»   » ದಾಖಲೆ ಮೊತ್ತಕ್ಕೆ 'ರನ್ನ' ಪ್ರಸಾರ ಹಕ್ಕು ಮಾರಾಟ

ದಾಖಲೆ ಮೊತ್ತಕ್ಕೆ 'ರನ್ನ' ಪ್ರಸಾರ ಹಕ್ಕು ಮಾರಾಟ

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರ 'ರನ್ನ'. ನಂದಕಿಶೋರ್ ನಿರ್ದೇಶನದಲ್ಲಿ ರೆಡಿಯಾಗಿರುವ 'ರನ್ನ' ಚಿತ್ರ ಜೂನ್ 4 ರಂದು ತೆರೆಗೆ ಅಪ್ಪಳಿಸಲಿದೆ. ಮೊನ್ನೆಯಷ್ಟೇ ರಿಲೀಸ್ ಆಗಿರುವ 'ರನ್ನ' ಚಿತ್ರದ ಹೊಚ್ಚ ಹೊಸ ಟ್ರೇಲರ್ ಎಲ್ಲೆಡೆ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ.

ಈ ನಡುವೆ 'ರನ್ನ' ಅಡ್ಡದಿಂದ ಬ್ರೇಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ. 'ರನ್ನ' ಚಿತ್ರದ ಸ್ಯಾಟೆಲೈಟ್ ರೈಟ್ಸ್ ಗೆ ಪ್ರತಿಷ್ಠಿತ ಚಾನೆಲ್ ವೊಂದು 5 ಕೋಟಿ ರೂಪಾಯಿ ಕೋಟ್ ಮಾಡಿದೆ ಅಂತ ನಾವೇ ವರದಿ ಮಾಡಿದ್ವಿ.


Kiccha Sudeep starrer 'Ranna' Satellite rights sold for Rs.5 crores

ಆ ಸುದ್ದಿ ಇದೀಗ ನಿಜವಾಗಿದೆ. ಉದಯ ಟಿವಿ ಮತ್ತು 'ರನ್ನ' ಚಿತ್ರತಂಡದ ನಡುವೆ ಮಾತುಕತೆ ಸಫಲವಾಗಿರುವ ಕಾರಣ 'ರನ್ನ' ಚಿತ್ರದ ಪ್ರಸಾರ ಹಕ್ಕುಗಳು ಬರೋಬ್ಬರಿ 5 ಕೋಟಿ ರೂಪಾಯಿಗೆ ಮಾರಾಟವಾಗಿದೆ. ['ರನ್ನ' ಸ್ಯಾಟೆಲೈಟ್ ರೈಟ್ಸ್ ಅಬ್ಬಬ್ಬಾ ಅಷ್ಟೊಂದಾ?]


ಈ ವಿಚಾರವನ್ನ ತರುಣ್ ಸುಧೀರ್ 'ಫಿಲ್ಮಿಬೀಟ್ ಕನ್ನಡ'ಗೆ ಖಚಿತ ಪಡಿಸಿದರು. ಸ್ಯಾಟೆಲೈಟ್ ರೈಟ್ಸ್ ಮಾರಾಟವಾಗದೆ ಅದೆಷ್ಟೋ ಚಿತ್ರಗಳು ಡಬ್ಬದಲ್ಲಿ ಹಾಗೇ ಉಳಿದಿವೆ. ಅಂಥದ್ರಲ್ಲಿ ರೀಮೇಕ್ ಚಿತ್ರವಾದರೂ ಸುದೀಪ್ ಮಾರುಕಟ್ಟೆ ಗಾಂಧಿನಗರದಲ್ಲಿ ಎಷ್ಟಿದೆ ಅನ್ನುವುದಕ್ಕೆ ಇದು ಸಣ್ಣ ಉದಾಹರಣೆ ಅಷ್ಟೆ.['ರನ್ನ' ಚಿತ್ರದ ಸೂಪರ್ ಸಾಂಗ್ ಟೀಸರ್ ರಿಲೀಸ್]


Kiccha Sudeep starrer 'Ranna' Satellite rights sold for Rs.5 crores

ರೀಮೇಕ್ ಚಿತ್ರವೇ ಆದರೂ, ತಮ್ಮದೇ ಸ್ಪೆಷಲ್ ಸ್ಟೈಲ್ ನಲ್ಲಿ ರಿಚ್ ಆಗಿ 'ರನ್ನ'ನನ್ನ ರೆಡಿಮಾಡಿದ್ದಾರೆ ನಿರ್ದೇಶಕ ನಂದಕಿಶೋರ್. ರಚಿತಾ ರಾಮ್, ಮಧೂ, ಹರಿಪ್ರಿಯಾ, ಸಾಧು ಕೋಕಿಲ, ಚಿಕ್ಕಣ್ಣ ರಂತಹ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ. ಮುಂದಿನ ವಾರ 'ರನ್ನ'ನ ಗ್ರ್ಯಾಂಡ್ ಎಂಟ್ರಿ ಆಗಲಿದೆ. ಅಪ್ಪುಗೆ ಇಂದ 'ರನ್ನ'ನನ್ನ ಬರಮಾಡಿಕೊಳ್ಳುವುದಕ್ಕೆ ನೀವು ರೆಡಿಯಾಗಬೇಕಷ್ಟೆ. (ಫಿಲ್ಮಿಬೀಟ್ ಕನ್ನಡ)

English summary
Kiccha Sudeep starrer 'Ranna' is all set to release on June 4th. Meanwhile, Tarun Sudheer confirmed that Udaya TV has acquired 'Ranna' Satellite rights for Rs.5 Crore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada