»   » ದರ್ಶನ್ ಆಯ್ತು, ರಮ್ಯಾ ಮುಗೀತು.. ಈಗ ಸುದೀಪ್ ಗೆ 'ಆಕೆ' ಮೇಲೆ ಕಣ್ಣು.!

ದರ್ಶನ್ ಆಯ್ತು, ರಮ್ಯಾ ಮುಗೀತು.. ಈಗ ಸುದೀಪ್ ಗೆ 'ಆಕೆ' ಮೇಲೆ ಕಣ್ಣು.!

Posted By:
Subscribe to Filmibeat Kannada

ಹಾಲಿವುಡ್ ರೇಂಜಿಗೆ ರೆಡಿಯಾಗಿರುವ ಕನ್ನಡದ ಹಾರರ್-ಥ್ರಿಲ್ಲರ್ ಸಿನಿಮಾ 'ಆಕೆ' ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. 'ಆಕೆ' ಟೀಸರ್ ನೋಡಿ ಸಿನಿ ಪ್ರಿಯರು ಮಾತ್ರ ಅಲ್ಲ, ಸ್ಯಾಂಡಲ್ ವುಡ್ ನ ಸ್ಟಾರ್ ನಟರೂ ಕೂಡ ಶೇಕ್ ಆಗಿದ್ದಾರೆ.

ಚಿರಂಜೀವಿ ಸರ್ಜಾ ಹಾಗೂ ಶರ್ಮಿಳಾ ಮಾಂಡ್ರೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಆಕೆ' ಚಿತ್ರದ ಟೀಸರ್ ನೋಡಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ನಂತರ ರಮ್ಯಾ ಕೂಡ 'ಆಕೆ' ಟೀಸರ್ ನೋಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಈಗ ಕಿಚ್ಚ ಸುದೀಪ್ ಸರದಿ...

ಸುದೀಪ್ ಗೆ ಟ್ವೀಟ್ ಮಾಡಿದ್ದ ಚಿರಂಜೀವಿ ಸರ್ಜಾ

''ಆಕೆ' ಸಿನಿಮಾದ ಈ ಟೀಸರ್ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ'' ಎಂದು ನಟ ಸುದೀಪ್ ರವರಿಗೆ ಚಿರಂಜೀವಿ ಸರ್ಜಾ ಟ್ವೀಟ್ ಮಾಡಿದ್ದರು. ಚಿರಂಜೀವಿ ಸರ್ಜಾ ರವರ ಈ ಟ್ವೀಟ್ ಗೆ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.

ಸುದೀಪ್ ನೀಡಿರುವ ಪ್ರತಿಕ್ರಿಯೆ ಏನು.?

'ಆಕೆ' ಚಿತ್ರದ ಟೀಸರ್ ನೋಡಿದ ಬಳಿಕ, ''ತುಂಬಾ ಚೆನ್ನಾಗಿ ಮೂಡಿಬಂದಿದೆ. ನನ್ನ ಅಚ್ಚುಮೆಚ್ಚಿನ ನಟ ಅಚ್ಯುತ್ ರಾವ್ ರವರನ್ನ ನೋಡಿ ಖುಷಿ ಆಯ್ತು. ಇಡೀ ಚಿತ್ರತಂಡಕ್ಕೆ ನನ್ನ ಶುಭಾಶಯಗಳು'' ಎಂದು ಸುದೀಪ್ ಟ್ವಿಟ್ಟರ್ ಮೂಲಕವೇ ಪ್ರತಿಕ್ರಿಯೆ ನೀಡಿದ್ದಾರೆ.

'ಹಾಂಟಿಂಗ್' ಟ್ರೈಲರ್

'ಆಕೆ' ಚಿತ್ರದ ಟ್ರೈಲರ್ ನೋಡಿ ನಟಿ ಹಾಗೂ ರಾಜಕಾರಣಿ ರಮ್ಯಾ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು ಹೀಗೆ....

'ಆಕೆ' ಟ್ರೈಲರ್ ನೋಡಿ ಕಾಮೆಂಟ್ ಮಾಡಿದ ನಟಿ ರಮ್ಯಾ

ದರ್ಶನ್ ಕೂಡ ಹೊಗಳಿದ್ದರು

''ಆಕೆ' ಸಿನಿಮಾ ಇಂಗ್ಲೀಷ್ ಚಿತ್ರದ ರೀತಿಯಲ್ಲಿ ಮೂಡಿಬಂದಿದೆ'' ಎಂದು ನಟ ದರ್ಶನ್ ಕೂಡ 'ಆಕೆ' ಸಿನಿಮಾದ ಬಗ್ಗೆ ಕೊಂಡಾಡಿದ್ದರು.

ಚಿರಂಜೀವಿ 'ಆಕೆ' ಪ್ರೋಮೋ ನೋಡಿ ದಾಸ ದರ್ಶನ್ ಏನಂದ್ರು ನೋಡಿ..!

'ಆಕೆ' ಟೀಸರ್ ನೋಡಿದ್ದೀರಾ.?

ಸ್ಯಾಂಡಲ್ ವುಡ್ ನ ಗಲ್ಲಿಗಲ್ಲಿಯಲ್ಲಿಯೂ ಸದ್ದು ಮಾಡುತ್ತಿರುವ 'ಆಕೆ' ಚಿತ್ರದ ಟೀಸರ್ ನ ನೀವಿನ್ನೂ ನೋಡಿಲ್ಲ ಅಂದ್ರೆ, ಈ ಲಿಂಕ್ ಕ್ಲಿಕ್ ಮಾಡಿ ನೋಡಿ... ಅಂದ್ಹಾಗೆ, 'ಆಕೆ' ಜೂನ್ 30 ರಂದು ಬಿಡುಗಡೆ ಆಗಲಿದೆ.

English summary
Kannada Actor Kiccha Sudeep has taken his twitter account to appreciate Kannada Movie 'Aake' trailer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada