Don't Miss!
- Sports
IND vs NZ 3rd T20: ಕಿವೀಸ್ ವಿರುದ್ಧ ಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್
- News
ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸುದೀಪ್, ನಂದ ಕಿಶೋರ್ ಹಾಗೂ ನಿರ್ಮಾಪಕ ಕಾರ್ತಿಕ್ ಗೌಡ ಮೀಟಿಂಗ್; ಇದೇ ಕಿಚ್ಚನ ಮುಂದಿನ ಚಿತ್ರ?
ನಟ ಕಿಚ್ಚ ಸುದೀಪ್ ಅಭಿನಯಿಸಲಿರುವ ಮುಂದಿನ ಚಿತ್ರ ಯಾವುದು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಪ್ಯಾನ್ ಇಂಡಿಯಾ ಪೈಪೋಟಿ ಹೆಚ್ಚಾಗುತ್ತಿದ್ದು ಹೊರ ರಾಜ್ಯಗಳಲ್ಲೂ ಗುರುತಿಸಿಕೊಂಡಿರುವ ಹಾಗೂ ಅಭಿಮಾನಿ ಬಳಗಗಳನ್ನು ಹೊಂದಿರುವ ಕಿಚ್ಚ ಸುದೀಪ್ ಒಂದೊಳ್ಳೆ ಕಥೆಯನ್ನು ಆಯ್ದುಕೊಂಡು ಸಿನಿ ರಸಿಕರನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿಯೇ ರಂಜಿಸಲು ಕಾಯುತ್ತಿದ್ದಾರೆ.
ಹೌದು, ವಿಕ್ರಾಂತ್ ರೋಣ ಬಳಿಕ ನಟ ಕಿಚ್ಚ ಸುದೀಪ್ ನಟನೆಯ 46 ನೇ ಚಿತ್ರ ಯಾವುದು, ನಿರ್ದೇಶಕ ಯಾರು, ಯಾರು ಬಂಡವಾಳ ಹೂಡಬಹುದು ಎಂಬ ದೊಡ್ಡ ಪ್ರಶ್ನೆ ಹಾಗೂ ಕುತೂಹಲ ಕಿಚ್ಚ ಸುದೀಪ್ ಅಭಿಮಾನಿಗಳು ಹಾಗೂ ಸಿನಿ ರಸಿಕರಲ್ಲಿ ಮೂಡಿವೆ. ಸದ್ಯ ಆರ್ ಚಂದ್ರು ನಿರ್ದೇಶನದ ಕಬ್ಜ ಹೊರತುಪಡಿಸಿ ಕಿಚ್ಚ ಸುದೀಪ್ ನಟನೆಯ ಯಾವ ಚಿತ್ರವೂ ಘೋಷಣೆಯಾಗಿಲ್ಲ.
ಇನ್ನು ಈ ನಡುವೆ ಆ ನಿರ್ದೇಶಕರ ಜತೆ ಕಿಚ್ಚ ಸುದೀಪ್ ಚಿತ್ರ ಮಾಡಲಿದ್ದಾರೆ, ಈ ನಿರ್ಮಾಪಕರು ಕಿಚ್ಚ ಸುದೀಪ್ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದರೂ ಸಹ ಯಾವೊಂದು ಪ್ರಾಜೆಕ್ಟ್ ಸಹ ಘೋಷಣೆಯಾಗಲಿಲ್ಲ. ಹೀಗಿರುವಾಗಲೇ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕಿಚ್ಚ ಸುದೀಪ್, ನಿರ್ದೇಶಕ ನಂದ ಕಿಶೋರ್, ನಿರ್ಮಾಪಕ ಕಾರ್ತಿಕ್ ಗೌಡ ಹಾಗೂ ಕೆಪಿ ಶ್ರೀಕಾಂತ್ ಜತೆಗಿರುವ ಮೂರ್ನಾಲ್ಕು ಫೋಟೊಗಳು ವೈರಲ್ ಆಗಿವೆ. ಈ ಫೋಟೊಗಳು ಹಲವು ಅನುಮಾನಗಳನ್ನು ಮೂಡಿಸಿವೆ.

ಮುಂದಿನ ಚಿತ್ರದ ಮೀಟಿಂಗ್?
ಹೀಗೆ ಈ ಸುದೀಪ್, ನಂದ ಕಿಶೋರ್, ಕಾರ್ತಿಕ್ ಗೌಡ ಹಾಗೂ ಕೆಪಿ ಶ್ರೀಕಾಂತ್ ಅವರನ್ನು ಭೇಟಿಯಾಗಿರುವ ಫೋಟೊಗಳನ್ನು ಕಂಡ ಕೆಲ ನೆಟ್ಟಿಗರು ಇದು ಕಿಚ್ಚ ಸುದೀಪ್ ಮುಂದಿನ ಚಿತ್ರದ ಕುರಿತಾದ ಮೀಟಿಂಗ್ ಇರಬಹುದಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಹೌದು, ನಾಯಕ, ನಿರ್ದೇಶಕ ಹಾಗೂ ನಿರ್ಮಾಪಕರು ಒಟ್ಟಿಗೆ ಮಾತುಕತೆ ನಡೆಸುತ್ತಿರುವ ಫೋಟೊ ಇರುವುದರಿಂದ ಈ ರೀತಿಯ ಅನುಮಾನ ಹುಟ್ಟಿಕೊಂಡಿದೆ.

ಕೆಸಿಸಿ ಮೀಟಿಂಗ್
ಇನ್ನೂ ಕೆಲವರು ಇದು ಕನ್ನಡ ಚಲನಚಿತ್ರ ಕಪ್ ಅಥವಾ ಸೆಲೆಬ್ರಟಿ ಕ್ರಿಕೆಟ್ ಲೀಗ್ ನಡೆಸಲು ನಡೆಸಿದ ಸಭೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ಟೇಡಿಯಂ ಒಂದರಲ್ಲಿ ಈ ಸಭೆ ನಡೆದಿರುವುದನ್ನು ಫೋಟೊಗಳಲ್ಲಿ ಕಾಣಬಹುದಾಗಿದ್ದು ಇದು ಕೆಸಿಎಲ್ ಅಥವಾ ಸಿಸಿಎಲ್ ಕುರಿತಾದ ಮೀಟಿಂಗ್ ಎಂಬುದನ್ನು ಊಹಿಸಬಹುದು. ಅಷ್ಟೇ ಅಲ್ಲದೇ ಈ ಚಿತ್ರವನ್ನು ಹಂಚಿಕೊಂಡಿರುವ ಕೆಆರ್‌ಜಿ ಸ್ಟುಡಿಯೋಸ್ 'ಇವರು ಮತ್ತೆ ಕರೆತರಲಿದ್ದಾರೆ' ಎಂದು ಕ್ಯಾಪ್ಷನ್ ಬರೆದುಕೊಂಡಿದ್ದು, ಮೂರ್ನಾಲ್ಕು ವರ್ಷಗಳಿಂದ ನಡೆಯದೇ ಇರುವ ಕನ್ನಡ ಚಲನಚಿತ್ರ ಕಪ್ ಅನ್ನು ಕರೆತರಲು ಈ ಸಭೆ ನಡೆದಿದೆ ಎಂಬ ಅರ್ಥವನ್ನು ನೀಡುತ್ತಿದೆ.

ಸುದೀಪ್ ಮುಂದಿನ ಚಿತ್ರ ಯಾವುದು?
ಸದ್ಯ ಕಿಚ್ಚ ಸುದೀಪ್ ನಟನೆಯ ಮುಂದಿನ ಚಿತ್ರ ಯಾವುದು ಎಂಬ ಪ್ರಶ್ನೆ ಹೆಚ್ಚಾಗಿ ಕೇಳಿಬರುತ್ತಿದ್ದು, ತಮಿಳಿನ ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಜತೆ ಕಿಚ್ಚನ ಮುಂದಿನ ಸಿನಿಮಾ ಮೂಡಿ ಬರಲಿದೆ ಎಂಬ ಮಾಹಿತಿ ಇದೆ. ಅಷ್ಟೇ ಅಲ್ಲದೇ ಕಿಚ್ಚ ಸುದೀಪ್ ಹಾಗೂ ತಮಿಳಿನ ನಿರ್ದೇಶಕ ವೆಂಕಟ್ ಪ್ರಭು ಕಾಂಬಿನೇಶನ್‌ನ ಚಿತ್ರ ಸಹ ಬರಲಿದೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.