»   » ಮಗಳಿಗಾಗಿ ಒಂದಾದ ಸುದೀಪ್ ದಂಪತಿ: ಕಿಚ್ಚನ ಫ್ಯಾನ್ಸ್ ಗೆ ಇದಕ್ಕಿಂತ ಸಿಹಿ ಸುದ್ದಿ ಬೇಕಾ.?!

ಮಗಳಿಗಾಗಿ ಒಂದಾದ ಸುದೀಪ್ ದಂಪತಿ: ಕಿಚ್ಚನ ಫ್ಯಾನ್ಸ್ ಗೆ ಇದಕ್ಕಿಂತ ಸಿಹಿ ಸುದ್ದಿ ಬೇಕಾ.?!

By: ಫಿಲ್ಮಿಬೀಟ್ ಕನ್ನಡ ಡೆಸ್ಕ್
Subscribe to Filmibeat Kannada

ಕಗ್ಗತ್ತಲು ಕವಿದಿದ್ದ ಕೆಚ್ಚೆದೆಯ ಕಿಚ್ಚ ಸುದೀಪ್ ದಾಂಪತ್ಯದಲ್ಲಿ ಮತ್ತೆ ಬೆಳ್ಳಿ ಬೆಳಕು ಮೂಡುವ ಸೂಚನೆ ಸಿಕ್ಕಿದೆ. ಮನಸ್ತಾಪ ಮರೆತು.. ಭಿನ್ನಾಭಿಪ್ರಾಯ ಬದಿಗಿಟ್ಟು.. ಸುದೀಪ್-ಪ್ರಿಯಾ ದಂಪತಿ ಒಂದಾಗಲು ಮನಸ್ಸು ಮಾಡಿರುವ ಹಾಗಿದೆ.

ಕೌಟುಂಬಿಕ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವಿಚ್ಚೇದನ ಅರ್ಜಿಯನ್ನ ಗೌರಿ-ಗಣೇಶ ಹಬ್ಬದ ಶುಭ ಸಂದರ್ಭದಂದು ಸುದೀಪ್ ದಂಪತಿ ವಾಪಸ್ ಪಡೆದಿದ್ದಾರೆ. ಅಲ್ಲಿಗೆ, ಎರಡು ವರ್ಷಗಳಿಂದ ಸದ್ದು ಮಾಡಿದ್ದ ಸುದೀಪ್-ಪ್ರಿಯಾ ವಿಚ್ಛೇದನ ಪ್ರಕರಣ ಇಂದು ಸುಖಾಂತ್ಯ ಕಂಡಂತಾಗಿದೆ. ಮುಂದೆ ಓದಿರಿ...

ಕೇಸ್ ವಾಪಸ್ ಪಡೆದ ಸುದೀಪ್-ಪ್ರಿಯಾ

ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಕೋರಿ ಎರಡು ವರ್ಷಗಳ ಹಿಂದೆ ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯನ್ನ ಇದೀಗ ನಟ ಸುದೀಪ್ ಹಾಗೂ ಪತ್ನಿ ಪ್ರಿಯಾ ವಾಪಸ್ ಪಡೆದಿದ್ದಾರೆ.

14 ವರ್ಷದ ಸುದೀಪ್ ದಾಂಪತ್ಯ ಜೀವನದಲ್ಲಿ ಬಿರುಗಾಳಿ: ಡೈವೋರ್ಸ್!

ಖಚಿತ ಪಡಿಸಿದ ಸುದೀಪ್ ಪರ ವಕೀಲ

ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ವಿಚ್ಚೇದನದ ಅರ್ಜಿಯನ್ನ ಸುದೀಪ್-ಪ್ರಿಯಾ ವಾಪಸ್ ಪಡೆದಿರುವ ಸಂಗತಿಯನ್ನ ಸ್ವತಃ ಸುದೀಪ್ ಪರ ವಕೀಲರು ಖಚಿತ ಪಡಿಸಿದ್ದಾರೆ.

ವಾಪಸ್ ಪಡೆಯಲು ಕಾರಣ.?

''ಕೇಸ್ ನಡೆಸಲು ಇಂಟ್ರೆಸ್ಟ್ ಇಲ್ಲ ಎಂಬ ಕಾರಣಕ್ಕೆ ಸುದೀಪ್-ಪ್ರಿಯಾ ಅರ್ಜಿಯನ್ನ ವಾಪಸ್ ಪಡೆದಿದ್ದಾರೆ'' ಎಂದು ಸುದೀಪ್ ಪರ ವಕೀಲರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಗಳಿಗಾಗಿ ಒಂದಾದ ಸುದೀಪ್ ದಂಪತಿ

ಕಿಚ್ಚ ಸುದೀಪ್ ಗೆ ಮಗಳು ಸಾನ್ವಿ ಎಂದರೆ ಪ್ರಾಣ. ಸಾನ್ವಿ ಮನಸ್ಸಿಗೆ ನೋವಾಗಬಾರದು ಎಂಬ ಕಾರಣಕ್ಕೆ ಸುದೀಪ್-ಪ್ರಿಯಾ ದಂಪತಿ ಮತ್ತೆ ಒಂದಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಕೋರ್ಟ್ ಗೆ ಎಂದೂ ಹಾಜರ್ ಆಗದ ದಂಪತಿ

ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ ಬಳಿಕ ಎಂದೂ ಕೂಡ ಸುದೀಪ್ ಹಾಗೂ ಪ್ರಿಯಾ ನ್ಯಾಯಾಲಯದ ಮುಂದೆ ಹಾಜರ್ ಆಗುತ್ತಿರಲಿಲ್ಲ. ಸತತವಾಗಿ 9 ಬಾರಿ ವಿಚಾರಣೆಗೆ ಗೈರಾದ ಸುದೀಪ್ ದಂಪತಿಗೆ ನ್ಯಾಯಾಧೀಶರು ಕೂಡ ಎಚ್ಚರಿಕೆ ನೀಡಿದ್ದರು. ಆದರೂ ಗೈರಾಗುತ್ತಲೇ ಬಂದ ಸುದೀಪ್-ಪ್ರಿಯಾ ಇದೀಗ ಕೇಸ್ ವಾಪಸ್ ಪಡೆದಿದ್ದಾರೆ.

ಸುದೀಪ್-ಪ್ರಿಯಾ ದಂಪತಿಗೆ ಕೋರ್ಟ್ ನಿಂದ ಕೊನೆ ಅವಕಾಶ.!

ಒಂದಾಗಿ ಕಾಣಿಸಿಕೊಳ್ಳುತ್ತಿದ್ದ ಸುದೀಪ್-ಪ್ರಿಯಾ

ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಸುದೀಪ್ ದಂಪತಿ ವಿಚಾರಣೆಗೆ ಹಾಜರ್ ಆಗುತ್ತಿರಲಿಲ್ಲ. ಆದರೆ, ಕೆಲ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು. 'ಜಿಗರ್ ಥಂಡ' ಆಡಿಯೋ ರಿಲೀಸ್ ಸಮಾರಂಭದಲ್ಲಿ ಸುದೀಪ್, ಪತ್ನಿ ಪ್ರಿಯಾ, ಪುತ್ರಿ ಸಾನ್ವಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇದಾದ್ಮೇಲೆ, ಸುದೀಪ್ ಮತ್ತು ಪ್ರಿಯಾ ಮತ್ತೆ ಒಂದಾಗಲಿದ್ದಾರೆ ಎಂಬ ಗುಸು ಗುಸು ಗಾಂಧಿನಗರದಲ್ಲಿ ಶುರು ಆಗಿತ್ತು. ಈಗ ಅದೇ ಗುಸು ಗುಸು ನಿಜವಾಗಿದೆ.

ಅಚ್ಚರಿ.! ಮನಸ್ತಾಪ ಮರೆತು ಒಂದಾದ್ರಾ ಸುದೀಪ್ ಮತ್ತು ಪತ್ನಿ ಪ್ರಿಯಾ?

Why Kiccha Sudeep Not Celebrate His Birthday? | Filmibeat Kannada

ಇದಕ್ಕಿಂತ ಸಿಹಿ ಸುದ್ದಿ ಬೇಕಾ.?

ಸಾವಿರಾರು ಜನರಿಗೆ ರೋಲ್ ಮಾಡೆಲ್ ಆಗಿರುವ ಕಿಚ್ಚ ಸುದೀಪ್ ರವರ ದಾಂಪತ್ಯದಲ್ಲಿ ಈಗ ಎಲ್ಲವೂ ಸರಿ ಹೋಗಿರುವುದು ಅಭಿಮಾನಿಗಳಿಗೆ ಸಿಹಿ ಹೂರಣ ತಿಂದಷ್ಟೇ ಖುಷಿ ನೀಡಿದೆ. ಕಿಚ್ಚನ ಖುಷಿ ಬಯಸುವ ಫ್ಯಾನ್ಸ್ ಗೆ ಇದಕ್ಕಿಂತ ಸಿಹಿ ಸುದ್ದಿ ಬೇಕಾ.?

English summary
Kiccha Sudeep-Priya Divorce case solved as both agreed to take back the plea before family court.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada