»   » ವಿತರಕರಿಗೆ 'ರನ್ನ' ನಿರ್ಮಾಪಕ ಚಂದ್ರಶೇಖರ್ ಗುನ್ನ

ವಿತರಕರಿಗೆ 'ರನ್ನ' ನಿರ್ಮಾಪಕ ಚಂದ್ರಶೇಖರ್ ಗುನ್ನ

Posted By:
Subscribe to Filmibeat Kannada

ಸೆಟ್ಟೇರಿದಾಗಿನಿಂದಲೂ ಒಂದಲ್ಲಾ ಒಂದು ವಿವಾದದಿಂದ 'ರನ್ನ' ಚಿತ್ರ ಸದ್ದು-ಸುದ್ದಿ ಮಾಡುತ್ತಿದೆ. ಈಗ 'ರನ್ನ' ಸಿನಿಮಾ ರಿಲೀಸ್ ಆಗಿ ನಾಲ್ಕು ದಿನಗಳು ಕಳೆದಿವೆ. ಈಗಲೂ 'ರನ್ನ' ಹೊಸ ವಿವಾದದಿಂದ ಸೌಂಡ್ ಮಾಡ್ತಿದೆ.

ವಿತರಣೆ ಹಣವನ್ನ ನೀಡದ ಕಾರಣಕ್ಕೆ 'ರನ್ನ' ಚಿತ್ರ ನಿರ್ಮಾಪಕ ಚಂದ್ರಶೇಖರ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದಾರೆ. ವಿತರಣಾ ಹಕ್ಕು ಪಡೆದಿದ್ದ ಗೋಕುಲ್ ಫಿಲ್ಮ್ಸ್ ಮಾಲೀಕ ಬಲರಾಮ್ ವಿರುದ್ಧ ನಿರ್ಮಾಪಕ ಚಂದ್ರಶೇಖರ್ ದೂರು ನೀಡಿದ್ದಾರೆ. [ಚಿತ್ರ ವಿಮರ್ಶೆ; ಕಳೆಗುಂದಿಲ್ಲ ಸುದೀಪ್ 'ರನ್ನ'ನ ರಂಗು]


Kiccha Sudeep starrer 'Ranna' in controversy again

ವಾಣಿಜ್ಯ ಮಂಡಳಿ ಅಧ್ಯಕ್ಷ ಥಾಮಸ್ ಡಿಸೋಜ ಮತ್ತು ಕಾರ್ಯದರ್ಶಿ ಬಾಮಾ ಹರೀಶ್ ನೇತೃತ್ವದಲ್ಲಿ ಸಭೆ ನಡೆದಿದ್ದು, ನಿರ್ಮಾಪಕರಿಗೆ ಹಣ ನೀಡುವಂತೆ ವಿತರಕ ಬಲರಾಮ್ ಅವರಿಗೆ ಸೂಚನೆ ನೀಡಲಾಗಿದೆ. ['ರನ್ನ'ನ ಅಬ್ಬರಕ್ಕೆ ಬಾಕ್ಸ್ ಆಫೀಸ್ ಚಿಂದಿ ಚಿತ್ರಾನ್ನ!]


ಮೂರು ದಿನಗಳಲ್ಲಿ ಕಿಚ್ಚ ಸುದೀಪ್-ರಚಿತಾ ರಾಮ್ ಅಭಿನಯದ 'ರನ್ನ' ಸುಮಾರು 10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು ಅನ್ನುವ ಸುದ್ದಿ ಗಾಂಧಿನಗರದಿಂದ ಹೊರಬಂದಿತ್ತು.

English summary
Kiccha Sudeep starrer 'Ranna' is in controversy again. Producer Chandrashekar has given a complaint to KFCC against Distributor Balaram, for not giving the money earned from Distribution.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada