»   » 'ಲವ್ ಯು ಆಲಿಯ'ಗೆ ಸುದೀಪ್ ಉಚಿತ ಕಾಲ್ ಶೀಟ್

'ಲವ್ ಯು ಆಲಿಯ'ಗೆ ಸುದೀಪ್ ಉಚಿತ ಕಾಲ್ ಶೀಟ್

Posted By:
Subscribe to Filmibeat Kannada

'ರನ್ನ' ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಕಿಚ್ಚ ಸುದೀಪ್ ಕಾಲಿವುಡ್ ನಲ್ಲಿ ಬಿಜಿಯಿದ್ದಾರೆ. ಇದೇ ಗ್ಯಾಪ್ ನಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ನಿರ್ದೇಶನದ 'ಅಪೂರ್ವ' ಚಿತ್ರದ ವಿಶೇಷ ಪಾತ್ರವೊಂದರಲ್ಲಿ ಸುದೀಪ್ ನಟಿಸಿದ್ದಾರೆ.

ಇದೀಗ ಹೊರಬಿದ್ದಿರುವ ಲೇಟೆಸ್ಟ್ ಸುದ್ದಿ ಪ್ರಕಾರ, ಸ್ಟೈಲಿಶ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಲವ್ ಯು ಆಲಿಯ' ಚಿತ್ರದಲ್ಲಿ ಸುದೀಪ್ ಕೇಮಿಯೋ ರೋಲ್ ನಲ್ಲಿ ಮಿಂಚಲಿದ್ದಾರೆ.

ವಿಶೇಷ ಅಂದ್ರೆ, 'ಲವ್ ಯು ಆಲಿಯ' ಚಿತ್ರದಲ್ಲಿ ಸುದೀಪ್, ಸುದೀಪ್ ಆಗೇ ಕಾಣಿಸಿಕೊಳ್ಳುವುದು. ಸ್ಟಾರ್ ಹೀರೋ ಕಮ್ ಡೈರೆಕ್ಟರ್ ಆಗಿರುವ ಅಭಿಮಾನಿಗಳ ಪ್ರೀತಿಯ 'ನಲ್ಲ', 'ಜವಾಬ್ದಾರಿ'ಯುತ ತಂದೆಯಾಗಿ ಬೆಳ್ಳಿತೆರೆ ಮೇಲೆ ಬರುತ್ತಿರುವುದು 'ಲವ್ ಯು ಆಲಿಯ' ಸ್ಪೆಷಾಲಿಟಿ.

Kiccha Sudeep plays himself in 'Love You Alia'

ಕಿಚ್ಚ ಸುದೀಪ್ ಗೆ ಸಾನ್ವಿ ಅನ್ನುವ ಮುದ್ದಾದ ಮಗಳಿದ್ದಾಳೆ. ಪುಟಾಣಿಯೊಂದಿಗೆ ಅಪ್ಪನ ಅನುಬಂಧ ಹೇಗಿದೆ ಅನ್ನೋದನ್ನ 'ಲವ್ ಯು ಆಲಿಯ' ಚಿತ್ರದ ಮೂಲಕ ಕಿಚ್ಚ ಸುದೀಪ್ ಬಿಚ್ಚಿಡಲಿದ್ದಾರೆ. [ಸ್ಯಾಂಡಲ್ ವುಡ್ಡಿಗೆ ಮತ್ತೆ ಬಂದ 'ಕಾರ್ ಕಾರ್ ಹುಡುಗ' ಧ್ಯಾನ್]

ಅಸಲಿಗೆ 'ಲವ್ ಯು ಆಲಿಯ' ಚಿತ್ರ ಕೂಡ ಅಪ್ಪ-ಮಗಳು, ಅಮ್ಮ-ಮಗ ನಡುವಿನ ಅನುಬಂಧವನ್ನ ಸಾರುವ ಸಿನಿಮಾ. ಅದಕ್ಕೆ ಪೂರಕವಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್, ಚಾಟ್ ಶೋ ಸನ್ನಿವೇಶವನ್ನ ಬಳಸಿಕೊಂಡು ಅದ್ರಲ್ಲಿ ಸುದೀಪ್ ರನ್ನ ಅತಿಥಿಯಾಗಿ ಇನ್ವೈಟ್ ಮಾಡಿದ್ದಾರೆ.

ನಿಜಹೇಳ್ಬೇಕು ಅಂದ್ರೆ, 'ಲವ್ ಯು ಆಲಿಯ' ಚಿತ್ರದ ಚಾಟ್ ಶೋ 'ರಿಯಲ್' ಆಗಿ ಶೂಟ್ ಆಗಿರುವುದು. ಸುದೀಪ್ ಇಲ್ಲಿ ಸುದೀಪ್ ಆಗಿರುವುದರಿಂದ ಅವರ ಸ್ವಂತ ಭಾವನೆಗಳನ್ನೇ ಹಂಚಿಕೊಂಡಿದ್ದಾರೆ ಹೊರತು ಯಾರೂ ಡೈಲಾಗ್ಸ್ ಬರೆದು ಕೊಟ್ಟಿಲ್ಲ. ['ಲವ್ ಯೂ ಆಲಿಯಾ'ಗೆ ನಿಖಿಶಾ ಪಟೇಲ್ ಎಂಟ್ರಿ]

Kiccha Sudeep plays himself in 'Love You Alia'

ಸಂಭಾವನೆ ಪಡೆಯದೇ ಸುದೀಪ್ 'ಲವ್ ಯು ಆಲಿಯ' ಚಿತ್ರದಲ್ಲಿ ನಟಿಸಿರುವುದು ಮತ್ತೊಂದು ಅಚ್ಚರಿ ವಿಷಯ. ಇದಕ್ಕೆ ಕಾರಣ ಇಂದ್ರಜಿತ್ ಲಂಕೇಶ್ ಜೊತೆಗಿನ ಗೆಳೆತನ. ಹಾಗ್ನೋಡಿದ್ರೆ, ಇಂದ್ರಜಿತ್ ನಿರ್ದೇಶನದ 'ತುಂಟಾಟ' ಚಿತ್ರದ 'ಸುತ್ತ ಮುತ್ತ ಯಾರು ಇಲ್ಲ...' ಹಾಡಲ್ಲೂ ಸುದೀಪ್ ಹೆಜ್ಜೆ ಹಾಕಿದ್ದರು. [ಕ್ರೇಜಿಸ್ಟಾರ್ ರವಿಮಾಮ ಇನ್ಮುಂದೆ ಡಾ.ರವಿಚಂದ್ರನ್!]

ಈಗ ಅದೇ ಇಂದ್ರಜಿತ್ ನಿರ್ದೇಶನದ 'ಲವ್ ಯು ಆಲಿಯ' ಚಿತ್ರಕ್ಕಾಗಿ ಪ್ರೀತಿಯ ತಂದೆಯಾಗಿದ್ದಾರೆ ಸುದೀಪ್. ಕ್ರೇಜಿ ಸ್ಟಾರ್ ರವಿಚಂದ್ರನ್, ಬಹುಭಾಷಾ ನಟಿ ಭೂಮಿಕಾ ಚಾವ್ಲಾ, ಸುಧಾರಾಣಿ ಸೇರಿದಂತೆ ದೊಡ್ಡ ತಾರಾಬಳಗ 'ಲವ್ ಯು ಆಲಿಯ' ಚಿತ್ರದಲ್ಲಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ. (ಏಜೆನ್ಸೀಸ್)

English summary
Kiccha Sudeep will seen in a cameo role in Indrajith Lankesh directorial 'Love You Alia'. Interestingly, Kiccha Sudeep will be playing himself in the film. Crazy Star Ravichandran, Bhumika Chawla play lead in the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada