For Quick Alerts
  ALLOW NOTIFICATIONS  
  For Daily Alerts

  ಕಿಚ್ಚನ ಬಳಿ ಇರೋ ಕಾರ್-ಬೈಕ್ ಗಳ ಕಂಪ್ಲೀಟ್ ಮಾಹಿತಿ

  By Pavithra
  |
  ಅಭಿನಯ ಚಕ್ರವರ್ತಿ ಕಾರ್ ಕ್ರೇಜ್ ಬಗ್ಗೆ ಕೇಳಿದ್ರೆ ದಂಗಾಗ್ತೀರಾ| Filmibeat Kannada

  ಅಭಿನಯ ಚಕ್ರವರ್ತಿ ಬಳಿ ಅಷ್ಟು ಕಾರ್ ಗಳಿವೆ ಇಷ್ಟು ಬೈಕ್ ಗಳಿವೆ ಎನ್ನುವ ಮಾತುಗಳು ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಆದರೆ ನಿಜವಾಗಿಯೂ ಕಿಚ್ಚನ ಬಳಿ ಎಷ್ಟು ಗಾಡಿಗಳಿವೆ ಎನ್ನುವುದು ಮಾತ್ರ ಯಾರಿಗೂ ಕನ್ಫರ್ಮ್ ಇಲ್ಲ.

  ನಿನ್ನೆಯಷ್ಟೇ ಹೊಸ ಬೈಕ್ ಕೊಂಡುಕೊಂಡಿರುವ ಕಿಚ್ಚ ಬೆಂಗಳೂರನ್ನ ಒಂದು ರೌಂಡ್ ಹಾಕಿ ಬಂದಿದ್ದಾರೆ. ರಾತ್ರಿ ಪೂರ್ತಿ ಸಿಲಿಕಾನ್ ಸಿಟಿ ಸುತ್ತಿರುವ ಸುದೀಪ್ ಅವರನ್ನ ಕಂಡು ಅಭಿಮಾನಿಗಳು ಆಶ್ಚರ್ಯ ಪಟ್ಟಿದ್ದಾರೆ. ಹಾಗಾದರೇ ಕಿಚ್ಚನಿಗೆ ಬೈಕ್ ಕ್ರೇಜ್ ಹೆಚ್ಚಾಗಿಯೇ ಇದೆ ಅನ್ನುವುದು ಕನ್ಫರ್ಮ್ ಆಗಿದೆ.

  ಕಿಚ್ಚನ ಮನೆಗೆ ಬಂತು ಹೊಸ ಬೈಕ್ಕಿಚ್ಚನ ಮನೆಗೆ ಬಂತು ಹೊಸ ಬೈಕ್

  ಸ್ಟಾರ್ ಗಳು ಯಾವ ಕಾರ್ ಯ್ಯೂಸ್ ಮಾಡುತ್ತಾರೆ. ಯಾವ ಬೈಕ್ ಇಷ್ಟ ಪಡುತ್ತಾರೆ ಎನ್ನುವ ವಿಚಾರವನ್ನ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಹಾಗಾದರೆ ಮುಂದೆ ಓದಿ ಅಭಿಮಾನಿಗಳ ಅಭಿಮಾನಿಯ ಬಳಿ ಕಾರ್ ಮತ್ತು ಬೈಕ್ ಕಲೆಕ್ಷನ್ಸ್ ಹೇಗಿದೆ ಎನ್ನುವ ಮಾಹಿತಿ ಕೊಡುತ್ತೇವೆ.

  ಸುದೀಪ್ ಬಳಿ ಇವೆ ಕಾರ್ ಗಳು

  ಸುದೀಪ್ ಬಳಿ ಇವೆ ಕಾರ್ ಗಳು

  ಕಿಚ್ಚ ಸುದೀಪ್ ಅವರಿಗೆ ಕಾರ್ ಗಳು ಎಂದರೆ ತುಂಬಾ ಇಷ್ಟ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಮನೆಯ ಶೋಕೇಸ್ ನಲ್ಲಿಯೇ ಪುಟ್ಟ ಪುಟ್ಟ ಕಾರ್ ಗಳನ್ನ ಇಟ್ಟುಕೊಂಡಿರುವುದನ್ನ ಸಾಕಷ್ಟು ಜನರು ನೋಡಿರುತ್ತಾರೆ. ಅದರಂತೆಯೇ ದೊಡ್ಡ ಕಾರ್ ಗಳು ಹೆಚ್ಚಾಗಿಯೇ ಇದೆ ಕಿಚ್ಚನ ಬಳಿ.

  ಏಳು ಕಾರ್ ಗಳ ಸರದಾರ

  ಏಳು ಕಾರ್ ಗಳ ಸರದಾರ

  ಅಭಿನಯದ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬಳಿ ಏಳು ಕಾರ್ ಗಳಿವೆ. ಜಾಗ್ವಾರ್, ಬಿ ಎಂ ಡಬ್ಲ್ಯೂ, ಲ್ಯಾಂಡ್ ರೋವರ್ , ಫೋರ್ಡ್, ಮಿನಿ ಕೂಪರ್ , ಆಡಿ, ಇನೋವಾ ಕಾರ್ ಗಳನ್ನ ಸುದೀಪ್ ಬಳಸುತ್ತಾರೆ.

  ಸುದೀಪ್ ಬಳಿ ಇದೆ ಫೇವರೆಟ್ ಬೈಕ್ಸ್

  ಸುದೀಪ್ ಬಳಿ ಇದೆ ಫೇವರೆಟ್ ಬೈಕ್ಸ್

  ತನಗಿಷ್ಟವಾದ ಕಂಪನಿಯ ಕಾರ್ ಗಳನ್ನ ಖರೀದಿ ಮಾಡಿರುವ ಸುದೀಪ್ ಬಳಿ ಬೈಕ್ ಗಳು ಇವೆ. ಮನಸ್ಸಿಗೆ ಇಷ್ಟವಾಗಿರುವ ಆಯ್ದ ಬೈಕ್ ಗಳು ಮಾತ್ರ ಕಿಚ್ಚನ ಮನೆಯಲ್ಲಿ ಸ್ಥಾನ ಪಡೆದುಕೊಂಡಿವೆ. ಹಾರ್ಲೆ ಡೇವಿಡ್ಸನ್, ಬುಲೆಟ್, ಯಮಹಾ 100 ಇವುಗಳ ಸಾಲಿಗೆ ಹೊಸ ಸೇರ್ಪಡೆ ಬಿ ಎಂ ಡಬ್ಲ್ಯೂ ಬೈಕ್.

  ಸುದೀಪ್ ಬಳಿ ಇದೆ ಸೈಕಲ್

  ಸುದೀಪ್ ಬಳಿ ಇದೆ ಸೈಕಲ್

  ಕಾರ್, ಬೈಕ್ ಗಳನ್ನ ಮಾತ್ರವಲ್ಲದೆ ಸುದೀಪ್ ಸೈಕಲ್ ಸವಾರಿಯನ್ನೂ ಮಾಡುತ್ತಾರೆ. ಏಳು ಕಾರ್ ಮತ್ತು ಬೈಕ್ ಗಳ ಜೊತೆಯಲ್ಲಿ ಒಂದು ಸೈಕಲ್ ಕೂಡ ಇದೆ. ಆಗಾಗ ಮಾತ್ರ ಸೈಕಲ್ ಹತ್ತಿ ಓಡಾಡುತ್ತಾರೆ ಸುದೀಪ್.

  ಸೊಸೆಗೆ ಮರೆಯಲಾಗದ ಉಡುಗೊರೆ ನೀಡಿದ ಕಿಚ್ಚಸೊಸೆಗೆ ಮರೆಯಲಾಗದ ಉಡುಗೊರೆ ನೀಡಿದ ಕಿಚ್ಚ

  English summary
  Kannada actor Kiccha Sudeep have more than 7cars and 3 bikes. recently sudeep has bought a expensive BMW bike. Here is a list of Sudeep cars and bikes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X