»   » 'ಹೃದಯವಂತ' ಡಾ.ವಿಷ್ಣುವರ್ಧನ್ ಬಗ್ಗೆ ಸುದೀಪ್ ಮನದ ಮಾತು

'ಹೃದಯವಂತ' ಡಾ.ವಿಷ್ಣುವರ್ಧನ್ ಬಗ್ಗೆ ಸುದೀಪ್ ಮನದ ಮಾತು

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ 'ಅಭಿನಯ ಭಾರ್ಗವ' ಡಾ.ವಿಷ್ಣುವರ್ಧನ್ ಬಿಟ್ಟು ಹೋದ ಸ್ಥಾನವನ್ನ ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಆದರೆ, ಅಭಿಮಾನಿಗಳು ಮಾತ್ರ ಕಿಚ್ಚ ಸುದೀಪ್ ರವರಲ್ಲಿ 'ಯಜಮಾನ' ವಿಷ್ಣುವರ್ಧನ್ ರವರನ್ನ ಕಾಣುತ್ತಿದ್ದಾರೆ.

ವಿಷ್ಣು ಅಭಿಮಾನಿಗಳಿಗೆ ಬ್ಯಾಂಕಾಕ್'ನಿಂದ ಬಂತು ಕಿಚ್ಚನ ವಿಡಿಯೋ ಸಂದೇಶ

ಕಿಚ್ಚ ಸುದೀಪ್ ಗೂ ಅಷ್ಟೇ... ಡಾ.ವಿಷ್ಣುವರ್ಧನ್ ಅಂದ್ರೆ ಪ್ರಾಣ. ವಿಷ್ಣುದಾದಾ ಅವರ ಚಿತ್ರಗಳೆಂದರೆ ಸುದೀಪ್ ಗೆ ಅಚ್ಚುಮೆಚ್ಚು. ಇಂದು ಡಾ.ವಿಷ್ಣುವರ್ಧನ್ ರವರ ಜನ್ಮದಿನೋತ್ಸವ. ನೆಚ್ಚಿನ ನಾಯಕನ ಜನ್ಮದಿನೋತ್ಸವದಂದು 'ಹೃದಯವಂತ' ಡಾ.ವಿಷ್ಣುವರ್ಧನ್ ಬಗ್ಗೆ ಸುದೀಪ್ ಮನಸಾರೆ ಆಡಿರುವ ಮಾತುಗಳು ಹೀಗಿವೆ...

Kiccha Sudeep remembers Dr.Vishnuvardhan

''ಡಾ.ವಿಷ್ಣುವರ್ಧನ್ ರವರೊಂದಿಗೆ ಕಳೆದ ಅಮೂಲ್ಯ ಕ್ಷಣಗಳಿಗೆ ಎಷ್ಟೇ ಧನ್ಯವಾದ ಸಲ್ಲಿಸಿದರೂ ಸಾಲದು. ಅವರು ನನ್ನ ಹೀರೋ. ಸದಾ ಕಾಲ ಅವರೇ ನನಗೆ ಹೀರೋ. ಇಷ್ಟು ಬೇಗ ಅವರು ನಮ್ಮನ್ನ ಬಿಟ್ಟು ಹೋಗಬಾರದಿತ್ತು. ಸೆಪ್ಟೆಂಬರ್ 18 ಸದಾ ನನಗೆ ವಿಶೇಷವಾದ ದಿನ'' ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

ವಿಷ್ಣು ದಾದನ ಈ ಪುತ್ಥಳಿ ಮಾಡಿದ 'ಶಿಲ್ಪಿ'ಗೆ ಸುದೀಪ್ ಸಲ್ಯೂಟ್

'ನಂ.73, ಶಾಂತಿ ನಿವಾಸ' ಹಾಗೂ 'ಮಾತಾಡ್ ಮಾತಾಡು ಮಲ್ಲಿಗೆ' ಚಿತ್ರಗಳಲ್ಲಿ ಸುದೀಪ್ ಹಾಗೂ ಡಾ.ವಿಷ್ಣುವರ್ಧನ್ ತೆರೆ ಹಂಚಿಕೊಂಡಿದ್ದರು.

English summary
Kiccha Sudeep remembers Dr.Vishnuvardhan. Check out Sudeep's Tweet.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X