twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ 'ಕುರುಕ್ಷೇತ್ರ' ನಂತರ ಸುದೀಪ್ 'ವಿಕ್ರಾಂತ್ ರೋಣ': ಬಯಲಾಯ್ತು 3D ವರ್ಷನ್ ಸೀಕ್ರೇಟ್ಸ್!

    |

    ಮೋಸ್ಟ್ ಅವೈಟೆಡ್ 'ವಿಕ್ರಾಂತ್ ರೋಣ' ರಿಲೀಸ್‌ಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ. ಕಟೌಟ್‌ಗಳು ಸಿದ್ಧವಾಗ್ತಿದ್ದು, ಥಿಯೇಟರ್‌ಗಳಲ್ಲಿ ಭರ್ಜರಿ ಸೆಲೆಬ್ರೇಷನ್ ಪ್ಲ್ಯಾನ್ ನಡೀತಿದೆ. ವಿಶ್ವದಾದ್ಯಂತ ಸಾವಿರಾರು ಸ್ಕ್ರೀನ್‌ಗಳಲ್ಲಿ ಏಕಕಾಲಕ್ಕೆ ‌ಸಿನಿಮಾ ಅಪ್ಪಳಿಸುತ್ತಿದ್ದು, ಕಿಚ್ಚ ಸುದೀಪ್ ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ನೋಡೋಕೆ ತುದಿಗಾಲಲ್ಲಿ ನಿಂತಿದ್ದಾರೆ. ವಿಶೇಷ ಅಂದ್ರೆ, ರೋಣನ ಫ್ಯಾಂಟಮ್ ಪ್ರಪಂಚವನ್ನು 3D ಕನ್ನಡಕದಲ್ಲೂ ಕಣ್ತುಂಬಿಕೊಳ್ಳಬಹುದು. ಕನ್ನಡದಲ್ಲಿ 3D ಸಿನಿಮಾಗಳ ಸಂಖ್ಯೆ ಕಡಿಮೆ. ಅದರಲ್ಲೂ ಉತ್ತಮ ಗುಣಮಟ್ಟದ 3D ಅನುಭವ 'ವಿಕ್ರಾಂತ್ ರೋಣ' ಚಿತ್ರದಲ್ಲಿ ಸಿಗಲಿದೆ. ಇದಕ್ಕಾಗಿ ಚಿತ್ರತಂಡ ಹಾಕಿರುವ ಶ್ರಮ ಅಷ್ಟಿಷ್ಟಲ್ಲ.

    ಮೊದಲಿಗೆ 3Dಯಲ್ಲಿ 'ವಿಕ್ರಾಂತ್ ರೋಣ' ಸಿನಿಮಾ ರಿಲೀಸ್ ಮಾಡುವ ಐಡಿಯಾ ಚಿತ್ರತಂಡಕ್ಕೆ ಇರಲಿಲ್ಲ. ಚಿತ್ರೀಕರಣದ ನಡುವೆ ರೋಣನ ಆರ್ಭಟವನ್ನು ಮತ್ತಷ್ಟು ರೋಚಕವಾಗಿ ಪ್ರೇಕ್ಷಕರ ಕಣ್ಣಿಗೆ ಕಟ್ಟಿದಂತೆ ಹೇಳಬೇಕು ಎಂದು ಸುದೀಪ್ ನಿರ್ಧರಿಸಿದರು.‌ ನಂತರ ನಿರ್ಮಾಪಕರು ಧೈರ್ಯ ಮಾಡಿದ ಮೇಲೆ ನಿರ್ದೇಶಕರಾದ ಅನೂಪ್ ಭಂಡಾರಿ ಇಂತಹದೊಂದು ಸಾಹಸಕ್ಕೆ ಕೈಹಾಕಿದ್ದಾರೆ. ಈಗಾಗಲೇ ಟ್ರೈಲರ್‌ನ 3Dಯಲ್ಲಿ ನೋಡಿದವರು ಥ್ರಿಲ್‌ ಆಗಿದ್ದಾರೆ. ಇನ್ನು ಕಂಪ್ಲೀಟ್ ಸಿನಿಮಾ ಅದ್ಭುತ ಅನುಭವ ನೀಡುವುದರಲ್ಲಿ ಅನುಮಾನವಿಲ್ಲ.

    'ಪ್ಯಾನ್ ಇಂಡಿಯಾ' ಮುಂದೆ 'ರಿಮೇಕ್‌ ಸಿನಿಮಾ'ಗಳಿಗೀಗ ಬೆಲೆ ಇಲ್ಲ- ಕಿಚ್ಚ ಸುದೀಪ್!'ಪ್ಯಾನ್ ಇಂಡಿಯಾ' ಮುಂದೆ 'ರಿಮೇಕ್‌ ಸಿನಿಮಾ'ಗಳಿಗೀಗ ಬೆಲೆ ಇಲ್ಲ- ಕಿಚ್ಚ ಸುದೀಪ್!

    ಇಂಗ್ಲೀಷ್‌ ಸೇರಿದಂತೆ ಏಕಕಾಲಕ್ಕೆ 6 ಭಾಷೆಗಳಲ್ಲಿ ವಿಶ್ವದಾದ್ಯಂತ 'ವಿಕ್ರಾಂತ್ ರೋಣ' ರಿಲೀಸ್ ಆಗಲಿದೆ. ಬಹುತೇಕ ಸೆಟ್‌ಗಳಲ್ಲೇ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಹೈದರಾಬಾದಿನ ಅನ್ನಪೂರ್ಣ ಸ್ಟುಡಿಯೋದಲ್ಲಿ ಕೊರೊನಾ ನಿಯಮಗಳನ್ನು ಪಾಲಿಸಿ ತಂಡ ಶೂಟಿಂಗ್ ಮಾಡಿತ್ತು. ಸಿನಿಮಾ ಸೆಟ್ಟೇರಿದ ದಿನದಿಂದಲೂ ಮೇಕಿಂಗ್ ಸ್ಟಿಲ್ಸ್, ಸಣ್ಣ ಗ್ಲಿಂಪ್ಸ್ ರಿಲೀಸ್ ಮಾಡಿ ಹೈಪ್‌ ಕ್ರಿಯೇಟ್ ಮಾಡುತ್ತಾ ಬಂದ ತಂಡ ಸದ್ಯ ಸಾಂಗ್ಸ್ ಮತ್ತು ಟ್ರೈಲರ್ ನಿಂದ ದೊಡ್ಡಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಅದರಲ್ಲೂ ಸಿನಿಮಾ 3D ವರ್ಷನ್ ನಿರೀಕ್ಷೆ ಹುಟ್ಟಾಕ್ಕಿದೆ.

    'ವಿಕ್ರಾಂತ್ ರೋಣ' ತಂಡದ NFT ಮೆಂಬರ್‌ಶಿಪ್: ವಿಶ್ವದಲ್ಲಿ ಇದೇ ಮೊದಲು! 'ವಿಕ್ರಾಂತ್ ರೋಣ' ತಂಡದ NFT ಮೆಂಬರ್‌ಶಿಪ್: ವಿಶ್ವದಲ್ಲಿ ಇದೇ ಮೊದಲು!

    500 ಜನರ 13 ತಿಂಗಳ‌ ಕಸರತ್ತು

    500 ಜನರ 13 ತಿಂಗಳ‌ ಕಸರತ್ತು

    3D ಸಿನಿಮಾ ಮೇಕಿಂಗ್‌ನಲ್ಲಿ ಎರಡು ಬಗೆ ಇದೆ.‌ ಒಂದು 3D ಕ್ಯಾಮರಾದಲ್ಲಿ ಮೊದಲೇ ಶೂಟ್ ಮಾಡೋದು. ಮತ್ತೊಂದು ಅದಾಗಲೇ 2D ಶೂಟ್ ಮಾಡಿದ ಶಾಟ್‌ಗಳಿಗೆ 3D ಟಚ್ ಕೊಡೋದು. ಎರಡನೇ ಮಾದರಿಯಲ್ಲಿ 'ವಿಕ್ರಾಂತ್ ರೋಣ' ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರ್ತಿದ್ದಾರೆ. 1000ಕ್ಕೂ ಅಧಿಕ ಶಾಟ್‌ಗಳನ್ನು 3Dಗೆ ಬದಲಾಯಿಸಲು 500 ಜನ ತಂತ್ರಜ್ಞರು, ಮುಂಬೈ, ಕೊಚ್ಚಿ, ಪಾಟ್ನಾ, ಬೆಂಗಳೂರಿನ ಗ್ರಾಫಿಕ್ಸ್ ಸ್ಟುಡಿಯೋಗಳಲ್ಲಿ ಕೆಲಸ ಮಾಡಿದ್ದಾರೆ. ಆ ತಂಡವನ್ನು ಸ್ಪೆಷಲ್ ವಿಡಿಯೋ ಮೂಲಕ ಚಿತ್ರತಂಡ ಪರಿಚಯಿಸಿದೆ.

    'ವಿಕ್ರಾಂತ್ ರೋಣ' 3D ವರ್ಷನ್ ಬಗ್ಗೆ ಸುದೀಪ್ ಏನಂದ್ರು?

    'ವಿಕ್ರಾಂತ್ ರೋಣ' 3D ವರ್ಷನ್ ಬಗ್ಗೆ ಸುದೀಪ್ ಏನಂದ್ರು?

    ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ 'ವಿಕ್ರಾಂತ್ ರೋಣ' 3D ವರ್ಷನ್ ಬಗ್ಗೆ ಸುದೀಪ್ ಮಾತನಾಡಿದ್ದರು.‌ ಸಿನಿಮಾ ಶುರು ಮಾಡಿದಾಗ ಇಂತಹ ಐಡಿಯಾ ಖಂಡಿತ ಚಿತ್ರತಂಡಕ್ಕೆ ಇರಲಿಲ್ಲವಂತೆ. ಶೂಟಿಂಗ್ ಮಾಡ್ತಾ ಮಾಡ್ತಾ ಹುಟ್ಟಿಕೊಂಡ ಆಲೋಚನೆ ಇದು. "ಅನ್ನಪೂರ್ಣ ಸ್ಟುಡಿಯೋದಲ್ಲಿ ಹಾಕಿದ್ದ ಕಾಡಿನ ಸೆಟ್‌ನಲ್ಲಿ ಚಿತ್ರೀಕರಣ ನಡೀತಿತ್ತು. ಆ ಸೆಟ್ ನೋಡೋದಕ್ಕೆ ಅದ್ಭುತವಾಗಿತ್ತು. ಕಾಡು ವಿವಿಧ ಪದರಗಳಾಗಿ ಕಾಣುವಂತೆ ಆರ್ಟ್ ಡೈರೆಕ್ಟರ್ ಶಿವಕುಮಾರ್ ನಿರ್ಮಿಸಿದ್ದರು. ಪ್ರತಿ ಶಾಟ್ ಶೂಟ್ ಆದಮೇಲೆ ಮಾನಿಟರ್‌ನಲ್ಲಿ ನೋಡ್ತಿದ್ದೆ, ಆದರೆ ನಿಜವಾಗಿ ಕಣ್ಣಿಗೆ ಕಾಣುತ್ತಿದ್ದಷ್ಟು ಪದರಗಳಾಗಿ ಇಡೀ ಕಾಡು ಕಾಣಿಸುತ್ತಿರಲಿಲ್ಲ.‌ ಮಾನಿಟರ್ ಚಿಕ್ಕದಾಯ್ತು ಅಂತ ದೊಡ್ಡ ಮಾನಿಟರ್ ಕೂಡ ತರಿಸಿ ನೋಡಿದ್ವಿ. ಆದರೂ ಆ ಮಜಾ ಸಿಗಲಿಲ್ಲ. ಅರೇ ಕಣ್ಣಿಗೆ ಅಷ್ಟು ಅದ್ಭುತವಾಗಿ ಕಾಣುವ ಕಾಡು ಪರದೆಯಲ್ಲಿ ಯಾಕೆ ಹೀಗೆ ಕಾಣುತ್ತಿದೆ. ನಾನು ಈಗ ಇಲ್ಲಿ ಏನು ನೋಡುತ್ತಿದ್ದೀನೋ ಅದನ್ನೇ ತೆರೆಮೇಲೆ ಪ್ರೇಕ್ಷಕರಿಗೆ ತೋರಿಸಬೇಕು ಅಂದಾಗ 3D ಐಡಿಯಾ ಬಂತು. ಅದಕ್ಕೆ ಬಹಳ ಹಣವೂ ಬೇಕಿತ್ತು. ನಿರ್ಮಾಪಕರು ಒಪ್ಪಿದ್ರು, ಕೊನೆಗೆ ಅನೂಪ್ ಭಂಡಾರಿ ಈ ಸಾಹಸಕ್ಕೆ ಮುಂದಾದರು" ಎಂದು ಹೇಳಿದ್ದರು.

    'ಕುರುಕ್ಷೇತ್ರ' ಬಳಿಕ 'ವಿಕ್ರಾಂತ್ ರೋಣ' 3D ಝಲಕ್

    'ಕುರುಕ್ಷೇತ್ರ' ಬಳಿಕ 'ವಿಕ್ರಾಂತ್ ರೋಣ' 3D ಝಲಕ್

    ಮೊದಲೇ ಹೇಳಿದಂತೆ ಕನ್ನಡದಲ್ಲಿ 3D ಸಿನಿಮಾಗಳ ಸಂಖ್ಯೆ ವಿರಳ. 'ಕಠಾರಿವೀರ ಸುರ ಸುಂದರಾಂಗಿ', 'ಕುರುಕ್ಷೇತ್ರ' ಸೇರಿದಂತೆ ಕೆಲವೇ ಸಿನಿಮಾಗಳು ಈ ಮಾದರಿಯಲ್ಲಿ ಬಂದು ಪ್ರೇಕ್ಷಕರನ್ನು ರಂಜಿಸಿವೆ. ಕೆಲವೇ ವರ್ಷಗಳ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕುರುಕ್ಷೇತ್ರ' ಸಿನಿಮಾ 2D ಮತ್ತು 3D ವರ್ಷನ್‌ಗಳಲ್ಲಿ ರಿಲೀಸ್ ಆಗಿ ಹಿಟ್ ಆಗಿತ್ತು. ‌ಈಗ ಇದೇ ಹಾದಿಯಲ್ಲಿ 'ವಿಕ್ರಾಂತ್ ರೋಣ' ಸಿನಿಮಾ ಕೂಡ ಬರ್ತಿದೆ.

    3000ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಸಿನಿಮಾ ರಿಲೀಸ್

    3000ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಸಿನಿಮಾ ರಿಲೀಸ್

    ಇದೇ ಶುಕ್ರವಾರ 'ವಿಕ್ರಾಂತ್ ರೋಣ' ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಒಂದು ಅಂದಾಜಿನ‌ ಪ್ರಕಾರ ದೇಶಾದ್ಯಂತ 3000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ವಿದೇಶದ 1200 ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಚಿತ್ರವನ್ನು ರಿಲೀಸ್ ಮಾಡುವ ಲೆಕ್ಕಾಚಾರ ನಡೀತಿದೆ.

    Recommended Video

    'ವಿಕ್ರಾಂತ್ ರೋಣ' ಮೊದಲ ದಿನದ ಬಾಕ್ಸಾಫೀಸ್ ಗಳಿಕೆ ಲೆಕ್ಕಾಚಾರ! | Vikrant Rona *Sandalwood | Filmibeat Kannada

    English summary
    Kichcha Sudeep Starrer Vikrant Rona Movie 3D Version Secrets Revealed, Know More.
    Sunday, July 24, 2022, 14:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X