»   » ಧ್ರುವ ಸರ್ಜಾ 'ಅದ್ದೂರಿ' ಬಗ್ಗೆ ಕಿಚ್ಚ ಸುದೀಪ್ ಕಾಮೆಂಟ್

ಧ್ರುವ ಸರ್ಜಾ 'ಅದ್ದೂರಿ' ಬಗ್ಗೆ ಕಿಚ್ಚ ಸುದೀಪ್ ಕಾಮೆಂಟ್

Posted By:
Subscribe to Filmibeat Kannada

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕುಟುಂಬದ ಕುಡಿ 'ಧ್ರುವ ಸರ್ಜಾ', ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಅದ್ದೂರಿ ಚಿತ್ರದ ಮೂಲಕ ಭಾರೀ ಖ್ಯಾತಿ ಗಳಿಸಿವ ದಾರಿಯಲ್ಲಿದ್ದಾರೆ. ವಿಮರ್ಶಕರು ಬೆನ್ನು ತಟ್ಟಿರುವ ಜೊತಗೆ ಕನ್ನಡ ಸಿನಿಪ್ರೇಕ್ಷಕರಿಂದ ಈ ಹೊಸ ನಾಯಕ ಧ್ರುವರಿಗೆ 'ಅದ್ಧೂರಿ' ಸ್ವಾಗತ ಸಿಕ್ಕಿದೆ.

ಅದ್ದೂರಿ ನಟ ಧ್ರುವ ಕುರಿತು ಇನ್ನೊಂದು ಮಹತ್ವದ ಬೆಳವಣಿಗೆ ನಡೆದಿದೆ. ಅದ್ದೂರಿ ಚಿತ್ರ ನೋಡಿದ ಕಿಚ್ಚ ಸುದೀಪ್ ಚಿತ್ರವನ್ನು ಮೆಚ್ಚದ್ದಲ್ಲದೇ ನವನಟ ಧ್ರುವರ ಬಗ್ಗೆ ಮೆಚ್ಚಿ ಮಾತನಾಡಿದ್ದಾರೆ. ಚಿತ್ರ ನೋಡಿದ ಸುದೀಪ್ ಧ್ರುವರಿಗೆ ಟ್ವೀಟ್ ಮಾಡಿ "ಚಿತ್ರ ಚೆನ್ನಾಗಿದೆ. ನಿನ್ನ ಅಭಿನಯ ತುಂಬಾ ಮೆಚ್ಚಿಕೊಳ್ಳುವಂತಿದೆ. ಗಾಡ್ ಬ್ಲೆಸ್ ಯೂ..."ಎಂದು ಟ್ಟೀಟ್ ಮಾಡಿ ಆಶೀರ್ವದಿಸಿದ್ದಾರೆ.

ಬೆಂಗಳೂರು, ಮೈಸೂರಿನಂತಹ ಮಹಾ ನಗರಗಳಲ್ಲಿ ಮಾತ್ರವಲ್ಲದೇ, ಮಿಕ್ಕ ಕಡೆಗಳಲ್ಲಿಯೂ ಅದ್ದೂರಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅದ್ದೂರಿ ಹಾಡುಗಳನ್ನು ಕೇಳಿಯೇ ಸಾಕಷ್ಟು ಖುಷಿಯಾಗಿದ್ದ ಪ್ರೇಕ್ಷಕರು ಈಗ ಚಿತ್ರ ನೋಡಲು ಕುಟುಂಬ ಸಮೇತ ಚಿತ್ರಮಂದಿರದತ್ತ ಹೆಜ್ಜೆಹಾಕುತ್ತಿದ್ದಾರೆ. ಅಂಬಾರಿ ಖ್ಯಾತಿಯ ಅರ್ಜುನ್ ಪಾಲಿಗೆ ಇದು ಎರಡನೇ ಸಕ್ಸಸ್.

ತಮ್ಮ ಮೊಟ್ಟಮೊದಲ ಚಿತ್ರ 'ಅಂಬಾರಿ'ಯ ಸೂಪರ್ ಹಿಟ್ ಆಗಿತ್ತಾದ್ದರಿಂದ ನಿರ್ದೇಶಕ ಎ.ಪಿ. ಅರ್ಜುನ್ ಅವರ 'ಅದ್ಧೂರಿ' ಚಿತ್ರದ ಬಗ್ಗೆ ಸಹಜವಾಗಿ ಒಂದು ಮಟ್ಟಿಗಿನ ನಿರೀಕ್ಷೆ ಸೃಷ್ಟಿಯಾಗಿತ್ತು. ಆದರೆ, ಈ ಮಟ್ಟಿಗಿನ ಭಾರೀ ಪ್ರತಿಕ್ರಿಯೆಯನ್ನು ಸ್ವತಃ ಅದ್ದೂರಿ ಚಿತ್ರತಂಡವೇ ನಿರೀಕ್ಷಿಸಿರಲಿಲ್ಲ. ಈಗ ಇಡೀ ಚಿತ್ರತಂಡ ಖುಷಿಖುಷಿಯಾಗಿದೆ. ಸುದೀಪ್ ಅವರ ಪ್ರಶಂಸೆ ಕೇಳಿದ ಮೇಲೆ ಧ್ರುವ ಸರ್ಜಾ ಹಾಗೂ ಚಿತ್ರತಂಡದ ಖುಷಿ ಇಮ್ಮಡಿಯಾಗುವುದು ಖಾತ್ರಿ.

ಈ ಚಿತ್ರದ ವಿತರಣೆ ಹಕ್ಕು ಕೊಂಡುಕೊಂಡಿದ್ದು ವಿತರಕ ಭಾಷಾ. ಅವರಂತೂ ಭಾರೀ ಸಂತೋಷಗೊಂಡಿದ್ದಾರೆ. ಆಗಿನ ನಿರೀಕ್ಷೆಗೆ ಸ್ವಲ್ಪ ಹೆಚ್ಚೇ ಎನಿಸುವ ಮೊತ್ತಕ್ಕೆ ಅದ್ದೂರಿ ವಿತರಣೆ ಹಕ್ಕುಗಳನ್ನು ಪಡೆದುಕೊಂಡಿದ್ದ ಅವರಿಗೆ ಈಗ ನೆಮ್ಮದಿ. ನೆಮ್ಮದಿಯೇನು ಅದೃಷ್ಟ ಖುಲಾಯಿಸಿದ್ದು ಖಂಡಿತ.

ಧ್ರುವ ಅವರಂತೂ ಪುಳಕಗೊಂಡಿದ್ದಾರೆ. ಮೊದಲ ಚಿತ್ರವೇ ಜನಮನ್ನಣೆ ಪಡೆದರೆ ಯಾರಿಗೆ ಖೂಷಿಯಾಗೊಲ್ಲ ಹೇಳಿ? ಹೊಸ ನಾಯಕರೊಬ್ಬರ ಚಿತ್ರಕ್ಕೆ ಈ ಮಟ್ಟಿಗಿನ ಸ್ವಾಗತ ಸಿಕ್ಕಿದ್ದು ಅಪರೂಪ. ಹೊಸ ನಾಯಕರ ಮಾತು ಹಾಗಿರಲಿ, ಇತ್ತೀಚಿಗೆ ಕನ್ನಡದ ಜನಪ್ರಿಯ ನಾಯಕನಟನರ ಚಿತ್ರಗಳಿಗೇ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿರುವುದಿಲ್ಲ. ಧ್ರುವರಿಗೆ ಪ್ರತಿಭೆಯ ಜೊತೆಗೆ ಅದೃಷ್ಟವೂ ಸಾಥ್ ನೀಡಿದೆ. (ಒನ್ ಇಂಡಿಯಾ ಕನ್ನಡ)

English summary
Kichcha Sudeep Tweeted Dhruv Sarja, the Hero of Addhri Movie and told that he performed well in the movie. He also added that your acting is very good and God Bless You. 
 
Please Wait while comments are loading...