ಶ್ರೀರಾಮುಲು ಪರ ಪ್ರಚಾರ ಮಾಡಿದ ಕಿಚ್ಚ ಸುದೀಪ್
Recommended Video

ಕರ್ನಾಟಕ ಚುನಾವಣೆಯಲ್ಲಿ ಸಿನಿಮಾ ತಾರೆಯರ ಪ್ರಚಾರ ದಿನದಿಂದ ದಿನಕ್ಕೆ ಜೋರಾಗ್ತಿದೆ. ಯಶ್, ದರ್ಶನ್, ಸುದೀಪ್, ಮಾಲಾಶ್ರೀ, ಪೂಜಾ ಗಾಂಧಿ ಸೇರಿದಂತೆ ಅನೇಕ ಸಿನಿಮಾ ತಾರೆಯರು ರಾಜಕೀಯ ಪಕ್ಷಗಳ ಹಾಗೂ ಅಭ್ಯರ್ಥಿಗಳ ವಿರುದ್ಧ ಪ್ರಚಾರ ಮಾಡ್ತಿದ್ದಾರೆ.
ಬಳ್ಳಾರಿ ಹಾಗೂ ಚಿತ್ರದುರ್ಗದಲ್ಲಿ ಕಿಚ್ಚ ಸುದೀಪ್ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಇಂದು ಬಿರುಸಿನ ಪ್ರಚಾರ ನಡೆಸಿದ್ರು. ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಮತ್ತು ಬಳ್ಳಾರಿ ಬಿಜೆಪಿ ಅಭ್ಯರ್ಥಿ ಸೋಮಶೇಖರ್ ರೆಡ್ಡಿ ಅವರ ಕಿಚ್ಚ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ್ರು.
ಪ್ರಚಾರದ ವೇಳೆ ಮಾತನಾಡಿದ ಸುದೀಪ್ ''ಶ್ರೀರಾಮುಲು ಅವರು ನನಗೆ ಬಹಳ ಹತ್ತಿರದ ಸ್ನೇಹಿತರು. ನಮ್ಮ ಬೆಂಬಲ ಯಾವಾಗಲೂ ಇದೆ. ನಾನು ಒಬ್ಬ ಕಲಾವಿದನಾಗಿಯೇ ಇರುತ್ತೇನೆ ಮತ್ತು ನಾನು ಸಿನಿಮಾ ಪಕ್ಷದವನು'' ಎಂದರು.

ಇನ್ನು ಸುದೀಪ್ ಅವರನ್ನ ನೋಡಲು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಇದಕ್ಕೂ ಮುಂಚೆ ಜಿಂದಾಲ್ ವಿಮಾನ ನಿಲ್ದಾಳದಿಂದ ಬಳ್ಳಾರಿಗೆ ಆಗಮಿಸುವಾಗ ರಸ್ತೆ ಬದಿಯ ಟೀ ಅಂಗಡಿಯಲ್ಲಿ ಸುದೀಪ್ ಟೀ ಕುಡಿದಿದ್ದು ವಿಶೇಷವಾಗಿತ್ತು.


Click it and Unblock the Notifications











