»   » ಒಳ್ಳೆ ಮನಸ್ಸಿದ್ದರೆ ಅಡ್ಡಿ ಆತಂಕ ಇಲ್ಲ - ಕಿಚ್ಚ ಸುದೀಪ್

ಒಳ್ಳೆ ಮನಸ್ಸಿದ್ದರೆ ಅಡ್ಡಿ ಆತಂಕ ಇಲ್ಲ - ಕಿಚ್ಚ ಸುದೀಪ್

Posted By:
Subscribe to Filmibeat Kannada

ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ದೊಡ್ಡಕಲ್ಲಸಂದ್ರ ಅಣ್ಣಮ್ಮದೇವಿ ಭಕ್ತ ಮಂಡಳಿ ಆಯೋಜಿಸಿದ್ದ ಎಸ್.ಪಿ.ಬಿ-ಸಾಧು ಕೋಕಿಲ ರಸಸಂಜೆ ಕಾರ್ಯಕ್ರಮದಲ್ಲಿ ನಟ ಕಿಚ್ಚ ಸುದೀಪ್ ಅವರನ್ನ ಸನ್ಮಾನಿಸಲಾಯಿತು.

ಎನ್.ಶ್ರೀನಿವಾಸ್ ನೇತೃತ್ವದಲ್ಲಿ ನಡೆದ ಈ ವರ್ಣರಂಜಿತ ಸಮಾರಂಭದಲ್ಲಿ ನಟ ಕಿಚ್ಚ ಸುದೀಪ್ ಜೊತೆಗೆ ಹಿರಿಯ ಕಲಾವಿದರಾದ ಸುದರ್ಶನ್, ಶೈಲಶ್ರೀ ಹಾಗೂ ಒಂದು ಸಾವಿರಕ್ಕೂ ಅಧಿಕ ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿರುವ ದೇವಿ ಅವರನ್ನ ಸನ್ಮಾನ ಮಾಡಲಾಯ್ತು.

Kiccha Sudeep felicitated at SPB-Sadhu Kokila Musical Night

''ಒಳ್ಳೆ ಮನಸ್ಸಿನಿಂದ ಕಾರ್ಯಕ್ರಮ ನಡೆಸುವಾಗ ಎಂದಿಗೂ ಅಡ್ಡಿ-ಆತಂಕ ಆಗಲ್ಲ. ಶ್ರೀನಿವಾಸ್ ಅವರು ನನಗೆ ಹಳೇ ಪರಿಚಯ. ಕಲಾವಿದರಿಗೆ, ಕಾರ್ಯಕ್ರಮ ಆಯೋಜಿಸುವವರಿಗೆ ಅಭಿಮಾನಿಗಳೇ ಸ್ಪೂರ್ತಿ. ಅವರ ಬೆಂಬಲ ಇದ್ದರೆ ಎಂಥ ಕಷ್ಟದ ಕೆಲಸವೂ ಸುಲಭವಾಗುವುದು'' ಅಂತ ಮಳೆಯಲ್ಲಿ ಕುಳಿತಿದ್ದ ಸಾವಿರಾರು ಅಭಿಮಾನಿಗಳನ್ನ ಉದ್ದೇಶಿಸಿ ಸುದೀಪ್ ಮಾತನಾಡಿದರು. [ಕಿಚ್ಚ ಸುದೀಪ್ ಬೆಳ್ಳಿ ಕಿರೀಟ ನಿರಾಕರಿಸಿದ್ದು ಯಾಕೆ?]

Kiccha Sudeep felicitated at SPB-Sadhu Kokila Musical Night

ವರ್ಣರಂಜಿತ ವೇದಿಕೆಯಲ್ಲಿ ಸಾಧುಕೋಕಿಲ ಮತ್ತು ಅವರ ಸಹೋದರಿ ಉಷಾ ಹಾಗೂ ತಂಡದವರು ಇಂಪಾದ ಹಾಡುಗಳನ್ನ ಹಾಡಿದರು. ಸಂಸದ ಡಿ.ಕೆ.ಸುರೇಶ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಇಕ್ಬಾಲ್ ಹುಸೇನ್, ಗೋವಿಂದರಾಜು ಮುಂತಾದವರು ಉಪಸ್ಥಿತರಿದ್ದರು.

ಜನಪ್ರಿಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದರೂ, ಭಾರಿ ಮಳೆಯ ಕಾರಣದಿಂದ ರಸಸಂಜೆ ಕಾರ್ಯಕ್ರಮವನ್ನ ನಡೆಸಿಕೊಡಲಾಗಲಿಲ್ಲ. (ಫಿಲ್ಮಿಬೀಟ್ ಕನ್ನಡ)

English summary
Kannada Actor Kiccha Sudeep was felicitated at SPB-Sadhu Kokila Musical Night, organized by Annamma Devi Bhaktha Mandali, Doddakallasandra, Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada