»   » ಕಿಚ್ಚನ ಕಿಚನ್: ಸುದೀಪ್ ಕೈ ರುಚಿ ಸವಿದ ಭಾಗ್ಯವಂತರಿವರು

ಕಿಚ್ಚನ ಕಿಚನ್: ಸುದೀಪ್ ಕೈ ರುಚಿ ಸವಿದ ಭಾಗ್ಯವಂತರಿವರು

Posted By:
Subscribe to Filmibeat Kannada

ಕಿಚ್ಚ ಸುದೀಪ್ ಸೂಪರ್ ಆಕ್ಟರ್ ಎನ್ನುವುದು ಅವರ ಸಿನಿಮಾಗಳಿಂದ ಪ್ರೂವ್ ಆಗಿದೆ. ಅವರು ಅದ್ಭುತ ಆಂಕರ್ ಎನ್ನುವುದು 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸಾಬೀತಾಗಿದೆ. ಇನ್ನೂ ಸುದೀಪ್ ಅಡುಗೆ ಚೆನ್ನಾಗಿ ಮಾಡ್ತಾರೆ ಎನ್ನುವುದು ಅವರು, ಇವರು ಹೇಳಿದ್ದನ್ನ ಕೇಳಿದ್ದೀವಿ ಅಷ್ಟೆ. ಆದ್ರೆ, ಸುದೀಪ್ ಚೆನ್ನಾಗಿ ಅಡುಗೆ ಮಾಡ್ತಾರೆ ಅಂತ ಈಗ ತೋರಿಸಿಕೊಟ್ಟಿದ್ದಾರೆ.

ಹೌದು, ಈ ವಾರ ಕಿಚ್ಚ ಸುದೀಪ್ ತಮ್ಮ ಕೈಯಾರೆ ರುಚಿ ರುಚಿಯಾದ ಭಕ್ಷ್ಯ ಭೋಜನಗಳನ್ನ ತಯಾರಿಸಿ 'ಬಿಗ್ ಬಾಸ್' ಮನೆಯ ಸದಸ್ಯರಿಗೆ ಕೊಟ್ಟಿದ್ದಾರೆ.['ಬಿಗ್ ಬಾಸ್' ಮನೆಯೊಳಗೆ ಪೂಜಾ ಗಾಂಧಿ 'ಜಿಲೇಬಿ']

ಈ ಕಡೆ ಸಸ್ಯಹಾರಿಗೂ ಸೈ, ಆ ಕಡೆ ಮಾಂಸಹಾರಿಗೂ ಜೈ ಎಂದು ಸುದೀಪ್ ಅವರು, ಮನೆಯ ಸದಸ್ಯರು ಕೊಟ್ಟ ಆರ್ಡರ್ ನ 'ಬಿಗ್ ಬಾಸ್' ವೇದಿಕೆಯಲ್ಲೇ ಲೈವ್ ಆಗಿ ತಯಾರಿಸಿದ್ದಾರೆ.

50 ದಿನದ ಸಂಭ್ರಮ

'ಬಿಗ್ ಬಾಸ್' ಕನ್ನಡ ಕಾರ್ಯಕ್ರಮ 50 ದಿನಗಳನ್ನ ಪೂರೈಸಿದ ಹಿನ್ನಲೆ, ಈ ವಾರ 'ಸೂಪರ್ ಸಂಡೆ ವಿತ್ ಸುದೀಪ್' ಎಪಿಸೋಡ್ ನಲ್ಲಿ ವಿಭಿನ್ನವಾಗಿ ಸಂಭ್ರಮಾಚರಣೆ ಆಚರಿಸಲಾಯಿತು. ಕಿಚ್ಚ ಸುದೀಪ್ ಅವರು ಮನೆಯ ಎಲ್ಲ ಸದಸ್ಯರಿಗೆ ಅಡುಗೆ ಮಾಡಿಕೊಡುವುದರ ಮೂಲಕ 'ಬಿಗ್ ಬಾಸ್' 50 ದಿನಗಳನ್ನ ಸೆಲೆಬ್ರೇಟ್ ಮಾಡಿದರು.[50 ದಿನ ಆಯ್ತು: 'ಬಿಗ್ ಬಾಸ್' ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಇಲ್ವಾ?]

ಅಡುಗೆ ಭಟ್ಟರಾದ ಕಿಚ್ಚ ಸುದೀಪ್

''ಬಿಗ್ ಬಾಸ್ ಕನ್ನಡ 4'', 50 ದಿನಗಳ ಸಂಭ್ರಮಾಚರಣೆಯಲ್ಲಿ ಕಿಚ್ಚ ಸುದೀಪ್ ಸ್ವತಃ ತಾವೇ ಮನೆಯ ಎಲ್ಲ ಸದಸ್ಯರಿಗೆ ಅಡುಗೆ ಮಾಡಿ ಕೊಟ್ಟಿದ್ದಾರೆ. ಸ್ವರ್ಧಿಗಳು ಕೇಳಿದಂತಹ ಎಲ್ಲ ರೀತಿಯ ಖಾದ್ಯಗಳನ್ನ ಸುದೀಪ್ ಲೈವ್ ಆಗಿ ಮಾಡಿ ಕೊಟ್ಟರು.

ಆರ್ಡರ್ ಪಡೆದ ಕಿಚ್ಚ

'ಬಿಗ್ ಬಾಸ್' ಸದಸ್ಯರಿಗೆ ಏನೇನೂ ಬೇಕು ಅಂತ ಮೆನ್ಯೂ ಕಾರ್ಡ್ ಕಳುಹಿಸಿ ಆರ್ಡರ್ ಪಡೆದ ಕಿಚ್ಚ, ಸ್ಟೇಜ್ ಮೇಲೆ ಅಡುಗೆ ಕೆಲಸ ಶುರು ಮಾಡಿದರು.

ಕಿಚ್ಚನ 'ಕಿಚ್ಚನ್'

'ಬಿಗ್ ಬಾಸ್' ವೇದಿಕೆ ಮೇಲೆನೇ ಕಿಚ್ಚನ 'ಕಿಚ್ಚನ್' ರೆಡಿಯಾಗಿತ್ತು. ಅಡುಗೆಗೆ ಬೇಕಾದ ಸಾಮಾಗ್ರಿಗಳನ್ನ ಇಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಕಿಚ್ಚನ್ ಡಿಪಾರ್ಟ್ ಮೆಂಟ್ ನಲ್ಲಿ ಕಿಚ್ಚನಿಗೆ ರಘು, ಹಾಗೂ ಭರತ್ ಎಂಬ ಇಬ್ಬರು ಸ್ನೇಹಿತರು ಸಾಥ್ ಕೊಟ್ಟರು.

ಕಿಚ್ಚನ ಕುಕ್ಕಿಂಗ್ ಸ್ಟೈಲ್ ಸೂಪರ್

ಸೇಮ್ ಅಡುಗೆ ಭಟ್ಟರಂತೆ ರೆಡಿಯಾದ ಸುದೀಪ್, ಅಡುಗೆ ಸಮವಸ್ತ್ರ ತೊಟ್ಟು ಸದಸ್ಯರು ಕೊಟ್ಟ ಆರ್ಡರ್ ನಂತೆ ಅಡುಗೆ ಮಾಡುವುದಕ್ಕೆ ಶುರು ಮಾಡಿದರು. ಮನೆಯ ಸದಸ್ಯರ ಕಾಲೆಳೆಯುತ್ತಾ, ಫಟಾ ಫಟ್ ಅಂತ ಆರ್ಡರ್ ಕೊಟ್ಟಿದ್ದ ಭಕ್ಷ್ಯಗಳನ್ನ ತಯಾರು ಮಾಡಿದರು.

ಸುದೀಪ್ ಏನೇನೂ ಅಡುಗೆ ಮಾಡಿದರು?

ವೆಜ್ ಬಿರಿಯಾನಿ, ಚಿಕ್ಕನ್ ಬಿರಿಯಾನಿ, ಮಂಗಳೂರು ಬಜ್ಜಿ, ಚಿಲ್ಲಿ ಪನ್ನೀರ್, ಚಿಕ್ಕನ್ ಅಪ್ರಿಕೂಟ್, ಚೀಸ್ ಎಗ್, ಮಾರ್ಬಲ್ ಕೇಕ್ ಗಳನ್ನ ಸುದೀಪ್ ತಯಾರಿಸಿದರು.

ಕಿಚ್ಚನ ಕೈರುಚಿಗೆ ಎಲ್ಲರೂ ಬೋಲ್ಡ್

ಎಲ್ಲ ಅಡುಗೆ ತಯಾರಿಸಿದ ನಂತರ, ಮನೆಯವರಿಗೆ ಪಾರ್ಸಲ್ ಮಾಡಲಾಯಿತು. ಕಿಚ್ಚನ ಕೈ ರುಚಿ ನೋಡಿದ ಬಿಗ್ ಮನೆ ಸದಸ್ಯರು, ಸುದೀಪ್ ಅವರ ಕೈರುಚಿಯನ್ನ ಹಾಡಿ ಹೊಗಳಿದರು.

English summary
Kannada Actor Kiccha Sudeep cooked special dishes on 'Bigg Boss' stage for all the contestants of BBK4. Sudeep who is very much fond of cooking, off late has cooked Veg Biriyani, Chicken Biriyani, Mangalore Bajji, Chilli Paneer, Chicken apricot, Cheese Egg and Marble Cake and has nicely packed the dishes for each contestant mentioning their names.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada