»   » ನಟ ಕಿಚ್ಚ ಸುದೀಪ್ ಕೈಗೆ ಕೋಳ ಯಾಕೆ ಬಿತ್ತೋ?

ನಟ ಕಿಚ್ಚ ಸುದೀಪ್ ಕೈಗೆ ಕೋಳ ಯಾಕೆ ಬಿತ್ತೋ?

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ಅಯ್ಯೋ ಇದು ಯಾವ ಚಿತ್ರದ ಸ್ಟಿಲ್ ಎಂದು ನಿಮಗೆ ಅಚ್ಚರಿಯಾಗಬಹುದು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇತ್ತೀಚೆಗೆ ಎಲ್ಲೂ ಈ ಗೆಟಪ್ ನಲ್ಲಿ ಕಾಣಿಸಿಕೊಂಡಿಲ್ಲವಲ್ಲಾ ಎಂಬ ಆಲೋಚನೆಗೂ ಬೀಳುವಂತೆ ಮಾಡುತ್ತದೆ ಈ ಸ್ಟಿಲ್. ಅಯ್ಯೋ ಇದು ಆ ಚಿತ್ರವೇ ಎಂದು ಗೊತ್ತಾದರೆ ನಿಮಗೆ ಇನ್ನೂ ಅಚ್ಚರಿಯಾಗುತ್ತದೆ.

"ನನ್ ಹೊಡ್ತಾನೆ ನನ್ ವಿಸಿಟಿಂಗ್ ಕಾರ್ಡು" ಎಂದು ಡೈಲಾಗ್ ಹೊಡೆದು ಕನ್ನಡ ಸಿನಿಪ್ರಿಯರನ್ನು ರಂಜಿಸಿದ ಬಚ್ಚನ್ ಚಿತ್ರದ ಸ್ಟಿಲ್ ಇದು. ಇದೀಗ ತೆಲುಗು ಭಾಷೆಗೆ ಡಬ್ ಆಗಿದ್ದು ಅದೇ ಹೆಸರಿನಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಚಿತ್ರ ಒಂದೇ ಆದರೆ ಪ್ರಚಾರ ಮಾತ್ರ ಭಿನ್ನ. ಅದೇ ಟಾಲಿವುಡ್ ಸ್ಪೆಷಾಲಿಟಿ. [ಬಚ್ಚನ್ ಚಿತ್ರವಿಮರ್ಶೆ]

ಶಶಾಂಕ್ ನಿರ್ದೇಶಿಸಿ, ಉದಯ್ ಕೆ ಮೆಹ್ತಾ ನಿರ್ಮಾಣದ ಈ ಚಿತ್ರ 2013ನೇ ಸಾಲಿನ ಹಿಟ್ ಚಿತ್ರಗಳ ಸಾಲಿಗೆ ಸೇರ್ಪಡೆಯಾಗಿತ್ತು. ನಿರ್ದೇಶಕ ಶಶಾಂಕ್ ಅವರಿಗೆ ಅಂಟಿದ್ದ 'ಜರಾಸಂಧ' ಸೋಲಿನ ಕಲೆಯನ್ನು 'ಬಚ್ಚನ್' ಚಿತ್ರ ಸಂಪೂರ್ಣವಾಗಿ ಅಳಿಸಿಹಾಕಿತು. ಶಶಾಂಕ್ ಅವರಿಗೆ ಹೊಸ ಶಕ್ತಿಯನ್ನೂ ತಂದುಕೊಟ್ಟಂತಹ ಚಿತ್ರ.

ಬಾಹುಬಲಿ ಚಿತ್ರದಲ್ಲೂ ಸುದೀಪ್ ಅಭಿನಯ

ಸದ್ಯಕ್ಕೆ ಸುದೀಪ್ ಅವರು ಎಸ್ಎಸ್ ರಾಜಮೌಳಿ ಅವರ ಬಾಹುಬಲಿ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಪೋಷಿಸಿದ್ದಾರೆ. ಅವರ 'ಈಗ' ಚಿತ್ರವು ಅಪಾರ ತೆಲುಗು ಪ್ರೇಕ್ಷಕರನ್ನು ಗಳಿಸಿಕೊಡ್ತು. ಇದೀಗ ಬಚ್ಚನ್ ಮೂಲಕ ಮತ್ತೆ ತೆಲುಗು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಶೇಖರ್ ಚಂದ್ರ ಛಾಯಾಗ್ರಹಣ, ಹರಿಕೃಷ್ಣ ಸಂಗೀತ

ಬಚ್ಚನ್ ಚಿತ್ರ ತಾಂತ್ರಿಕವಾಗಿಯೂ ಪ್ರೌಢವಾಗಿದ್ದು ಶೇಖರ್ ಚಂದ್ರು ರವರ ಛಾಯಾಗ್ರಹಣ, ವಿ ಹರಿಕೃಷ್ಣ ಸಂಗೀತ ಮೆಚ್ಚುಗೆಗೆ ಪಾತ್ರವಾಗಿದೆ.

ಅತಿಥಿ ಪಾತ್ರದಲ್ಲಿ ಜಗಪತಿ ಬಾಬು

ಪಾತ್ರವರ್ಗದಲ್ಲಿ ಪಾರೂಲ್ ಯಾದವ್, ತುಲಿಪ್ ಜೋಷಿ, ಭಾವನಾ, ಆಶಿಶ್ ವಿದ್ಯಾರ್ಥಿ, ರವಿಶಂಕರ್ ಮತ್ತು ತೆಲುಗಿನ ಖ್ಯಾತನಟ ಜಗಪತಿ ಬಾಬು ಮುಂತಾದವರಿದ್ದಾರೆ.

ಇದೇ ಏಪ್ರಿಲ್ 18ಕ್ಕೆ ಬಿಡುಗಡೆ

ಕನ್ನಡದಲ್ಲಿ ಭರ್ಜರಿ ಯಶಸ್ಸು ದಾಖಲಿಸಿದ ಬಚ್ಚನ್ ಚಿತ್ರ ತೆಲುಗಿಗೆ ಅದೇ ಹೆಸರಿನಲ್ಲಿ ಡಬ್ ಆಗಿದ್ದು ಇದೀಗ ತೆರೆ ಕಾಣಲು ಸಜ್ಜಾಗಿದೆ. ಇದೇ ಏಪ್ರಿಲ್ 18ಕ್ಕೆ ಬಿಡುಗಡೆಯಾಗುತ್ತಿದೆ.

ಬಚ್ಚನ್ ಮೂಲಕ ತೆಲುಗು ಪ್ರೇಕ್ಷಕರ ಮುಂದೆ

ತುಮ್ಮಲಪಲ್ಲಿ ರಾಮಸತ್ಯನಾರಾಯಣ ಎಂಬುವವರು ಕನ್ನಡ ಚಿತ್ರದ ಡಬ್ಬಿಂಗ್ ರೈಟ್ಸ್ ಪಡೆದಿದ್ದು ಬಚ್ಚನ್ ಹೆಸರಿನಲ್ಲೇ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ. ಎಸ್ ಎಸ್ ರಾಜಮೌಳಿ ಅವರ 'ಈಗ' ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಸುದೀಪ್ ಚಿರಪರಿತರಾಗಿದ್ದಾರೆ.

ನನ್ ಹೊಡ್ತಾನೆ ನನ್ ವಿಸಿಟಿಂಗ್ ಕಾರ್ಡ್

ಕೂಲಾಗಿದ್ದಾಗ ಮಾತ್ರ ನಾನು ಜಂಟಲ್ ಮೆನ್ ಕೋಪ ಬಂದಾಗ ನಾನು ಬಾರ್ಸೋ ಬಚ್ಚನ್, ನನ್ ಹೊಡ್ತಾನೆ ನನ್ ವಿಸಿಟಿಂಗ್ ಕಾರ್ಡ್, ಗೂಂಡಾಗಿರಿ ಮಾಡೋರ್ ಮುಂದೆ ಗಾಂಧಿಗಿರಿ ನಡೆಯಲ್ಲ ಬಚ್ಚನ್ ಗಿರಿನೇ ತೋರಿಸ್ಬೇಕು...ಈ ರೀತಿಯ ಪಂಚಿಂಗ್ ಡೈಲಾಗ್ಸ್ ಮೂಲಕ ಚಿತ್ರ ಸುದೀಪ್ ಅಭಿಮಾನಿಗಳನ್ನು ರಂಜಿಸಿತ್ತು.

ತೆಲುಗಿನಲ್ಲಿ ಡೈಲಾಗ್ ಗಳೇ ಕಿಂಗ್

ಇದೀಗ ಇದೇ ರೀತಿಯ ಡೈಲಾಗ್ ಗಳು ತೆಲುಗು ಪ್ರೇಕ್ಷಕರ ಶಿಳ್ಳೆ ಗಿಟ್ಟಿಸುವುದು ಗ್ಯಾರಂಟಿ ಎಂಬ ನಿರೀಕ್ಷೆಯಲ್ಲಿದ್ದಾರೆ ನಿರ್ಮಾಪಕರು. ಕನ್ನಡ ಚಿತ್ರವನ್ನು ಉದಯ್ ಕೆ ಮೆಹ್ತಾ ನಿರ್ಮಿಸಿದ್ದರು. ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ.

English summary
Kiccha Sudeep, who was seen in the Telugu film Eega, will now be seen in yet another Telugu film Bachchan this April. The actor's Kannada film Bachchan starring Sudeep, Parul Yadav, Bhavana and Tulip Joshi, has been dubbed into Telugu and will release on April 18.
Please Wait while comments are loading...