»   » ಜಯಲಲಿತಾ ಸಾವಿನ ಸುದ್ದಿ: ಟ್ವಿಟ್ಟರ್ ನಲ್ಲಿ ಖುಷ್ಬು ಎಡವಟ್ಟು

ಜಯಲಲಿತಾ ಸಾವಿನ ಸುದ್ದಿ: ಟ್ವಿಟ್ಟರ್ ನಲ್ಲಿ ಖುಷ್ಬು ಎಡವಟ್ಟು

Posted By:
Subscribe to Filmibeat Kannada

'ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಇಹಲೋಕ ತ್ಯಜಿಸಿದ್ದಾರೆ' ಎಂಬ ಸುದ್ದಿ ಇಂದು ಸಂಜೆ ಆರು ಗಂಟೆ ಸುಮಾರಿಗೆ ಎಲ್ಲೆಡೆ ಕಾಡ್ಗಿಚ್ಚಿನಂತೆ ಹಬ್ಬಿತು. ಕೆಲವು ವಾಹಿನಿಗಳಲ್ಲಂತೂ ಇದೇ ಸುದ್ದಿ 'ಬಿಗ್ ಬ್ರೇಕಿಂಗ್ ನ್ಯೂಸ್' ಆಯ್ತು. [ಜಯಲಲಿತಾ ಸಾವಿನ ಸುದ್ದಿ ಅಲ್ಲಗೆಳೆದ ಅಪೋಲೋ ಆಸ್ಪತ್ರೆ]

ಚೆನ್ನೈನ ಅಪೋಲೋ ಆಸ್ಪತ್ರೆಯಿಂದ ಅಧಿಕೃತ ಪ್ರಕಟಣೆ ಹೊರಬೀಳುವ ಮುನ್ನವೇ ಮಾಧ್ಯಮಗಳಲ್ಲಿ ಪುಕಾರು ಎದ್ದ ಈ ಸುದ್ದಿಯನ್ನ ಹಿಂದು-ಮುಂದು ಪರಿಶೀಲಿಸದೆ, ನಟಿ ಹಾಗೂ ರಾಜಕಾರಣಿ ಖುಷ್ಬು ಕೂಡ 'ಅಮ್ಮ' ಜಯಲಲಿತಾ ರವರಿಗೆ ಸಂತಾಪ ಸೂಚಿಸಿ ಟ್ವಿಟ್ಟರ್ ನಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ.

ಖುಷ್ಬು ಮಾಡಿದ ಟ್ವೀಟ್ ಏನು.?

''ಯುಗಾಂತ್ಯವಾಗಿದೆ. ತಮಿಳುನಾಡು ರಾಜಕೀಯದ ಇತಿಹಾಸದಲ್ಲಿ ಇಂದು ಅತ್ಯಂತ ದುಃಖದ ದಿನ. 'ಅಮ್ಮ' ಆತ್ಮಕ್ಕೆ ಶಾಂತಿ ಸಿಗಲಿ'' ಅಂತ ನಟಿ ಖುಷ್ಬು ಟ್ವೀಟ್ ಮಾಡಿದರು.

ಎಐಎಡಿಎಂಕೆ ಕುರಿತು ಪ್ರಸ್ತಾಪ

''ಆಸ್ಪತ್ರೆಯಿಂದ ಅಧಿಕೃತ ಮಾಹಿತಿ ಬರುವ ಮುನ್ನವೇ ಎಐಎಡಿಎಂಕೆ ಪಕ್ಷದ ಕಚೇರಿಯಲ್ಲಿ ಧ್ವಜವನ್ನು ಅರ್ಧಕ್ಕೆ ಇಳಿಸಿ ಗೌರವ ಸಂತಾಪ ಸೂಚಿಸಲಾಗಿದೆ'' ಅಂತಲೂ ಖುಷ್ಬು ಟ್ವೀಟ್ ಮಾಡಿದರು.

ಸ್ಫೂರ್ತಿ ನೀವೇ...

''ಇನ್ನೊಬ್ಬರು 'ಅಮ್ಮ' ಆಗಲು ಸಾಧ್ಯವೇ ಇಲ್ಲ. ನಿಮ್ಮ ನೆನಪು ಎಲ್ಲರಲ್ಲೂ ಕಾಡುತ್ತದೆ'' ಅಂತ ಭಾವುಕರಾಗಿ ಖುಷ್ಬು ಟ್ವೀಟ್ ಮಾಡಿದ್ದರು.

ಅಪೋಲೋ ಆಸ್ಪತ್ರೆ ವೈದ್ಯರಿಂದ ಪ್ರಕಟಣೆ ಹೊರಬಿತ್ತು.!

''ಮಾಧ್ಯಮಗಳಲ್ಲಿ ಹಬ್ಬಿದ ಸುದ್ದಿ ಸುಳ್ಳು. ಅಮ್ಮ ಸ್ಥಿತಿ ಇನ್ನೂ ಗಂಭೀರವಾಗಿದೆ'' ಅಂತ ಟ್ವೀಟ್ ಮೂಲಕ ಅಪೋಲೋ ಆಸ್ಪತ್ರೆ ವೈದ್ಯರು ಸ್ಪಷ್ಟ ಪಡಿಸುತ್ತಿದ್ದಂತೆ ಖುಷ್ಬು ಟ್ವಿಟ್ಟರ್ ಅಕೌಂಟ್ ನಿಂದ ಹೊಸ ಟ್ವೀಟ್ ಹೊರಬಿತ್ತು.

ಫೀನಿಕ್ಸ್ ನಂತೆ ಎದ್ದು ಬರಲಿ 'ಅಮ್ಮ'

''ಪವಾಡ ಇಂದೇ ನಡೆಯಲಿ. ಅಮ್ಮ ಫೀನಿಕ್ಸ್ ನಂತೆ ಎದ್ದು ಬರಲಿ ಎಂದು ಆಶಿಸೋಣ'' - ಖುಷ್ಬು

ಡಿಲೀಟ್ ಮಾಡುತ್ತೇನೆ.!

''ಗೌರವಾನ್ವಿತ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ರವರ ಸಾವಿನ ಸುದ್ದಿ ಬಗ್ಗೆ ನಾನು ಮಾಡಿದ್ದ ಟ್ವೀಟ್ ಗಳನ್ನು ಡಿಲೀಟ್ ಮಾಡುತ್ತೇನೆ'' ಎಂದಿದ್ದಾರೆ ನಟಿ ಕಮ್ ರಾಜಕಾರಣಿ ಖುಷ್ಬು.

ಅಭಿಮಾನಿಗಳು ಕಿಡಿ

ಸತ್ಯಾಸತ್ಯತೆ ಪರಿಶೀಲನೆ ಮಾಡದೆ ಖುಷ್ಬು ಮಾಡಿದ ಟ್ವೀಟ್ ಗೆ ಕೆಲವರು ಆಕ್ರೋಶಗೊಂಡಿದ್ದಾರೆ.

English summary
Tamil Actress and Politician Khushbu tweeted about Tamil Nadu Cheif Minister Jayalalithaa's death without confirmation and deleted it later.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada