»   » ಸೈಲೆಂಟಾಗಿ ಮುಹೂರ್ತ ಮುಗಿಸಿದ ಸುದೀಪ್ 3 ಚಿತ್ರಗಳು!

ಸೈಲೆಂಟಾಗಿ ಮುಹೂರ್ತ ಮುಗಿಸಿದ ಸುದೀಪ್ 3 ಚಿತ್ರಗಳು!

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ 'ರನ್ನ' ರಿಲೀಸ್ ಆಗಿದೆ. ಎಲ್ಲೆಲ್ಲೂ ತುಂಬಿದ ಚಿತ್ರಮಂದಿರಗಳ ಪ್ರದರ್ಶನ ಕಾಣುತ್ತಿದೆ. ಮುಂದೆ..? ಸುದೀಪ್ ಮುಂಬರುವ ಚಿತ್ರ ಯಾವುದು? ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

ಕಿಚ್ಚ ಸುದೀಪ್ ಮತ್ತು 'ಮಿಲನ' ಪ್ರಕಾಶ್ ಕಾಂಬಿನೇಷನ್ ನಲ್ಲಿ ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ ಅಂತ ಈ ಹಿಂದೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ವರದಿ ಮಾಡಿತ್ತು. ಈ ಚಿತ್ರದ ಮುಹೂರ್ತ ನಿನ್ನೆ ಸದ್ದಿಲ್ಲದೆ ನೆರವೇರಿದೆ. ['ಸಿದ್ದಾರ್ಥ' ಬಳಿಕ ಕಿಚ್ಚನ ಚಿತ್ರಕ್ಕೆ 'ಮಿಲನ' ಪ್ರಕಾಶ್ ರೆಡಿ]

Kiccha Sudeep starrer 3 movies goes on floor

ಹೌದು, ನಿನ್ನೆ ಮುಂಜಾನೆ 5.30 ರ ಸುಮಾರಿಗೆ ಕಿಚ್ಚ ಸುದೀಪ್ ಅವರ ಮೂರು ಚಿತ್ರಗಳ ಮುಹೂರ್ತ ಸಮಾರಂಭ ನೆರವೇರಿದೆ. 'ಗಜಕೇಸರಿ' ಕೃಷ್ಣ ನಿರ್ದೇಶನದಲ್ಲಿ ಮೂಡಿಬರಲಿರುವ 'ಹೆಬ್ಬುಲಿ', 'ಮಿಲನ' ಪ್ರಕಾಶ್ ಆಕ್ಷನ್ ಕಟ್ ಹೇಳಲಿರುವ ಇನ್ನೂ ಹೆಸರಿಡದ ಚಿತ್ರ ಮತ್ತು ಯುವ ನಟ ರಾಹುಲ್ ಮುಖ್ಯಭೂಮಿಕೆಯಲ್ಲಿ, ಸುದೀಪ್ ವಿಶೇಷ ಪಾತ್ರದಲ್ಲಿ ನಟಿಸಲಿರುವ ತಮಿಳಿನ 'ಜಿಗರ್ತಾಂಡ' ರೀಮೇಕ್ ಚಿತ್ರದ ಮುಹೂರ್ತ ಒಟ್ಟಿಗೆ ನಡೆದಿದೆ. [ಸುದೀಪ್ ಅಭಿನಯದ 'ಹೆಬ್ಬುಲಿ'ಯಲ್ಲಿ ಅಮಿತಾಬ್ ಬಚ್ಚನ್]

ಬೆಂಗಳೂರಿನ ಮೋದಿ ಆಸ್ಪತ್ರೆ ರಸ್ತೆಯಲ್ಲಿರುವ ಗಣೇಶ ದೇವಸ್ಥಾನದಲ್ಲಿ ಮುಹೂರ್ತ ನಡೆದಿದ್ದು, ನಂತರ ಚಾಮರಾಜಪೇಟೆಯ ಕೋಟೆ ವೆಂಕಟೇಶ್ವರ ದೇವಸ್ಥಾನದಲ್ಲಿ ಪೂಜಾ ಕಾರ್ಯಗಳು ನೆರವೇರಿದೆ.

Kiccha Sudeep starrer 3 movies goes on floor

'ಹೆಬ್ಬುಲಿ' ಚಿತ್ರದ ಶೂಟಿಂಗ್ ಇನ್ನು 20 ದಿನಗಳಲ್ಲಿ ಶುರುವಾಗಲಿದೆ. ಅದಾದ ನಂತ್ರ 'ಮಿಲನ' ಪ್ರಕಾಶ್ ನಿರ್ದೇಶನದ ಚಿತ್ರ ಸೆಟ್ಟೇರಲಿದೆ. ಈ ಮೂರು ಚಿತ್ರಗಳು ಸುದೀಪ್ ಅವರ 'ಕಿಚ್ಚ ಕ್ರಿಯೇಷನ್ಸ್' ಸಹಯೋಗದೊಂದಿಗೆ ಎಸ್.ಆರ್.ವಿ.ಪ್ರೊಡಕ್ಷನ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿದೆ. ಅಲ್ಲಿಗೆ ಇನ್ನೆರಡು ವರ್ಷ ಸುದೀಪ್ ಫುಲ್ ಬಿಜಿ.

English summary
Kiccha Sudeep starrer 'Hebbuli' and 'Production No.1' directed by 'Milana' Prakash was officially launched yesterday (June 7th). Along with this, muhoortha of Tamil movie 'Jigartanda' remake flick with Rahul in lead and Sudeep in Special role was also held. All three movies will be produced under SRV Productions in association with Kiccha creations.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada