಶೆ: ಬಾಸ್ ಈಸ್ ಬ್ಯಾಕ್ !]

Khaidi No.150 Grand release in Mysuru

ಬರೋಬ್ಬರಿ 10 ವರ್ಷಗಳ ನಂತರ ತೆರೆಮೇಲೆ ಚಿರಂಜೀವಿ ಮಿಂಚಿರುವುದರಿಂದ ಸಹಜವಾಗಿ ಎಲ್ಲೆಡೆ ಕ್ರೇಝ್ ತುಸು ಜಾಸ್ತಿನೇ ಇದೆ.

''ಹಲವು ವರ್ಷಗಳ ನಂತರ ತೆರೆಮೇಲೆ ಮೆಗಾ ಸ್ಟಾರ್ ಚಿರಂಜೀವಿಯನ್ನು ನೋಡಲು ನಾವು ಉತ್ಸುಕರಾಗಿದ್ದೇವೆ. ಈ ಚಿತ್ರ ಗ್ಯಾರೆಂಟಿ 100 ಡೇಸ್ ಓಡುತ್ತೆ'' ಅಂತ ಅಭಿಮಾನಿಯೊಬ್ಬರು 'ಒನ್ಇಂಡಿಯಾ' ಜೊತೆ ಹರ್ಷ ವ್ಯಕ್ತಪಡಿಸಿದರು.

Khaidi No.150 Grand release in Mysuru

ವಿ.ವಿ.ವಿನಾಯಕ್ ನಿರ್ದೇಶನದ, ಚಿರಂಜೀವಿ ಅಭಿನಯದ 150ನೇ ಚಿತ್ರ 'ಖೈದಿ ನಂ.150'. ತಮಿಳಿನ ಬ್ಲಾಕ್ ಬಸ್ಟರ್ 'ಕತ್ತಿ' ಸಿನಿಮಾದ ರೀಮೇಕ್ ಆಗಿರುವ 'ಖೈದಿ ನಂ.150' ಚಿತ್ರದಲ್ಲಿ ಚಿರಂಜೀವಿ ಜೊತೆ ಕಾಜಲ್ ಅಗರ್ವಾಲ್ ನಾಯಕಿ ಆಗಿ ಮಿಂಚಿದ್ದಾರೆ. 'ಖೈದಿ ನಂ.150' ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ.

English summary
Chiranjeevi Mysuru fans welcomed 'Khaidi No.150' First day First show by cutting cake and bursting crackers. Khaidi No.150 has hit the screens today (January 11th).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada