»   » 'ಫೇಸ್ ಬುಕ್ ಲೈವ್'ನಲ್ಲಿ ಸುದೀಪ್: 'ದಿ ವಿಲನ್' ಕಥೆ ಬಿಚ್ಚಿಟ್ಟ ಕಿಚ್ಚ

'ಫೇಸ್ ಬುಕ್ ಲೈವ್'ನಲ್ಲಿ ಸುದೀಪ್: 'ದಿ ವಿಲನ್' ಕಥೆ ಬಿಚ್ಚಿಟ್ಟ ಕಿಚ್ಚ

Posted By:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಒಟ್ಟಾಗಿ ಅಭಿನಯಸುತ್ತಿರುವ 'ದಿ ವಿಲನ್' ಚಿತ್ರದ ಟೀಸರ್ ಚಿತ್ರೀಕರಣ ಇಂದಿನಿಂದ ಶುರುವಾಗಿದ್ದು, ಚಿತ್ರೀಕರಣಕ್ಕೂ ಮುಂಚೆ ಕಿಚ್ಚ ಸುದೀಪ್ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದರು.[10 ದಿನದಲ್ಲಿ ರಿಲೀಸ್ ಆಗಲಿದೆಯಂತೆ 'ದಿ ವಿಲನ್' ಫಸ್ಟ್ ಲುಕ್]

ಜೋಗಿ ಪ್ರೇಮ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಇಂದು 'ದಿ ವಿಲನ್' ಚಿತ್ರಕ್ಕೆ ಸಂಬಂಧಿಸಿದಂತೆ ಸುದೀಪ್ ಅವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ಸುದೀಪ್ 'ದಿ ವಿಲನ್' ಚಿತ್ರದ ಅಸಲಿ ಕಥೆ ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ..

ಮೊದಲ ಬಾರಿಗೆ ಸುದೀಪ್ 'ಫೇಸ್ ಬುಕ್ ಲೈವ್'

'ದಿ ವಿಲನ್' ಚಿತ್ರದ ಟೀಸರ್ ಚಿತ್ರೀಕರಣ ವೇಳೆ, ಕಿಚ್ಚ ಸುದೀಪ್ ಅವರು 'ಫೇಸ್ ಬುಕ್ ಲೈವ್'ನಲ್ಲಿ ಅಭಿಮಾನಿಗಳ ಜೊತೆ ಮಾತನಾಡಿದ್ದು, ಇದು ಕಿಚ್ಚನ ಮೊದಲ ಫೇಸ್ ಬುಕ್ ಲೈವ್ ಆಗಿದೆ.

'ಮಲ್ಟಿಸ್ಟಾರ್' ಸಿನಿಮಾ ಮಾಡ್ತಿರೋದು ಯಾಕೆ?

''ನಾನು, ನನ್ನ ಸಿನಿಮಾ ಅಂತ ಬಂದಾಗ ಮಲ್ಟಿಸ್ಟಾರ್ ಸಿನಿಮಾ ಎನ್ನುವುದು ಕಷ್ಟ. ನಾನು, ನನ್ನದು ಎಂಬುದನ್ನ ದಾಟಿ ಈಗ ಬಂದಿರುತ್ತೇವೆ. ಇಂಡಸ್ಟ್ರಿಯಲ್ಲಿ ನಮಗೆ ಸಿಗುತ್ತಿರುವ ಪ್ರೀತಿ, ಜನಗಳನ್ನ ನಮ್ಮನ್ನ ಇಷ್ಟಪಡುತ್ತಿರುವ ರೀತಿ ಕಣ್ಣಿಗೆ ಬೀಳುತ್ತೆ. ಇದು ಕಣ್ಣಿಗೆ ಬಿದ್ದಾಗ, ನಾನು, ನನ್ನ ಸಿನಿಮಾ ಎಂಬುದು ಮರೆತುಹೋಗುತ್ತೆ. ಪರಸ್ಪರ ಕಲಾವಿದರ ಬಗ್ಗೆ ಗೌರವ ಹೆಚ್ಚಾಗುತ್ತೆ. ಈ ಟೈಮ್ ನಲ್ಲಿ ಮಲ್ಟಿಸ್ಟಾರ್ ಸಿನಿಮಾ ಶುರುವಾಗುತ್ತೆ''[ಸುದೀಪ್-ಶಿವಣ್ಣನ 'ದಿ ವಿಲನ್'ಗೆ ಬ್ರಿಟಿಷ್ ದೇಶದ ನಾಯಕಿ! ]

ಶಿವಣ್ಣನ ಬಗ್ಗೆ ಸುದೀಪ್ ಹೇಳಿದ್ದೇನು?

ಶಿವರಾಜ್ ಕುಮಾರ್ ಅವರಿಗೆ ನಾವೆಲ್ಲ ಕಾಂಪಿಟೇಟರ್ ಅಲ್ಲ. ಅವರು ಡಾ.ರಾಜ್ ಕುಮಾರ್ ಅವರೊಂದಿಗೆ ಕಾಂಪಿಟ್ ಮಾಡಿ ಬೆಳದವರು. ಕನ್ನಡದ ದಿಗ್ಗಜ ನಟರ ಜೊತೆ ಅಭಿನಯಿಸಿದವರು. ನಾವೆಲ್ಲ 'ಅಡ್ಮೈರ್ಸ್' ಅಂತ ಹೇಳಬಹುದು. ಇಂದು ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕಿದೆ. ನನಗೆ ಸಂತಸವಾಗಿದೆ. ಸ್ಕ್ರೀನ್ ಅಂತ ಬಂದಾಗ, ಅವರು ಅವರಾಗಿರುತ್ತಾರೆ, ನಾನು ನಾವಾಗಿರುತ್ತೇನೆ, ಅದು ಅವರ ಪಾತ್ರ, ಇದು ನನ್ನ ಪಾತ್ರ ಅಂತಿವಿ. ಅವರು ಸುದೀಪ್ ಅಂತ ನೋಡುವುದು ತಪ್ಪಾಗುತ್ತೆ. ನಾನು ಶಿವಣ್ಣ ಅಂತ ನೋಡುವುದು ತಪ್ಪಾಗುತ್ತೆ.[ಶಿವರಾಜ್ ಕುಮಾರ್ ಮತ್ತು ಸುದೀಪ್: ಇಬ್ಬರಲ್ಲಿ 'ವಿಲನ್' ಯಾರು.?]

ಈ ಸಿನಿಮಾ ಶುರುವಾಗಿದ್ದು ಹೇಗೆ?

''ನಾಲ್ಕು ವರ್ಷದ ಹಿಂದೆ ಈ ಸಿನಿಮಾ ಶುರುವಾಗಿದ್ದು. ಮಲ್ಲೇಶ್ವರಂ ಮೈದಾನದಲ್ಲಿ ನಾವು ಒಂದು ಕಾರ್ಯಕ್ರಮಕ್ಕೆ ಹೋಗಿದ್ದೀವಿ. ಅಲ್ಲಿ ಪ್ರೇಮ್ ಕೂಡ ಬಂದಿದ್ದರು. ವೇದಿಕೆ ಮೇಲೆ ಕೂತಿರಬೇಕಾದ್ರೆ ನನಗೆ ತುಂಬಾ ಹೊಟ್ಟೆ ಹಸಿತಾ ಇತ್ತು. ಆಗ ಪ್ರೇಮ್ ಅವರಿಗೆ ಹೇಳಿದೆ, ಎಲ್ಲಾದ್ರೂ ಹೋಟೆಲ್ ಗೆ ಹೋಗ್ಬೇಕು ನನಗೆ ಆಗ್ತಿಲ್ಲ ಅಂತ. ಆಗ ಅವರ ಮನೆ ಅಲ್ಲೆ ಇತ್ತು. ಸೋ ಮನೆಗೆ ಕರೆದುಕೊಂಡು ಹೋದರು. ಊಟ ಮಾಡ್ತಿರಬೇಕಾದ್ರೆ ಒಂದು ಸಿನಿಮಾ ಮಾಡೋಣ ಅಂತ ಡಿಸೈಡ್ ಆಗಿದ್ದು.

'ದಿ ವಿಲನ್' ಬಗ್ಗೆ ನಿರೀಕ್ಷೆ ಹೇಗಿದೆ?

'ಮಲ್ಟಿಸ್ಟಾರ್' ಅಂದಾಗ ನಾವಿಬ್ಬರೇ ಅಷ್ಟೊಂದು ಎಕ್ಸೈಟ್ ಆಗ್ತಿವಿ ಅಂದ್ಮೇಲೆ, ಜನರಿಗೆ ಹೇಗಿರುತ್ತೆ. ಈಗ ನಮ್ಮಿಬ್ಬರಿಗಿಂತ ಈಗ ಪ್ರೇಮ್ ಅವರ ಮೇಲೆ ಜವಾಬ್ದಾರಿ ಹೆಚ್ಚಿದೆ. ಸೋ ಇದು ಚೆನ್ನಾಗಿ ಕೊಟ್ಟರೆ, ಮುಂದೆ ಕೂಡ ಮಲ್ಟಿಸ್ಟಾರ್ ಸಿನಿಮಾಗಳು ಬರುತ್ತೆ.[ಸುದೀಪ್ ಅವರ 'ಫೇಸ್ ಬುಕ್ ಲೈವ್' ವಿಡಿಯೋ ಇಲ್ಲಿದೆ ನೋಡಿ]

English summary
Sudeep and Shiva Rajkumar Starring 'The Villain' Movie Teaser Shooting Start From Today (February 10th). The Movie Directed Jogi Prem. Before Going to Teaser Shoot, Sudeep Talks in Facebook Live.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada