»   » ತ್ರಿವೇಣಿ ಚಿತ್ರಮಂದಿರಕ್ಕೆ ಕಿಚ್ಚ ಸುದೀಪ್ ಹೋಗಿದ್ಯಾಕೆ?

ತ್ರಿವೇಣಿ ಚಿತ್ರಮಂದಿರಕ್ಕೆ ಕಿಚ್ಚ ಸುದೀಪ್ ಹೋಗಿದ್ಯಾಕೆ?

Posted By:
Subscribe to Filmibeat Kannada

ಅಭಿನಯ ಚಕವರ್ತಿ ಕಿಚ್ಚ ಸುದೀಪ್ ಸೋಮವಾರ (ಏ.14) ಬೆಂಗಳೂರು ಗಾಂಧಿನಗರದ ತ್ರಿವೇಣಿ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದಾರೆ. ಮೊದಲೇ ಕಿಕ್ಕಿರಿದ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದ್ದ ತ್ರಿವೇಣಿ ಚಿತ್ರಮಂದಿರ ಕಿಚ್ಚನ ಆಗಮನದಿಂದ ಇನ್ನಷ್ಟು ರಂಗೇರಿತು.

ಇದಕ್ಕೆ ಕಾರಣವಾಗಿದ್ದು ಮೂವತ್ತು ವರ್ಷಗಳ ಬಳಿಕ ಬಿಡುಗಡೆಯಾಗುತ್ತಿರುವ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿನಯದ 'ಖೈದಿ' ಚಿತ್ರ. ಅಭಿಮಾನಿಗಳ ಈ ಒಂದು ಪ್ರೀತಿಗೆ ಬೆಲೆ ಕಟ್ಟಕ್ಕೆ ಆಗಲ್ಲ. ಪ್ರತಿಯೊಬ್ಬ ಕಲಾವಿದನು ಬಯಸುವುದು ಈ ರೀತಿಯ ಅಭಿಮಾನವನ್ನು ಎಂದರು.

Kichcha Sudeep

ಕೆಎಸ್ ಆರ್ ದಾಸ್ ನಿರ್ದೇಶನದ ಈ ಚಿತ್ರವನ್ನು ಜಿಆರ್ ಕೆ ರಾಜು ಅವರು ವಿಶ್ವಚಿತ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿದ್ದರು. ಚಿತ್ರ ಬಿಡುಗಡೆ ಕಂಡಿದ್ದು 1984ರಲ್ಲಿ. ಸೆನ್ಸಾರ್ ಮಂಡಳಿಯಲ್ಲಿ ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ಸಿಕ್ಕಿತ್ತು.

ಕನ್ನಡ ಕಲರ್ ಸ್ಕೋಪ್ ಚಿತ್ರದಲ್ಲಿ ವಿಷ್ಣು ಜೊತೆ ಆರತಿ, ಮಾಧವಿ, ಜಯಮಾಲಿನಿ, ಸಂಗೀತಾ, ನಿತ್ಯಾ, ಅನುರಾಧಾ, ಧೀರೇಂದ್ರ ಗೋಪಾಲ್, ಸುದರ್ಶನ್, ಮುಖ್ಯಮಂತ್ರಿ ಚಂದ್ರು, ಬಿಕೆ ಶಂಕರ್, ಡಿಂಗ್ರಿ ನಾಗರಾಜ್ ಸೇರಿದಂತೆ ಬಹಳಷ್ಟು ಕಲಾವಿದರಿದ್ದಾರೆ. ತೆಲುಗಿನ 'ಖೈದಿ' ಚಿತ್ರದ ರೀಮೇಕ್ ಇದು.

ಮೂಲ ಚಿತ್ರದಲ್ಲಿ ಚಿರಂಜೀವಿ ಹಾಗೂ ಮಾಧವಿ ಮುಖ್ಯ ಪಾತ್ರಧಾರಿಗಳು. ಈ ಚಿತ್ರದ "ತಾಳೆ ಹೂವ ಪೊದೆಯಿಂದ..." (ಚಿ.ಉದಯಶಂಕರ್ ಸಾಹಿತ್ಯ) ಹಾಡು ಆಗಿನ ಕಾಲಕ್ಕೆ ಬುಸ್ ಬುಸ್ ಎಂದು ಸಾಕಷ್ಟು ಸದ್ದು ಮಾಡಿತ್ತು.

ಚಕ್ರವರ್ತಿ ಸಂಗೀತ, ವಿ ಲಕ್ಷ್ಮಣ್ ಅವರ ಛಾಯಾಗ್ರಹಣ, ಡಿ ವೆಂಕಟರತ್ನಂ ಅವರ ಸಂಕಲನ, ಚಿನ್ನಿ ಪ್ರಕಾಶ್ ಮತ್ತು ತಾರಾ ಅವರ ನೃತ್ಯ ಸಂಯೋಜನೆ, ನಾಗರಾಜ್ ಅವರ ಕಲೆ ಇರುವ ಚಿತ್ರವನ್ನು ಡಿವಿ ಸುಧೀಂದ್ರ ಅವರು ಪ್ರಚಾರ ಮಾಡಿದ್ದರು. ಈಗ ಮತ್ತೊಂದು ಬೆಳ್ಳಿತೆರೆಯ ಮೇಲೆ ವೀಕ್ಷಿಸುವ ಅವಕಾಶ. (ಒನ್ಇಂಡಿಯಾ ಕನ್ನಡ)

English summary
Abhinaya Chakravarthi Kichcha Sudeep on Monday (14th April) watched Vishnuvardhan's Khaidi in Triveni theatre. The film has been re-releaed after 30 years. It first released in 1984. The film is directed by KSR Dass.
Please Wait while comments are loading...