»   » ಶುಕ್ರವಾರ 'ಹೆಬ್ಬುಲಿ'ಯ ಇನ್ನೊಂದು ಅವತಾರ ನಿರೀಕ್ಷಿಸಿ

ಶುಕ್ರವಾರ 'ಹೆಬ್ಬುಲಿ'ಯ ಇನ್ನೊಂದು ಅವತಾರ ನಿರೀಕ್ಷಿಸಿ

Posted By:
Subscribe to Filmibeat Kannada

'ಗಜಕೇಸರಿ' ಚಿತ್ರದ ಖ್ಯಾತಿಯ ನಿರ್ದೇಶಕ ಎಸ್.ಕೃಷ್ಣ ಅವರು ಆಕ್ಷನ್-ಕಟ್ ಹೇಳಿರುವ 'ಹೆಬ್ಬುಲಿ' ಚಿತ್ರದ ಸೂಪರ್-ಡೂಪರ್ ಫಸ್ಟ್ ಲುಕ್ ಪೋಸ್ಟರ್ ನಿನ್ನೆ (ಜೂನ್ 8) ರಿಲೀಸ್ ಆಗಿತ್ತು.

ಈ ಪೋಸ್ಟರ್ ನಲ್ಲಿ ಕಿಚ್ಚ ಸುದೀಪ್ ಅವರು ಸಖತ್ ಡ್ಯಾಶಿಂಗ್ ಲುಕ್ ನಲ್ಲಿ ಮಿಂಚುವ ಮೂಲಕ ಅಭಿಮಾನಿಗಳೆದೆಯಲ್ಲಿ ಕಿಚ್ಚೆಬ್ಬಿಸಿದ್ದರು. ಪೋಸ್ಟರ್ ಬಿಡುಗಡೆ ಆದ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ರೆಸ್ಪಾನ್ಸ್ ಗಿಟ್ಟಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.['ಹೆಬ್ಬುಲಿ' ಫಸ್ಟ್ ಲುಕ್ ಔಟ್: ಹೊಸ ಅವತಾರದಲ್ಲಿ ಕಿಚ್ಚ ಸುದೀಪ್]


Kichcha Sudeep tweets about 'Hebbuli' first look posters

ಇದೀಗ ಹೊಸ ವಿಷಯ ಏನಪ್ಪಾ ಅಂದ್ರೆ ನಿನ್ನೆ ಬಿಡುಗಡೆ ಆದ 'ಹೆಬ್ಬುಲಿ' ಪೋಸ್ಟರ್ ಆಫೀಶಿಯಲ್ ಪೋಸ್ಟರ್ ಅಲ್ಲ ಎಂಬುದನ್ನು ಖುದ್ದು ಕಿಚ್ಚ ಸುದೀಪ್ ಅವರೇ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.['ಹೆಬ್ಬುಲಿ' ಚಿತ್ರಕ್ಕಾಗಿ ಕಿಚ್ಚ ಸುದೀಪ್ 'ಆರ್ಮಿ' ಲುಕ್.!]


'ನಿನ್ನೆ ಬಿಡುಗಡೆ ಆದ ಪೋಸ್ಟರ್ ಅನ್ನು ನೀವು ನಿರೀಕ್ಷೆಗೂ ಮೀರಿ ಇಷ್ಟಪಟ್ಟದನ್ನು ನೋಡಿ ತುಂಬಾನೇ ಖುಷಿ ಆಯ್ತು. ಆದರೆ ಇದು ಅಧೀಕೃತ ಪೋಸ್ಟರ್ ಅಲ್ಲ, ಇದು ಲೀಕ್ ಆಗಿರೋ ಅನಧೀಕೃತ ಪೋಸ್ಟರ್. ಆಫಿಶೀಯಲ್ ಪೋಸ್ಟರ್ ಶುಕ್ರವಾರದಂದು ಬಿಡುಗಡೆ ಆಗಲಿದೆ' ಅಂತ ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ.'ನನ್ನ ಪೋಸ್ಟರ್ ಗೆ ತುಂಬಾ ಪ್ರೀತಿಯಿಂದ ಎಲ್ಲರೂ ರೆಸ್ಪಾನ್ಸ್ ಕೊಟ್ಟಿದ್ದೀರಿ, ಇದನ್ನು ನೋಡುವಾಗ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ ಅಂತ ತುಂಬಾ ಖುಷಿ ಆಗುತ್ತಿದೆ. ಎಲ್ಲರಿಗೂ ತುಂಬಾ ಧನ್ಯವಾದ. ಪರದೆ ಹಿಂದೆ ಯಾರೆಲ್ಲಾ ಶ್ರಮವಹಿಸಿ ಕೆಲಸ ಮಾಡಿದ್ದಾರೆ ಅವರಿಗೆ ಕ್ರೆಡಿಟ್ಸ್ ಸಲ್ಲುತ್ತದೆ' ಎಂದು ಸುದೀಪ್ ಅವರು ಅಭಿಮಾನಿಗಳ ಬಗ್ಗೆ ಹಾಗೂ ಚಿತ್ರತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮತ್ತೊಂದು ಟ್ವೀಟ್ ಮಾಡಿದ್ದಾರೆ.ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಖ್ಯಾತ ನಟಿ ಅಮಲಾ ಪೌಲ್ ಅವರು ಕಿಚ್ಚ ಸುದೀಪ್ ಅವರ ಜೊತೆ 'ಹೆಬ್ಬುಲಿ' ಚಿತ್ರದಲ್ಲಿ ರೋಮ್ಯಾನ್ಸ್ ಮಾಡುತ್ತಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕಿಚ್ಚನ ಅಣ್ಣನ ಪಾತ್ರವಹಿಸಲಿದ್ದಾರೆ.[ಕ್ರೇಜಿಸ್ಟಾರ್ ಅವರನ್ನು ಕಿಚಾಯಿಸುತ್ತಿರುವವರ ವಿರುದ್ಧ ಕಿಚ್ಚನ ಕಿಚ್ಚು]


Kichcha Sudeep tweets about 'Hebbuli' first look posters

ಚಿತ್ರದಲ್ಲಿ ಸುದೀಪ್ ಅವರು ಆರ್ಮಿ ಅಧಿಕಾರಿ ಪಾತ್ರ ವಹಿಸಿದ್ದು, ಸಖತ್ ಖಡಕ್ ಲುಕ್ ನಲ್ಲಿ ಮಿಂಚಿದ್ದಾರೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ನಿನ್ನೆ ಫಸ್ಟ್ ಲುಕ್ ಪೋಸ್ಟರ್ ಗಳು ಬಿಡುಗಡೆ ಆಗಿವೆ. ವಿಶೇಷವಾಗಿ ಈ ಚಿತ್ರಕ್ಕಾಗಿ ಸುದೀಪ್ ಅವರು ತಮ್ಮ ಹೇರ್ ಸ್ಟೈಲ್ ಅನ್ನು ಬದಲಾಯಿಸಿದ್ದಾರೆ.


English summary
Kannada Actor Sudeep tweets about his Kannada Movie 'Hebbuli' first look posters.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada