For Quick Alerts
  ALLOW NOTIFICATIONS  
  For Daily Alerts

  ಚತುರ್ಭಾಷಾ ಚಿತ್ರಕ್ಕೆ ಕಿಚ್ಚ ಸುದೀಪ್ ಆಕ್ಷನ್, ಕಟ್

  By Rajendra
  |
  ಕಿಚ್ಚ ಸುದೀಪ್ ಅವರಿಗೆ ಆಕ್ಷನ್ ಕಟ್ ಹೊಸದಲ್ಲ ಬಿಡಿ. ಈ ಹಿಂದೆ ಅವರು ಮೈ ಆಟೋಗ್ರಾಫ್, ನಂ.73 ಶಾಂತಿನಿವಾಸ, ವೀರಮದಕರಿ, ಜಸ್ಟ್ ಮಾತ್ ಮಾತಲ್ಲಿ, ಕೆಂಪೇಗೌಡ ಚಿತ್ರಗಳನ್ನು ನಿರ್ದೇಶಿಸಿ ಗೆದ್ದಿದ್ದಾರೆ. ಈಗ ಮತ್ತೊಂದು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಸಿದ್ಧವಾಗಿದ್ದಾರೆ.

  ಈ ಬಾರಿ ಅವರು ಐತಿಹಾಸಿಕ ಕಾಲ್ಪನಿಕ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಸದ್ಯಕ್ಕೆ ಈ ಚಿತ್ರದ ಪ್ರೀಪ್ರೊಡಕ್ಷನ್ ಕೆಲಸ ಭರದಿಂದ ನಡೆಯುತ್ತಿದೆ. ಚಿತ್ರಕಥೆ ರಚನೆಯಲ್ಲಿ ಸುದೀಪ್ ಮುಳುಗಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಚಿತ್ರೀಕರಣಗೊಳ್ಳಲಿದೆ.

  ಚಿತ್ರ ಕಾಲ್ಪನಿಕವಾಗಿರುವುದರಿಂದ ಯಾವುದೇ ಐತಿಹಾಸಿಕ ವ್ಯಕ್ತಿಯನ್ನು ಆಧರಿಸಿರುವುದಿಲ್ಲವಂತೆ. ಆದರೆ ಹಾರ್ಸ್ ಚೇಸಿಂಗ್, ರೈಡಿಂಗ್ ಎಲ್ಲವೂ ಇರುತ್ತದೆ ಎನ್ನುತ್ತಾರೆ ಸುದೀಪ್.

  ಬಾಲಿವುಡ್ ನಟರಾದ ಸುನಿಲ್ ಶೆಟ್ಟಿ, ಅರ್ಜುನ್ ರಾಂಪಾಲ್ ಅವರು ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಚಿತ್ರದಲ್ಲಿನ ಪಾತ್ರಗಳು ಅವರಿಗೆ ಸರಿಯಾಗಿ ಹೊಂದಾಣಿಕೆಯಾಗುತ್ತವೆ ಎಂಬ ಕಾರಣಕ್ಕೆ ಅವರನ್ನು ಆಯ್ಕೆ ಮಾಡುತ್ತಿರುವುದಾಗಿ ಸುದೀಪ್ ತಿಳಿಸಿದ್ದಾರೆ.

  ಸದ್ಯಕ್ಕೆ ಸ್ಕ್ರಿಪ್ಟ್ ವರ್ಕ್ ನಲ್ಲಿ ಬಿಜಿಯಾಗಿರುವ ಸುದೀಪ್ ಈ ಚಿತ್ರವನ್ನು ದೊಡ್ಡ ಬ್ಯಾನರ್ ನಡಿ ನಿರ್ಮಿಸಲಾಗುತ್ತದೆ. ಚಿತ್ರದ ಮುಹೂರ್ತದ ದಿನ ಕಾಮಿಕ್ ಪುಸ್ತಕವನ್ನೂ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

  ಚಿತ್ರದ ಪಾತ್ರವರ್ಗದಲ್ಲಿ ಯಾರ್‍ಯಾರು ಇರುತ್ತಾರೆ, ನಾಯಕಿ ಯಾರು, ಎಂದಿನಿಂದ ಶೂಟಿಂಗ್ ಪ್ರಾರಂಭ, ತಾಂತ್ರಿಕ ಬಳದಲ್ಲಿ ಯಾರ್‍ಯಾರು ಇರುತ್ತಾರೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಸ್ವಲ್ಪ ದಿನ ಕಾಯಲೇಬೇಕು. (ಏಜೆನ್ಸೀಸ್)

  English summary
  Kannada actor Sudeep to direct again. This time he directing mythological film to made in Kannada, Telugu, Malayalam and Tamil. At present per-production work is progressing. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X