For Quick Alerts
  ALLOW NOTIFICATIONS  
  For Daily Alerts

  ಚನ್ನಪಟ್ಟಣಕ್ಕೆ ಭೇಟಿ ನೀಡಿದ ಸುದೀಪ್: ಕಬ್ಬಾಳಮ್ಮ ದೇವಾಲಯಕ್ಕೂ ಭೇಟಿ

  By ರಾಮನಗರ ಪ್ರತಿನಿಧಿ
  |

  ನಿನ್ನೆಯಷ್ಟೆ ಹುಟ್ಟುಹಬ್ಬದ ಆಚರಿಸಿಕೊಂಡಿರುವ ಸುದೀಪ್ ಇಂದು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ.

  ಇಂದು ಮೈಸೂರಿನ ಚಾಮುಂಡೇಶ್ವರಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದ ಸುದೀಪ್ ಅದರ ಬಳಿಕ ಚನ್ನಪಟ್ಟಣಕ್ಕೆ ತೆರಳಿ ಅಲ್ಲಿ ದೇವರ ದರ್ಶನ ಪಡೆದಿದ್ದಾರೆ. ಸುದೀಪ್ ಚನ್ನಪಟ್ಟಣಕ್ಕೆ ಆಗಮಿಸಿದ ವಿಷಯ ತಿಳಿದು ಸಾವಿರಾರು ಸಂಖ್ಯೆಯ ಅಭಿಮಾನಿಗಳು ಮೆಚ್ಚಿನ ನಟನನ್ನು ನೋಡಲು ನೆರೆದಿದ್ದರು.

  ಮೊದಲಿಗೆ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಿಶ್ವದಲ್ಲೇ ಅತಿ ಎತ್ತರದ 68 ಅಡಿ ಎತ್ತರದ ಪಂಚಲೋಹದ ಚಾಮುಂಡೇಶ್ವರಿ ವಿಗ್ರಹದ ದರ್ಶನ ಪಡೆದು ತಾಯಿಗೆ ಚಿತ್ರನಟ ಸುದೀಪ್ ವಿಶೇಷ ಪೂಜೆ ಸಲ್ಲಿಸಿದರು.

  ವಿಶ್ವದ ಎತ್ತರದ ತಾಯಿ ಚಾಮುಂಡೇಶ್ವರಿ ವಿಗ್ರಹವನ್ನ ನೋಡಿದ ಸುದೀಪ್ ಅವರು ವಿಗ್ರಹವನ್ನ ನಿರ್ಮಾಣ ಮಾಡಿಸಿದ ದೇವಾಲಯದ ಧರ್ಮದರ್ಶಿ ಮಲ್ಲೇಶಪ್ಪ‌ ಅವರನ್ನು ಅಭಿನಂದಿಸಿದರು. ಅಲ್ಲದೇ ಅವರಿಂದ ವಿಗ್ರಹ ನಿರ್ಮಾಣದ ಬಗ್ಗೆ ಮಾಹಿತಿಯನ್ನ ಸಹ ಪಡೆದುಕೊಂಡರು.

  ಚನ್ನಪಟ್ಟಣಕ್ಕೆ ಸುದೀಪ್​ ಆಗಮಸುತ್ತಿರುವ ವಿಷಯ ಮೊದಲೆ ತಿಳಿದು ಸಾವಿರಾರು ಅಭಿಮಾನಿಗಳು ಎರಡ್ಮೂರು ತಾಸು ಮೊದಲೇ ದೇವಸ್ಥಾನದ ಬಳಿ ಜಮಾಯಿಸಿದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು, ಸುದೀಪ್ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಜಯಕಾರ ಕೂಗಿದರು. ಮೆಚ್ಚಿನ ನಟನನ್ನು ಹತ್ತಿರದಿಂದ ಕಾಣಲು ನೂಕು ನುಗ್ಗಲು ಏರ್ಪಟ್ಟಿತು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಡಬೇಕಾಯಿತು.

  ನಂತರ ಕನಕಪುರಕ್ಕೆ ತೆರಳಿದ ಸುದೀಪ್ ಕನಕಪುರ ತಾಲ್ಲೂಕಿನ ಕಬ್ಬಾಳು ಗ್ರಾಮದ ಇತಿಹಾಸ ಪ್ರಸಿದ್ದ ಕಬ್ಬಾಳು ದೇವಾಲಯಕ್ಕೆ ಭೇಟಿ ನೀಡಿ ಕಬಾಳಮ್ಮನಿಗೆ ಪೂಜೆ ಸಲ್ಲಿಸಿದರು.

  ಸುದೀಪ್ ಹುಟ್ಟುಹಬ್ಬಕ್ಕೆ ರಕ್ತದಾನ ಮಾಡಿದ ಅಭಿಮಾನಿಗಳು

  ನೆಚ್ಚಿನ ನಟ ಸುದೀಪ್ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಸುದೀಪ್ ಅಭಿಮಾನಿಗಳು ರಕ್ತದಾನ ಶಿಬಿರ ಹಮ್ಮಿಕೊಂಡ ನೂರಾರು ಅಭಿಮಾನಿಗಳು ರಕ್ತದಾನ ಮಾಡಿದರು.

  ಗೌಡಗೆರೆಯ ಚಾಮುಂಡೇಶ್ವರಿ ದೇವಾಲಯದ ಶ್ರೀಕ್ಷೇತ್ರದಲ್ಲಿ ಪಟ್ಟಣದ ಜೀವಾಮೃತ ರಕ್ತ ನಿದಿಕೇಂದ್ರದ ಉಸ್ತುವಾರಿಯಲ್ಲಿ ನೂರಾರು ಸುದೀಪ್ ಅಭಿಮಾನಿಗಳು ರಕ್ತದಾನ ಮಾಡುವ ಮೂಲಕ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಿದರು.

  ನಿನ್ನೆ ಸುದೀಪ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ನಿನ್ನೆಯ ದಿನ ಬಳ್ಳಾರಿಯ ಸಂಡೂರು ತಾಲ್ಲೂಕಿನ ಬಂಡ್ರಿ ಗ್ರಾಮದಲ್ಲಿ ಸುದೀಪ್ ಹುಟ್ಟುಹಬ್ಬದ ನೆನಪಲ್ಲಿ ಕೆಲವು ಅಭಿಮಾನಿಗಳು ಕೋಣ ಬಲಿ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಈ ಕೃತ್ಯಕ್ಕೆ ವಿರೋಧ ವ್ಯಕ್ತವಾಗುತ್ತಿದೆ.

  English summary
  Kichcha Sudeep visited Channapatna and Kanakapura visited some temples. Sudeep celebrated his birthday yesterday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X