For Quick Alerts
  ALLOW NOTIFICATIONS  
  For Daily Alerts

  ಮತ್ತೆ ಸದ್ದು ಮಾಡುತ್ತಿದೆ ರಾಹುಲ್ ದ್ರಾವಿಡ್ ಬಯೋಪಿಕ್?

  |

  ಎಂಎಸ್ ಧೋನಿ, ಸಚಿನ್ ತೆಂಡೂಲ್ಕರ್, ಅಜರುದ್ದೀನ್ ಅಂತವರ ಬಯೋಪಿಕ್ ಚಿತ್ರಗಳು ಬಾಲಿವುಡ್‌ನಲ್ಲಿ ಬಂದಿದೆ. ಈಗ ಬಂಗಾಳದ ಹುಲಿ ಸೌರವ್ ಗಂಗೂಲಿ ಅವರ ಬಯೋಪಿಕ್ ಘೋಷಣೆಯಾಗಿದೆ. ಈ ಕಡೆ ದಕ್ಷಿಣದಲ್ಲಿ ಕರ್ನಾಟಕದ ದಿಗ್ಗಜ ಆಟಗಾರ ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಅವರ ಬಯೋಪಿಕ್ ಮಾಡಬೇಕು ಎಂಬ ಚರ್ಚೆ ಆಗಾಗ ಕೇಳಿ ಬರುತ್ತಲೇ ಇದೆ. ಕೇವಲ ಕನ್ನಡ ಇಂಡಸ್ಟ್ರಿಯಲ್ಲಿ ಮಾತ್ರವಲ್ಲ ತಮಿಳು, ತೆಲುಗು ಇಂಡಸ್ಟ್ರಿಯಲ್ಲೂ ದ್ರಾವಿಡ್ ಬಯೋಪಿಕ್ ಬಗ್ಗೆ ಆಸಕ್ತಿ ವ್ಯಕ್ತವಾಗಿದೆ.

  ಈ ನಡುವೆ ಕಿಚ್ಚ ಸುದೀಪ್ ಬಯೋಪಿಕ್ ಚಿತ್ರಕ್ಕೆ ಚಾಲನೆ ಕೊಡಬಹುದು ಎಂಬ ನಿರೀಕ್ಷೆಯೂ ಇದೆ. ಕ್ರಿಕೆಟ್ ಆಟದ ಜೊತೆ ಹೆಚ್ಚು ನಂಟು ಹೊಂದಿರುವ ಸುದೀಪ್, ದಿ ವಾಲ್ ಅವರ ಜೀವನ ಆಧರಿತ ಚಿತ್ರದಲ್ಲಿ ನಟಿಸುಬಹುದೇ, ನಟಿಸಲು ತಯಾರಿ ಮಾಡ್ತಿದ್ದಾರೆ ಎನ್ನುವ ಕುತೂಹಲ ಹುಟ್ಟಿಕೊಂಡಿದೆ. ಈಗ ದುಬೈನಲ್ಲಿ ಐಪಿಎಲ್ ಪಂದ್ಯಗಳ ವೀಕ್ಷಣೆ ತೆರಳಿರುವ ಸುದೀಪ್ ಈ ಸುದ್ದಿಗೆ ಮತ್ತಷ್ಟು ಪುಷ್ಠಿ ಕೊಟ್ಟಿದ್ದಾರೆ. ಮುಂದಿನ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ ಭಾರತ-ಪಾಕಿಸ್ತಾನ ಪಂದ್ಯವನ್ನು ಸ್ಟೇಡಿಯಂನಲ್ಲಿ ನೋಡುವುದಾಗಿ ಹೇಳಿದ್ದಾರೆ. ಹೀಗೆ, ಕ್ರಿಕೆಟ್ ಜೊತೆ ಹೆಚ್ಚು ಸಮಯ ಕಳೆಯುತ್ತಿರುವ ಸುದೀಪ್, ದ್ರಾವಿಡ್ ಬಯೋಪಿಕ್‌ಗೆ ಸೂಕ್ತ ಆಯ್ಕೆ ಎನ್ನುವ ಅಭಿಪ್ರಾಯ ಇದೆ. ಮುಂದೆ ಓದಿ...

  ಸುದೀಪ್ ಮುಂದಿದ್ಯಾ ದ್ರಾವಿಡ್ ಬಯೋಪಿಕ್?

  ಸುದೀಪ್ ಮುಂದಿದ್ಯಾ ದ್ರಾವಿಡ್ ಬಯೋಪಿಕ್?

  ಸಿಸಿಎಲ್, ಐಪಿಎಲ್, ವಿಶ್ವಕಪ್ ಹಾಗೂ ಚಂದನವನ ಕಪ್ ಸೇರಿದಂತೆ ಬಹಳಷ್ಟು ಕಡೆ ಕಿಚ್ಚ ಸುದೀಪ್ ಕ್ರಿಕೆಟ್ ಮೇಲಿನ ಆಸಕ್ತಿ ವ್ಯಕ್ತಪಡಿಸಿದ್ದಾರೆ. ತಾನೊಬ್ಬ ಉತ್ತಮ ಕ್ರಿಕೆಟ್ ಅಟಗಾರನಾಗಿದ್ದು, ರಾಷ್ಟ್ರೀಯ ತಂಡಕ್ಕೆ ಆಡಬೇಕು ಎಂಬ ಅಸೆಯನ್ನು ಸಹ ಹೊಂದಿದ್ದರು ಎಂದು ಖುದ್ದು ಅವರೇ ಅನೇಕ ಬಾರಿ ಹೇಳಿಕೊಂಡಿದ್ದಾರೆ. ದ್ರಾವಿಡ್ ಅವರ ಬಯೋಪಿಕ್ ವಿಚಾರ ಬಂದಾಗಲೆಲ್ಲಾ ಸುದೀಪ್ ಮಾಡಲಿ ಎಂಬ ಮಾತು ಗಾಂಧಿನಗರದಲ್ಲಿ ಕೇಳಿ ಬರ್ತಿದೆ. ಆದರೆ, ಸುದೀಪ್ ಈ ಕುರಿತು ತಯಾರಾಗ್ತಿದ್ದಾರಾ? ನಿಜಕ್ಕೂ ಅವರಿಗೆ ದ್ರಾವಿಡ್ ಬಯೋಪಿಕ್ ಮಾಡುವ ಆಸೆ ಇದ್ಯಾ ಎನ್ನುವ ಬಗ್ಗೆ ಸ್ಪಷ್ಟನೆ ಇಲ್ಲ.

  'ದಿ ವಾಲ್' ರಾಹುಲ್ ದ್ರಾವಿಡ್ ರಿಗೆ ಸುದೀಪ್ ಪ್ರೀತಿಯ ಕೋರಿಕೆ'ದಿ ವಾಲ್' ರಾಹುಲ್ ದ್ರಾವಿಡ್ ರಿಗೆ ಸುದೀಪ್ ಪ್ರೀತಿಯ ಕೋರಿಕೆ

  ಸುದೀಪ್ ಮುಂದಿನ ಚಿತ್ರ ಯಾವುದು?

  ಸುದೀಪ್ ಮುಂದಿನ ಚಿತ್ರ ಯಾವುದು?

  ಸುದೀಪ್ ನಟನೆಯ ಕೋಟಿಗೊಬ್ಬ 3 ಬಿಡುಗಡೆಗೆ ಸಜ್ಜಾಗಿದೆ. ದಸರಾ ಹಬ್ಬಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ತಯಾರಾಗಿರುವ ವಿಕ್ರಾಂತ್ ರೋಣ ಚಿತ್ರವೂ ರೆಡಿಯಾಗಿದ್ದು, ಡಿಸೆಂಬರ್ ವೇಳೆ ರಿಲೀಸ್ ಆಗಲಿದೆಯಂತೆ. ಈ ಎರಡು ಚಿತ್ರಗಳ ಬಳಿಕ ಸುದೀಪ್ ಮುಂದಿನ ಸಿನಿಮಾ ಯಾವುದು ಎಂದು ಅಧಿಕೃತವಾಗಿಲ್ಲ. ಅನೂಪ್ ಭಂಡಾರಿ ಜೊತೆ ಅಶ್ವತ್ಥಾಮ ಎನ್ನುವ ಪ್ರಾಜೆಕ್ಟ್ ಘೋಷಣೆ ಮಾಡಿರುವ ಕಿಚ್ಚ ಕ್ರಿಯೇಷನ್ಸ್, ನಾಯಕ ಯಾರೆಂದು ಹೇಳಿಲ್ಲ. ಬಹುಶಃ ಸುದೀಪ್ ಅವರೇ ನಾಯಕನಾಗಿ ನಟಿಸಬಹುದು ಎನ್ನಲಾಗಿದೆ.

  ತೆಲುಗಿನಲ್ಲಿ ದ್ರಾವಿಡ್ ಬಯೋಪಿಕ್?

  ತೆಲುಗಿನಲ್ಲಿ ದ್ರಾವಿಡ್ ಬಯೋಪಿಕ್?

  ಕನ್ನಡಿಗ ದ್ರಾವಿಡ್ ಅವರ ಜೀವನ ಕಥೆ ತೆರೆಮೇಲೆ ತರಲು ತೆಲುಗು ನಿರ್ದೇಶಕ-ನಿರ್ಮಾಪಕರು ಆಸಕ್ತಿ ತೋರಿದ್ದು, ಈ ಸಂಬಂಧ ಪೂರ್ವ ತಯಾರಿ ಸಹ ಮಾಡಿದ್ದಾರಂತೆ. ಪ್ಯಾನ್ ಇಂಡಿಯಾ ಬಿಡುಗಡೆ ಮಾಡಲು ಯೋಜಿಸಲಾಗಿದ್ದು, ಈ ಪ್ರಾಜೆಕ್ಟ್‌ನಲ್ಲಿ ತಮಿಳು ನಟ ಸಿದ್ಧಾರ್ಥ್ ನಟಿಸುವ ಸಾಧ್ಯತೆ ಇದೆ ಎಂಬ ಸುದ್ದಿಗಳು ವರದಿಯಾಗಿದೆ. ಸ್ಕ್ರಿಪ್ಟ್ ಕೆಲಸ ಸಹ ಮುಗಿದಿದ್ದು, ಸಿದ್ಧಾರ್ಥ್ ಈ ಚಿತ್ರವನ್ನು ಒಪ್ಪಿಕೊಂಡಿದ್ದಾರಂತೆ. ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರಂತೆ.

  ಸಿನಿಮಾ ಆಗುತ್ತಿದೆ ರಾಹುಲ್ ದ್ರಾವಿಡ್ ಜೀವನ: ನಟ ಯಾರು?ಸಿನಿಮಾ ಆಗುತ್ತಿದೆ ರಾಹುಲ್ ದ್ರಾವಿಡ್ ಜೀವನ: ನಟ ಯಾರು?

  ರೋಚಕ ಇನ್ನಿಂಗ್ಸ್‌ಗಳ 'ದಿ ವಾಲ್'

  ರೋಚಕ ಇನ್ನಿಂಗ್ಸ್‌ಗಳ 'ದಿ ವಾಲ್'

  ರಾಹುಲ್ ದ್ರಾವಿಡ್ ಜೀವನ ಸಿನಿಮಾ ಆಗಬೇಕು ಎಂದು ಬಹಳಷ್ಟು ಚಿತ್ರಪ್ರೇಮಿಗಳು ಆಸೆ ಪಡ್ತಿದ್ದಾರೆ. ದ್ರಾವಿಡ್ ಅವರ ಶ್ರಮ, ತಾಳ್ಮೆ, ದೇಶಪ್ರೇಮ, ಕ್ರಿಕೆಟ್ ಪ್ರೇಮ, ತಂತ್ರ, ಹಲವು ಇನ್ನಿಂಗ್ಸ್‌ಗಳು, ಆಟಕ್ಕೆ ತಯಾರಾಗುತ್ತಿದ್ದ ರೀತಿ ಇವುಗಳೆಲ್ಲವೂ ಯುವಕರಿಗೆ ಸ್ಪೂರ್ತಿಯಾಗುತ್ತದೆ. ದ್ರಾವಿಡ್ ವಿಚಾರದಲ್ಲಿ ಡ್ರೆಸ್ಸಿಂಗ್ ರೂಂನಲ್ಲಿ ನಡೆದ ಹಲವು ಸೀಕ್ರೆಟ್ ವಿಚಾರಗಳು ಸಹ ಸಾಮಾನ್ಯ ಜನರಿಗೆ ತಿಳಿಯುತ್ತದೆ. ಕನ್ನಡದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿಸಿದ ಆಟಗಾರನ ಬಯೋಪಿಕ್ ಬಂದ್ರೆ ಅದಕ್ಕಿಂತ ಖುಷಿ ಇನ್ನೊಂದಿಲ್ಲ ಎನ್ನುವ ಪ್ರೇಕ್ಷಕ ವರ್ಗವೂ ಇದೆ.

  English summary
  Abhinaya chakravarthy Kichcha Sudeep May be act in Cricketer Rahul Dravid Biopic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X