For Quick Alerts
  ALLOW NOTIFICATIONS  
  For Daily Alerts

  ಸಿದ್ದಗಂಗಾ ಮಠಕ್ಕೆ ಸುದೀಪ್, ಇಂದ್ರಜಿತ್ ಲಂಕೇಶ್ ಭೇಟಿ: ಡ್ರಗ್ಸ್ ಬಗ್ಗೆ ಕಿಚ್ಚ ಹೇಳಿದ್ದೇನು?

  |

  ಕನ್ನಡ ಚಿತ್ರರಂಗದಲ್ಲಿ ನಟ-ನಟಿಯರು ಹಾಗೂ ತಂತ್ರಜ್ಞರು ಡ್ರಗ್ಸ್ ಜಾಲದಲ್ಲಿದ್ದಾರೆ ಎಂದು ಆರೋಪಿಸಿರುವ ಇಂದ್ರಜಿತ್ ಲಂಕೇಶ್ ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ. ಅದೇ ಸಂದರ್ಭದಲ್ಲಿ ನಟ ಕಿಚ್ಚ ಸುದೀಪ್ ಸಹ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿರುವುದು ಚರ್ಚೆಗೆ ಕಾರಣವಾಗಿದೆ.

  ಅದ್ದೂರಿಯಾಗಿ ನಡೀತು ಯಶ್ ಮಗನ ನಾಮಕರಣ | Filmibeat Kannada

  ಸುದೀಪ್ ಮತ್ತು ಇಂದ್ರಜಿತ್ ಲಂಕೇಶ್ ಒಟ್ಟಿಗೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿರುವುದು ಹಲವು ಅನುಮಾನ ಹುಟ್ಟಿಸಿದೆ. ಡ್ರಗ್ಸ್ ಹೋರಾಟದಲ್ಲಿ ಇಂದ್ರಜಿತ್‌ಗೆ ಸುದೀಪ್ ಬೆಂಬಲ ನೀಡಿದ್ರಾ ಎಂಬ ಕುತೂಹಲ ಕಾಡಿದೆ. ಈ ಕುರಿತು ಮಾತನಾಡಿದ ಸುದೀಪ್ ''ನಾನು ಇಂದ್ರಜಿತ್ ಸ್ನೇಹಿತರು. ಮಠಕ್ಕೆ ಹೋಗಬೇಕು ಅಂದಾಗ ಇಬ್ಬರು ಜೊತೆಯಾದ್ವಿ ಅಷ್ಟೆ'' ಎಂದಿದ್ದಾರೆ. ಮುಂದೆ ಓದಿ....

  'ಬೇರೆಯವರ ಬಗ್ಗೆ ಮಾತಾಡಲ್ಲ, ಚಿರು ಹೆಸರು ತಂದಿದ್ದು ಬೇಸರ ಆಯ್ತು': ಡ್ರಗ್ಸ್ ಬಗ್ಗೆ ಡಿ ಬಾಸ್ ಪ್ರತಿಕ್ರಿಯೆ

  ಡ್ರಗ್ಸ್ ಬಗ್ಗೆ ನನಗೆ ಗೊತ್ತಿಲ್ಲ

  ಡ್ರಗ್ಸ್ ಬಗ್ಗೆ ನನಗೆ ಗೊತ್ತಿಲ್ಲ

  ''ಡ್ರಗ್ಸ್ ಕುರಿತು ನನಗೆ ಏನೂ ಗೊತ್ತಿಲ್ಲ, ನಮಗೆ ಗೊತ್ತಿರದ ಬಗ್ಗೆ ಮಾತನಾಡುವುದು ಬೇಡ. ಯಾರೋ ಕೆಲವರು ಮಾಡಿದ್ರೆ ಇಂಡಸ್ಟ್ರಿಗೆ ಕಳಂಕ ತರುವುದು ಬೇಡ. ಎಲ್ಲರೂ ಸೇರಿ ಚಿತ್ರರಂಗವನ್ನು ಕಟ್ಟಿದ್ದಾರೆ'' ಎಂದು ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.

  ಪಾರ್ಟಿಗೆ ಕಳಂಕ ತರುವುದು ಬೇಡ

  ಪಾರ್ಟಿಗೆ ಕಳಂಕ ತರುವುದು ಬೇಡ

  ''ಪಾರ್ಟಿಗಳಲ್ಲಿ ಇದೆಲ್ಲ ಆಗುತ್ತೆ ಎನ್ನುವುದು ತಪ್ಪು, ಹಾಗಂತ ಎಲ್ಲ ಪಾರ್ಟಿಗಳನ್ನು ತಪ್ಪಾಗಿ ನೋಡುವುದು ಸರಿಯಿಲ್ಲ. ಒಬ್ಬೊಬ್ಬರು ಒಂದೊಂದು ರೀತಿ ಪಾರ್ಟಿ ಮಾಡ್ತಾರೆ. ಕೆಲವು ಕಡೆ ಏನೋ ನಡೆದಿದೆ ಅಂದಮಾತ್ರಕ್ಕೆ ಎಲ್ಲ ಪಾರ್ಟಿಗಳು ಹಾಗೆ ಎನ್ನುವುದು ಸರಿಯಿಲ್ಲ'' ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

  ಡ್ರಗ್ಸ್ ವಿವಾದದ ನಡುವೆ 'ಕನ್ನಡ ಸ್ಟಾರ್ಸ್'ಗಳ ಮೇಲೆ ಮತ್ತೊಂದು ಆರೋಪ ಮಾಡಿದ ಚೇತನ್

  ಪ್ರಶಾಂತ್ ಸಂಬರ್ಗಿ ಯಾರು ಎಂದು ಗೊತ್ತಿಲ್ಲ

  ಪ್ರಶಾಂತ್ ಸಂಬರ್ಗಿ ಯಾರು ಎಂದು ಗೊತ್ತಿಲ್ಲ

  ಇನ್ನು ಕೆಪಿಎಲ್ ಟೂರ್ನಿ ಹಾಗೂ ಸ್ಯಾಂಡಲ್‌ವುಡ್‌ನಲ್ಲಿರುವ ಡ್ರಗ್ಸ್ ಜಾಲಕ್ಕೆ ಸಂಬಂಧ ಇದೆ ಎಂದು ಪ್ರಶಾಂತ್ ಸಂಬರ್ಗಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸುದೀಪ್ ''ಪ್ರಶಾಂತ್ ಸಂಬರ್ಗಿ ಯಾರೆಂದು ಗೊತ್ತೇ ಇಲ್ಲ'' ಎಂದು ಸ್ಪಷ್ಟನೆ ನೀಡಿದ್ದಾರೆ.

  English summary
  Kiccha Sudeep and director indrajit lankesh was visit Siddaganga Mutt together today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X