»   » ಡಾ ರಾಜ್ ಮೊಮ್ಮಗನಿಗಾಗಿ ಬಂದ 'ರಣಧೀರ'ನ ಬೆಡಗಿ

ಡಾ ರಾಜ್ ಮೊಮ್ಮಗನಿಗಾಗಿ ಬಂದ 'ರಣಧೀರ'ನ ಬೆಡಗಿ

Posted By:
Subscribe to Filmibeat Kannada
ಮತ್ತೆ ಸ್ಯಾಂಡಲ್ವುಡ್ ಗೆ ಮರಳಿದ್ರು ಖುಷ್ಬೂ | Filmibeat Kannada

ರಾಯಲ್ ಸ್ಟಾರ್ ವಿನಯ್ ರಾಜ್ ಕುಮಾರ್ ಅಭಿನಯದ 'ಅಪ್ಪ ಅಮ್ಮ ಪ್ರೀತಿ' ಸಿನಿಮಾದ ಲೊಕೇಷನ್ ಮತ್ತು ಕಲಾವಿದರ ಆಯ್ಕೆ ಪ್ರಕ್ರಿಯೆ ಜೋರಾಗಿದೆ. ಕೇರಳದ ಸುತ್ತಾ ಮುತ್ತಾ ಚಿತ್ರೀಕರಣಕ್ಕಾಗಿ ಜಾಗ ಅಂತಿಮಗೊಳಿಸಿರುವ ನಿರ್ದೆಶಕ ಶ್ರೀಧರ್ ಚಿತ್ರಕ್ಕೆ ಶರತ್ ಕುಮಾರ್ ಅವರನ್ನ ಪೋಷಕ ಪಾತ್ರ ನಿರ್ವಹಿಸಲು ಸೆಲೆಕ್ಟ್ ಮಾಡಿಕೊಂಡಿದ್ದಾರೆ.

ಶರತ್ ಕುಮಾರ್ ಜೋಡಿಯಾಗಿ ನಟಿ ಖುಷ್ಬೂ ಅಭಿನಯ ಮಾಡುತ್ತಿದ್ದು ಈಗಾಗಲೇ ಖುಷ್ಬೂ ಕಥೆ ಕೇಳಿ ವಿನಯ್ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ನಾಯಕಿಯಾಗಿ ಸಿನಿಮಾದಲ್ಲಿ ಮಾನಸ ರಾಧಕೃಷ್ಣನ್ ಕಾಣಿಸಿಕೊಳ್ಳುತ್ತಿದ್ದಾರೆ.

ಡಾ.ರಾಜ್ ಮೊಮ್ಮಗನಿಗಾಗಿ ಬೆಂಗಳೂರಿಗೆ ಬಂದ ಮಲಯಾಳಿ ಚೆಲುವೆ ಈಕೆ!

Khushboo playing supporting role in Appa Amma Preethi movie

'ಮ್ಯಾಜಿಕ್ ಅಜ್ಜಿ' ಸಿನಿಮಾದ ನಂತರ ನಟಿ ಖುಷ್ಬೂ ಯಾವುದೇ ಸಿನಿಮಾದಲ್ಲಿ ಸಂಪೂರ್ಣ ಪಾತ್ರ ನಿರ್ವಹಿಸಿರಲಿಲ್ಲ. ಒಂದೆರೆಡು ಸಿನಿಮಾದಲ್ಲಿ ಚಿಕ್ಕ ಪುಟ್ಟ ಪಾತ್ರವನ್ನ ನಿರ್ವಹಿಸಿದ್ದರು. ಆದರೆ 'ಅಪ್ಪ ಅಮ್ಮ ಪ್ರೀತಿ' ಚಿತ್ರದ ಕಥೆ ಕೇಳಿ ವಿನಯ್ ತಾಯಿಯ ಪಾತ್ರದಲ್ಲಿ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ದೊಡ್ಡಪ್ಪ ಶಿವಣ್ಣ ಜೊತೆಗೆ ತೆರೆಹಂಚಿಕೊಳ್ಳಲಿದ್ದಾರೆ ವಿನಯ್ ರಾಜ್ ಕುಮಾರ್

ಸದ್ಯ, 'ಅನಂತು ವರ್ಸಸ್ ನುಸ್ರತ್' ಸಿನಿಮಾದಲ್ಲಿ ವಿನಯ್ ರಾಜ್ ಕುಮಾರ್ ಬ್ಯುಸಿ ಆಗಿದ್ದು ಅದರ ಚಿತ್ರೀಕರಣ ಮುಗಿಸಿದ ತಕ್ಷಣ 'ಅಪ್ಪ ಅಮ್ಮ ಪ್ರೀತಿ' ಚಿತ್ರದ ಸುಟಿಂಗ್ ಶುರುವಾಗಲಿದೆ. ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ನಿರ್ದೇಶಕರು ಬ್ಯುಸಿ ಆಗಿದ್ದು ಆದಷ್ಟು ಬೇಗ ಒಂದೊಳ್ಳೆ ಕತೆ ಇರುವ ಸಿನಿಮಾ ಮೂಲಕ ವಿನಯ್ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

English summary
Actress Khushboo is playing the supporting role in the movie Appa Amma Preethi. Vinay Rajkumar is acting as a hero in the film. the movie directed by Sridhar.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X