twitter
    For Quick Alerts
    ALLOW NOTIFICATIONS  
    For Daily Alerts

    ಹಿರಿಯ ನಿರ್ದೇಶಕ ಎ.ಟಿ ರಘು ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ ಕಿಚ್ಚ ಸುದೀಪ್

    |

    ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಿರ್ದೇಶಕ ಎ.ಟಿ ರಘು ಅವರ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದ್ದಾರೆ ನಟ ಸುದೀಪ್. ಎ.ಟಿ ರಘು ಅವರ ಜೊತೆ ದೂರವಾಣಿ ಮೂಲಕ ಮಾತನಾಡಿದ ಸುದೀಪ್ ''ಧೈರ್ಯವಾಗಿರಿ, ನಿಮ್ಮ ಜೊತೆ ನಾವು ಇದ್ದೇವೆ, ನಮ್ಮಿಂದ ಆಗುವ ಸಹಾಯ ನಾವು ಖಂಡಿತಾ ಮಾಡುತ್ತೇವೆ'' ಎಂದು ಭರವಸೆ ನೀಡಿದ್ದಾರೆ.

    ಹಲವು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳುತ್ತಿರುವ ಎಟಿ ರಘು ಪ್ರಸ್ತುತ ಡಯಾಲಿಸೀಸ್ ಚಿಕಿತ್ಸೆಯಲ್ಲಿದ್ದಾರೆ. ಹೃದಯ, ಕಣ್ಣಿನ ಶಸ್ತ್ರ ಚಿಕಿತ್ಸೆಯೂ ಆಗಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ತಮ್ಮ ಅಸಹಾಯಕತೆ ನೆನೆದು ಎಟಿ ರಘು ಅವರು ನೋವು ಪಡುತ್ತಿದ್ದರು. ಅಂಬರೀಶ್ ಹೋದ್ಮೇಲೆ ನಮ್ಮ ಬಗ್ಗೆ ಯಾರಿಗೂ ಕಾಳಜಿ ಇಲ್ಲ ಎಂದು ಬೇಸರಗೊಂಡಿದ್ದರು. ಮುಂದೆ ಓದಿ...

    ಹಿರಿಯ ನಿರ್ದೇಶಕ ಎಟಿ ರಘು-ಛಾಯಾಗ್ರಾಹಕ ಬಸವರಾಜ್‌ಗೆ ರಾಜ್ಯೋತ್ಸವ ಪ್ರಶಸ್ತಿಹಿರಿಯ ನಿರ್ದೇಶಕ ಎಟಿ ರಘು-ಛಾಯಾಗ್ರಾಹಕ ಬಸವರಾಜ್‌ಗೆ ರಾಜ್ಯೋತ್ಸವ ಪ್ರಶಸ್ತಿ

    ನಿಮ್ಮ ಜೊತೆ ನಾವು ಇದ್ದೇವೆ

    ನಿಮ್ಮ ಜೊತೆ ನಾವು ಇದ್ದೇವೆ

    ಅಂಬರೀಶ್ ಅವರು ಬದಕಿರುವವರೆಗೂ ಸಹಾಯ ಮಾಡ್ತಿದ್ರು. ಅಂಬರೀಶ್ ನಿಧನದ ನಂತ್ರ ಚಿತ್ರರಂಗದಿಂದ ಯಾವುದೇ ಸಹಾಯ ಸಿಕ್ಕಿಲ್ಲ. ಇದೀಗ, ಎಟಿ ರಘು ಅವರಿಗೆ ಫೋನ್ ಮಾಡಿ ಮಾತನಾಡಿದ ಸುದೀಪ್ ''ನಿಮ್ಮ ಜೊತೆ ನಾವು ಇದ್ದೇವೆ, ಧೈರ್ಯವಾಗಿರಿ, ನಾವು ಸಹಾಯ ಮಾಡುತ್ತೇವೆ'' ಎಂದು ಭರವಸೆ ನೀಡಿದ್ದಾರೆ.

    ನಿಮ್ಮನ್ನು ದೊಡ್ಡ ಶಕ್ತಿಯಾಗಿ ಕಾಣುತ್ತಿದ್ದೇನೆ

    ನಿಮ್ಮನ್ನು ದೊಡ್ಡ ಶಕ್ತಿಯಾಗಿ ಕಾಣುತ್ತಿದ್ದೇನೆ

    ಸುದೀಪ್ ಅವರು ಫೋನ್ ಮೂಲಕ ಮಾತನಾಡಿದ ''ನಿಮ್ಮ ಜೊತೆ ನಾವು ಇದ್ದೇವೆ'' ಎಂದು ಭರವಸೆ ನೀಡಿದರು. ಅದಕ್ಕೆ ಧನ್ಯವಾದ ತಿಳಿಸಿದ ರಘು ಅವರು ''ನನಗೆ ದೊಡ್ಡ ಶಕ್ತಿಯಾಗಿದ್ದ ಅಂಬರೀಶ್ ಹೋಗ್ಬಿಟ್ರು. ಈಗ ನಿಮ್ಮನ್ನು ನಾನು ದೊಡ್ಡ ಶಕ್ತಿಯಾಗಿ ಕಾಣ್ತಿದ್ದೀನಿ. ಅಂಬರೀಶ್ ಅವರೇ ನಿಮ್ಮಿಂದ ಈ ಕೆಲಸ ಮಾಡ್ತಿದ್ದಾರೆ'' ಎಂದು ಧನ್ಯವಾದ ತಿಳಿಸಿದ್ದಾರೆ.

    ವಾರಕ್ಕೆ ಮೂರು ಬಾರಿ ಡಯಾಲಿಸೀಸ್

    ವಾರಕ್ಕೆ ಮೂರು ಬಾರಿ ಡಯಾಲಿಸೀಸ್

    ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಎಟಿ ರಘು ಅವರು ಸದ್ಯ ವಾರಕ್ಕೆ ಮೂರು ಬಾರಿ ಡಯಾಲಿಸೀಸ್ ಮಾಡಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೆ ಹೃದಯಕ್ಕೆ ಸಂಬಂಧಿಸಿದಂತೆ ಶಸ್ತ್ರ ಚಿಕಿತ್ಸೆ ಆಗಿದೆ, ಕಣ್ಣುಗಳಿಗೆ ಶಸ್ತ್ರ ಚಿಕಿತ್ಸೆ ಆಗಿದೆ.

    ಅಂಬರೀಶ್ ಜೊತೆ 20ಕ್ಕೂ ಹೆಚ್ಚು ಸಿನಿಮಾ

    ಅಂಬರೀಶ್ ಜೊತೆ 20ಕ್ಕೂ ಹೆಚ್ಚು ಸಿನಿಮಾ

    ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎ.ಟಿ.ರಘು ಕಳೆದ 4 ದಶಕಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಸುಮಾರು 30ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಸುಮಾರು 20 ಸಿನಿಮಾದಲ್ಲಿ ಅಂಬರೀಶ್ ಅವರೇ ನಾಯಕರು. ಅಂಬರೀಶ್ ಗೆ 'ಮಂಡ್ಯದ ಗಂಡು' ಎಂಬ ಚಿತ್ರ ಮಾಡಿದ್ದೇ ಈ ನಿರ್ದೇಶಕ. ನಂತರ ಅಂಬರೀಶ್ ಮಂಡ್ಯದ ಗಂಡು ಅಂತಾನೆ ಗುರುತಿಸಿಕೊಂಡರು.

    ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ

    ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ

    2020ರಲ್ಲಿ ಎಟಿ ರಘು ಅವರ ಕೊಡುಗೆಯನ್ನು ಗುರುತಿಸಿದ ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಕನ್ನಡ, ಹಿಂದಿ, ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಎ.ಟಿ.ರಘು 1990ರಲ್ಲಿ 'ಅಜಯ್-ವಿಜಯ್' ಚಿತ್ರದ ಮೂಲಕ ಕನ್ನಡ ಇಂಡಸ್ಟ್ರಿ ಪ್ರವೇಶ ಮಾಡಿದ್ದರು. 'ಇನ್ಸ್ ಪೆಕ್ಟರ್ ಕ್ರಾಂತಿ ಕುಮಾರ್', 'ಪುಟ್ಟ ಹೆಂಡ್ತಿ', 'ಮೈಸೂರು ಜಾಣ', 'ಮಂಡ್ಯದ ಗಂಡು', ಮಿಡಿದ ಹೃದಯಗಳು', 'ಅಂತಿಮ ತೀರ್ಪು', 'ನ್ಯಾಯಕ್ಕಾಗಿ ನಾನು', 'ಪದ್ಮವ್ಯೂಹ', 'ಸೂರ್ಯೋದಯ' ಸೇರಿದಂತೆ ಹಲವು ಚಿತ್ರಗಳನ್ನ ನಿರ್ದೇಶನ ಮಾಡಿದ್ದರು.

    Recommended Video

    ಎಲ್ಲರ ಅಪ್ಪ-ಅಮ್ಮ ಡೀಸೆಂಟ್ ಆಗಿ ಕೂತಿದ್ರೆ ನಮ್ಮಮ್ಮ ಫುಲ್ ಡ್ಯಾನ್ಸ್ | Shilpa Lokesh | Filmibeat Kannada

    English summary
    Kannada actor Kichcha Sudeep helps senior Sandalwood Director AT Raghu. he spoke with him in phone
    Monday, January 11, 2021, 19:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X