For Quick Alerts
  ALLOW NOTIFICATIONS  
  For Daily Alerts

  ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್: ಅಪಘಾತದಲ್ಲಿ ಕಾಲು ಕಳೆದುಕೊಂಡ ಅಭಿಮಾನಿಗೆ ನೆರವು

  |

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇಂದು (ಜನವರಿ 4) ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡದೇವಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು.

  ಕಿಚ್ಚನ ಕೆಲಸಕ್ಕೆ ಭೇಶ್ ಎಂದ ಅಭಿಮಾನಿಗಳು | Kiccha Sudeep In Pandavapura | Filmibeat Kannada

  ರಂಗಿತರಂಗ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಜೊತೆ ಆಗಮಿಸಿದ ನಟ ಸುದೀಪ್ ಚಾಮುಂಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಸುದೀಪ್ ಅವರನ್ನು ನೋಡಲು ಸಾಕಷ್ಟು ಅಭಿಮಾನಿಗಳು ಜಮಾಯಿಸಿದ್ದರು. ಕಿಚ್ಚನ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಹರಸಾಹಸ ಪಟ್ಟರು.

  ಮತ್ತೊಮ್ಮೆ 'ಮೈ ಆಟೋಗ್ರಾಫ್' ಪುಟ ತೆರೆದ ಸುದೀಪ್: 15 ವರ್ಷದ ನಂತರ ಲತಿಕಾ ಮನೆಗೆ ಭೇಟಿ

  ಮೈಸೂರಿನಲ್ಲಿ ಚಾಮುಂಡೇಶ್ವರಿ ದರ್ಶನ ಪಡೆದು ಹಿಂತಿರುಗಿ ಬರುವ ವೇಳೆ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ಅಭಿಮಾನಿಯನ್ನು ಭೇಟಿ ಮಾಡಿ ನೆರವು ನೀಡಿದರು. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಹಿರೇಮರಳಿ ನಿವಾಸಿ ರಾಘವ್ ಎಂಬುವವರ ಚಿಕಿತ್ಸೆಗೆ ನೆರವಾಗುವ ಮೂಲಕ ನಟ ಸುದೀಪ್ ಮಾನವೀಯತೆ ಮೆರೆದಿದ್ದಾರೆ.

  ಇನ್ನು ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಮ್ ಚಿತ್ರದ ಸುದೀಪ್ ನಟಿಸುತ್ತಿದ್ದು, ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ. ಹೈದರಾಬಾದ್‌ನ ರಾಮೋಜಿ ರಾವ್‌ ಫಿಲಂ ಸಿಟಿಯಲ್ಲಿ ಅದ್ಧೂರಿ ಸೆಟ್‌ ನಿರ್ಮಾಣ ಮಾಡಿ ತಿಂಗಳು ಕಾಲ ಶೂಟಿಂಗ್ ಮಾಡಿದ್ದಾರೆ.

  ಇನ್ನು ಈ ತಿಂಗಳ ಅಂತ್ಯಕ್ಕೆ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಏಂಟನೇ ಆವೃತ್ತಿ ಆರಂಭವಾಗುತ್ತಿದ್ದು, ನಟ ಸುದೀಪ್ ನಿರೂಪಣೆ ಮಾಡಲಿದ್ದಾರೆ.

  English summary
  Kannada actor Kichcha Sudeep visits chamundi temple in Mysuru along with director anup bhanadri.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X