Don't Miss!
- News
ಮೋದಿ, ಅಮಿತ್ ಶಾ ಗೆ ಟೀಕೆ ಮಾಡಿದರೆ ದೊಡ್ಡವರಾಗ್ತೀವಿ ಅನ್ನೋ ಭ್ರಮೆಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ: ಈಶ್ವರಪ್ಪ
- Automobiles
ಭಾರತದಲ್ಲಿ ಹೊಸ ಅಧ್ಯಾಯ ಬರೆಯಲು ಸಿದ್ಧವಾಗಿವೆ ಮಾರುತಿ ಸುಜುಕಿ ಕಾರುಗಳು
- Sports
ಮತ್ತೊಮ್ಮೆ ನಮಗೆ ಆತನೇ ಬಲು ದೊಡ್ಡ ಕಂಟಕ: ಭಾರತೀಯ ಆಟಗಾರನ ಬಗ್ಗೆ ಆಸಿಸ್ ಕ್ರಿಕೆಟಿಗನ ಆತಂಕ!
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್ಗಳು
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜುಲೈನಲ್ಲಿ ಮತ್ತೆ ಕಿಚ್ಚ v/s ಅಜಯ್ ದೇವಗನ್: ಈ ಬಾರಿ ಬಾಕ್ಸಾಫೀಸ್‌ನಲ್ಲಿ ಮಹಾಯುದ್ಧ?
ಕಳೆದ ವಾರವಷ್ಟೇ ಭಾಷೆ ವಿಚಾರವಾಗಿ ನಟ ಕಿಚ್ಚ ಸುದೀಪ್ ಹಾಗೂ ಬಾಲಿವುಡ್ ನಟ ಅಜಯ್ ದೇವಗನ್ ನಡುವೆ ಮಾತಿನ ಸಮರವೇ ನಡೆದು ಹೋಗಿತ್ತು. ಇಬ್ಬರು ನಟರ ನಡುವೆ ನಡೆದ ಟ್ವೀಟ್ ವಾರ್ ಆದನಂತರ ದೇಶದೆಲ್ಲೆಡೆ ವ್ಯಾಪಿಸಿ ವ್ಯಾಪಾಕ ಟೀಕೆಗೆ ಗುರಿಯಾಗಿತ್ತು. ದೇವಗನ್ ಹೇಳಿಕೆಗೆ ಹಲವು ದಕ್ಷಿಣ ಭಾರತದ ನಟ ನಟಿಯರು ಆಕ್ರೋಶ ವ್ಯಕ್ತ ಪಡಿಸಿದ್ದರು. ಈ ವೇಳೆ ಕಿಚ್ಚನ ಬೆಂಬಲಕ್ಕೆ ದಕ್ಷಿಣ ಹಾಗೂ ಉತ್ತರ ಭಾರತದ ಚಿತ್ರರಂಗದ ಕೆಲ ತಾರೆಯರು ನಿಂತಿದ್ದರು.
ದಕ್ಷಿಣದ
ಸಿನಿಮಾಗಳ
ಮೇಲೆ
ಅಸಹನೆ
ತೋರಿದ
ಅಜಯ್,
ದಕ್ಷಿಣದಿಂದ
ಕದ್ದಿರುವ
ಸಿನಿಮಾಗಳ
ಪಟ್ಟಿ
ಇಲ್ಲಿದೆ
ಈ ಭಾಷಾ ವಿವಾದ ಕೊನೆಗೂ ಮುಕ್ತಾಯವಾಯ್ತು ಅಂತ ಅಂದುಕೊಳ್ಳುವಾಗಲೇ ಮತ್ತೆ ಈಗ ಸಿನಿಮಾ ರಿಲೀಸ್ ಡೇಟ್‌ಗಳ ಪೈಪೋಟಿ ಶುರುವಾಗಿದೆ. ಯೆಸ್ ನಟ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ವಿಕ್ರಾಂತ್ ರೋಣ' ಜುಲೈ 28 ರಂದು ವಿಶ್ವದಾದ್ಯಂತ ಆರು ಭಾಷೆಗಳಲ್ಲಿ ರಿಲೀಸ್ ಆಗ್ತಿದೆ. ಹಿಂದಿಯಲ್ಲೂ ಸಹ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು. ಈ ನಡುವೆ ಅಜಯ್ ದೇವಗನ್ ಅಭಿನಯದ 'ಥ್ಯಾಂಕ್ ಗಾಡ್' ಸಿನಿಮಾ ಕೂಡ ಜುಲೈ 29 ರಂದು ರಿಲೀಸ್ ಆಗಲಿದೆ. ಯಾವ ಸಿನಿಮಾ ಬಾಕ್ಸ್ ಆಫೀಸ್ ಲೂಟಿ ಮಾಡುತ್ತೆ ಎಂಬ ಮಾತುಗಳು ಸಿನಿರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ.
twitter embed :
Let's settle this 💥#KicchaSudeep vs #AjayDevgn#VikrantRona #ThankGod #Bollywood pic.twitter.com/BVH4fSNGEn
— Sandalwood Entertainment (@Sandalwood_Ent) May 3, 2022
ಇತ್ತೀಚೆಗೆ ಕಿಚ್ಚ ಸುದೀಪ್ " ಹಿಂದಿ ಈಗ ರಾಷ್ಟ್ರೀಯ ಭಾಷೆಯಾಗಿ ಉಳಿದಿಲ್ಲ. ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿರೋದು ಬಾಲಿವುಡ್‌ನವರು. ದಕ್ಷಿಣದ ಸಿನಿಮಾ ಒಳ್ಳೆಯ ಸಿನಿಮಾಗಳು ಎಲ್ಲಾ ಭಾಷೆಗೂ ಹೋಗುತ್ತವೆ. ಹೀಗಾಗಿ ಕನ್ನಡ ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾ ಅಂತ ಕರೆಯಬೇಡಿ ಎಂದು ಹೇಳಿದ್ದರು. ಇದಕ್ಕೆ ಅಜಯ್ ದೇವಗನ್ ಟ್ವಿಟರ್ ಮೂಲಕ ಕಿಚ್ಚ ಹೇಳಿಕೆಗೆ ತಿರುಗೇಟು ನೀಡಿದ್ದರು. ಹಿಂದಿ ರಾಷ್ಟ್ರ ಭಾಷೆ ಅಂತೆಲ್ಲಾ ಬೊಬ್ಬೆ ಹಾಕಿದ್ದರು. ಅಲ್ಲದೆ ನಿಮ್ಮ ಪ್ರಾದೇಶಿಕ ಭಾಷೆಯ ಸಿನಿಮಾಗಳನ್ನು ಹಿಂದಿ ಭಾಷೆಯಲ್ಲಿ ಡಬ್ ಮಾಡಿ ಏಕೆ ಬಿಡುಗಡೆ ಮಾಡುತ್ತೀರಿ ಅಂತಲೂ ಪ್ರಶ್ನೆ ಮಾಡಿದ್ದರು. ಇದಕ್ಕೆ ಕಿಚ್ಚ ಸಹ ಖಾರವಾಗಿ ಉತ್ತರಿಸಿದ್ದು, ಹಿಂದಿ ರಾಷ್ಟ್ರ ಭಾಷೆಯಲ್ಲ ಇಲ್ಲಿರುವ ಎಲ್ಲಾ ಭಾಷೆ ಸಿನಿಮಾಗಳು ಭಾರತೀಯ ಸಿನಿಮಾಗಳೇ ಅಂತ ಹೇಳಿದ್ದರು.
ಈ ಭಾಷಾ ವಿವಾದ ಎಲ್ಲಡೆ ಭಾರೀ ಟೀಕೆಗೆ ವ್ಯಕ್ತವಾಗ್ತಿತ್ತು. ಅಜಯ್ ದೇವಗನ್ ವಿರುದ್ದ ಬಾಲಿವುಡ್‌ನ ಕೆಲ ನಟ ನಟಿಯರೇ ಆಕ್ಷೇಪ ವ್ಯಕ್ತಪಡಿಸಿದ್ದರು . ಈ ವಿವಾದ ಕಳೆದ ಕೆಲವು ದಿನಗಳಿಂದ ಭಾರಿ ಸುದ್ದಿಯಲ್ಲಿತ್ತು. ಇಷ್ಟು ದಿನ ಇಲ್ಲದ್ದು ಈಗ ದಿಢೀರ್ ಸುದ್ದಿಯಾಗಲು ಕಾರಣ 'ಕೆಜಿಎಫ್ 2' ಅಬ್ಬರ ಅಂತಲೂ ಹೇಳಲಾಯಿತು, 'ಕೆಜಿಎಫ್' ಅಬ್ಬರಿದಿಂದ ಬಾಲಿವುಡ್ ನಟರ ಸಿನಿಮಾಗಳು ಓಡುತ್ತಿಲ್ಲ ಎಂಬ ಕಾರಣಕ್ಕೆ ಅಜಯ್ ದೇವಗನ್ ಮಾತನಾಡಿದ್ದಾರೆ ಎಂಬ ವಾದವೂ ನಡೀತು. ಸದ್ಯ ಈ ವಿವಾದ ತಣ್ಣಾಗಿದೆ ಆದರೆ ಮುಂದಿನ ದಿನಗಳಲ್ಲಿ ಮತ್ತೆ ಆರಂಭವಾಗುವ ಸಾಧ್ಯತೆ ಇದೆ.
ಪರಭಾಷೆಯಿಂದಲೂ
ವ್ಯಕ್ತವಾಯ್ತು
ನಟ
ಸುದೀಪ್ಗೆ
ಬೆಂಬಲ
ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾ ಕೂಡ ಹಿಂದಿಯಲ್ಲಿ ರಿಲೀಸ್ ಆಗ್ತಿದೆ. ಜುಲೈ 28 ರಂದು 'ವಿಕ್ರಾಂತ್ ರೋಣ' ರಿಲೀಸ್ ಆಗ್ತಿದ್ದರೆ, 29 ರಂದು ಅಜಯ್ ದೇವಗನ್ ಅಭಿನಯದ 'ಥ್ಯಾಂಕ್ ಗಾಡ್' ಸಿನಿಮಾ ರಿಲೀಸ್ ಆಗ್ತಿದೆ. ಹೀಗಾಗಿ ಈ ಹಿಂದೆ ಭಾಷಾ ವಿಚಾರಕ್ಕೆ ಈ ಇಬ್ಬರ ನಡುವೆ ವಾಕ್ಸಮರ ನಡೆದಿತ್ತು. ಈಗ ಸಿನಿಮಾ ಕಲೆಕ್ಷನ್‌ನಲ್ಲಿ ಜಿದ್ದಾಜಿದ್ದಿ ನಡೆಯುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ.

ಈ ಇಬ್ಬರು ನಟರ ಸಿನಿಮಾ ರಿಲೀಸ್‌ಗೆ ಅಭಿಮಾನಿಗಳು ಕೂಡ ಕಾದು ಕುಳಿತಿದ್ದು, ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ 'ವಿಕ್ರಾಂತ್ ರೋಣ' ಕಮಾಲ್ ಮಾಡುತ್ತಾ ಅಥವಾ 'ಥ್ಯಾಂಕ್ ಗಾಡ್' ಮಾಡುತ್ತಾ ಎಂಬ ಕುತೂಹಲವನ್ನು ಪ್ರೇಕ್ಷಕರು ಸಿನಿಮಾ ರಿಲೀಸ್ ಆಗುವವರೆಗೂ ಇಟ್ಟುಕೊಳ್ಳಬೇಕಾಗುತ್ತದೆ. 'ಕೆಜಿಎಫ್ 2' ತರ 'ವಿಕ್ರಾಂತ್ ರೋಣ' ಕೂಡ ಭರ್ಜರಿ ಕಲೆಕ್ಷನ್ ಮಾಡಿದರೆ, ಬಾಲಿವುಡ್ ಸಿನಿಮಾಗಳಿಗೆ ಭಾರೀ ಪೆಟ್ಟು ಬೀಳುವ ಸಾಧ್ಯತೆ ಇದೆ. ಸಿನಿ ಪ್ರೇಕ್ಷಕರಿಗೂ ಸಹ 'ವಿಕ್ರಾಂತ್ ರೋಣ' ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಯಿದ್ದು, ಐದು ಭಾಷೆಗಳಲ್ಲೂ ರಿಲೀಸ್ ಆಗುತ್ತಿರುವುದರಿಂದ 'ಕೆಜಿಎಫ್' ದಾಖಲೆಯನ್ನ ಮುರಿದು ಮುನ್ನುಗುತ್ತಾ ಅಂತ ನೋಡಬೇಕಿದೆ. ಒಟ್ಟಿನಲ್ಲಿ ಭಾಷೆಯಲ್ಲಿ ಆರಂಭವಾಗಿದ್ದ ಸ್ಯಾಂಡಲ್‌ವುಡ್ ಮತ್ತು ಬಾಲಿವುಡ್ ನಟರ ಜಿದ್ದಾಜಿದ್ದಿ ಈಗ ಸಿನಿಮಾ ಬಿಡುಗಡೆಯಲ್ಲೂ ಮುಂದುವರೆದಿದ್ದು, ಯಾವ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತೆ ಅಂತ ಕಾದು ನೋಡಬೇಕಿದೆ.