For Quick Alerts
  ALLOW NOTIFICATIONS  
  For Daily Alerts

  ದರ್ಶನ್ 'ಸಂಗೊಳ್ಳಿ ರಾಯಣ್ಣ' ಸೇರಿದ ಕಿಚ್ಚ ಸುದೀಪ್

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದ 'ಸಂಗೊಳ್ಳಿ ರಾಯಣ್ಣ' ಚಿತ್ರಕ್ಕೆ ಸುದೀಪ್ ಸೇರ್ಪಡೆಯಾಗಿದೆ. ಹಾಗೆಂದು ಅವರೇನೂ ಅದರಲ್ಲಿ ವಿಲನ್ ಅಲ್ಲ, ಅತಿಥ ಪಾತ್ರದಲ್ಲೂ ಇಲ್ಲ. ಆದರೂ ಚಿತ್ರದ ಮೊದಲಲ್ಲಿ ಮತ್ತ ಕೊನೆಯಲ್ಲಿ ಸುದೀಪ್ ತಮ್ಮ ಧ್ವನಿಯ ಮೂಲಕ ಆ ಚಿತ್ರವನ್ನು ಸೇರಿಕೊಂಡಿದ್ದಾರೆ. ಹಿಪ್ನಾಟಿಸಂ ಮಾಡುವಂತಿರುವ ಸುದೀಪ್ ಕಂಚಿನ ಕಂಠ, 'ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿ ಪ್ರೇಕ್ಷಕರಿಗೆ ಕೇಳಿಸಲಿದೆ.

  ಐತಿಹಾಸಿಕ 'ಸಂಗೊಳ್ಳಿ ರಾಯಣ್ಣ' ಚಿತ್ರದ ಪ್ರಾರಂಭ ಮತ್ತು ಅಂತ್ಯದಲ್ಲಿ ಕಾಮೆಂಟರಿಯೊಂದನ್ನು ಅಳವಡಿಸಲು ಚಿತ್ರತಂಡ ನಿರ್ಧರಿಸಿದೆ. ಅದರಲ್ಲಿ ಸಂಗೊಳ್ಳಿ ರಾಯಣ್ಣರ ಕುರಿತು ಬಹಳಷ್ಟು ವಿವರಗಳಿವೆ. ಅವರ ದೇಶಭಕ್ತಿ, ಸ್ವಾಮಿ ನಿಷ್ಠೆ, ತ್ಯಾಗ ಬಲಿದಾನಗಳ ಕುರಿತು ವಿವರಗಳಿವೆ. ಇದನ್ನು ತಮ್ಮ ಧ್ವನಿಯ ಮೂಲಕ ನಿನ್ನೆ (03 ಸೆಪ್ಟೆಂಬರ್) ಕರಿಸುಬ್ಬು ಸ್ಟುಡಿಯೋದಲ್ಲಿ ಕಿಚ್ಚ ಸುದೀಪ್ ವಿವರಿಸಿದ್ದನ್ನು ರೆಕಾರ್ಡ್ ಮಾಡಲಾಗಿದೆ.

  ಇದಕ್ಕೂ ಮುನ್ನ ಸುದೀಪ್ ಅವರು 'ಕಠಾರಿವೀರ ಸುರಸುಂದರಾಂಗಿ' ಚಿತ್ರಕ್ಕೂ ತಮ್ಮ ಧ್ವನಿ ನೀಡಿದ್ದರು. ಅಲ್ಲಿ ಸೂಪರ್ ಸ್ಟಾರ್ ಉಪೇಂದ್ರರಿಗೆ ಧ್ವನಿ ನೀಡಿ ಮೆಚ್ಚುಗೆ ಗಳಿಸಿದ್ದ ಸುದೀಪ್, 'ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿ ತಮ್ಮ ಆಪ್ತ ಸ್ನೇಹಿತ ದರ್ಶನ್ ಅವರಿಗಾಗಿ ಈ ಕಾರ್ಯ ಮಾಡಿದ್ದಾರೆ. ಸುದೀಪ್ ಧ್ವನಿ ನೀಡುವಾಗ ಚಿತ್ರದ ನಾಯಕ ಹಾಗೂ ಸುದೀಪ್ ಸ್ನೇಹಿತ ದರ್ಶನ್ ಸಹಿ ಇದ್ದರು.

  ಈ ಸಂದರ್ಭದಲ್ಲಿ 'ಸಂಗೊಳ್ಳಿ ರಾಯಣ್ಣ' ಚಿತ್ರತಂಡವು ಸೆಪ್ಟೆಂಬರ್ 02 ರಂದು ನಡದ ಸುದೀಪ್ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಮತ್ತೊಮ್ಮೆ ಆಚರಿಸಿ ಸಂಭ್ರಮಿಸಿತು. ಈ ವೇಳೆಯಲ್ಲಿ ಸುದೀಪ್ ಹಾಗೂ ದರ್ಶನ್ ಅವರ ಬಹಳಷ್ಟು ಅಭಿಮಾನಿಗಳು ಸೇರಿ ಸಂತಸ ಹಂಚಿಕೊಂಡರು. ಒಟ್ಟಿನಲ್ಲಿ ದರ್ಶನ್ 'ಸಂಗೊಳ್ಳಿ ರಾಯಣ್ಣ'ದಲ್ಲಿ ಸುದೀಪ್ ಧ್ವನಿ ಪ್ರೇಕ್ಷಕರಿಗೆ ಭಾರಿ ಬೋನಸ್ ಎಂಬುದಂತೂ ಗ್ಯಾರಂಟಿ. (ಒನ್ ಇಂಡಿಯಾ ಕನ್ನಡ)

  English summary
  Kichcha Sudeep offered his Voice for the commentary on Sangolli Rayanna in Challenging Star Darshan's upcoming Kannada Movie Sangolli Rayanna. Yesterday, on 03 September 2012, the commentary was recorded at Karisubbu Studio for the movie.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X