twitter
    For Quick Alerts
    ALLOW NOTIFICATIONS  
    For Daily Alerts

    ಪಿವಿಆರ್‌ನಲ್ಲಿ ಕನ್ನಡ ನಟರ ಭಾವಚಿತ್ರಗಳು ಯಾಕಿಲ್ಲ ಎಂಬ ಪ್ರಶ್ನೆ ಕೇಳಿದ್ದಕ್ಕೆ ಕಿಚ್ಚ ಗರಂ!

    |

    ಕಿಚ್ಚ ಸುದೀಪ್ ತೆರೆ ಮೇಲೆ ಮಾತ್ರವಲ್ಲದೇ ತೆರೆ ಹಿಂದೆಯೂ ಸಹ ತಮ್ಮ ಮಾತುಗಳಿಂದಲೇ ಪ್ರಶ್ನೆ ಮಾಡುವವರನ್ನು ಸೈಲೆಂಟ್ ಮಾಡುವಂತಹ ಚತುರ. ಈಗಾಗಲೇ ಸಾಕಷ್ಟು ಸಂದರ್ಶನಗಳಲ್ಲಿ ಕಿಚ್ಚ ಸುದೀಪ್ ನೀಡುವ ಟಾಂಗ್‌ಗಳಿಗೆ ಪ್ರಶ್ನೆ ಹಾಕಿದವರೇ ಸೈಲೆಂಟ್ ಆದ ಸಾಕಷ್ಟು ಉದಾಹರಣೆಗಳಿವೆ. ಇದೇ ರೀತಿ ಇತ್ತೀಚೆಗಷ್ಟೆ ನಡೆದ ಪಿವಿಆರ್ ಡೈರೆಕ್ಟರ್ಸ್ ಕಟ್ ಚಿತ್ರಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲೂ ಸಹ ಕಿಚ್ಚ ಸುದೀಪ್ ಟಾಂಗ್ ನೀಡಿದ್ದು ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಹೌದು, ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿರುವ ರೆಕ್ಸ್ ಮಾಲ್‌ನ ಪಿವಿಆರ್ ಚಿತ್ರಮಂದಿರಲ್ಲಿ ಪಿವಿಆರ್ ತನ್ನ ಮೊದಲ ಡೈರೆಕ್ಟರ್ಸ್ ಕಟ್ ಎಂಬ ಆಡಿಯನ್ನು ತಯಾರಿಸಿದೆ. ಈ ಆಡಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ಚಂದನವನದ ನಟ ಕಿಚ್ಚ ಸುದೀಪ್ ಅವರನ್ನು ಮುಖ್ಯ ಅತಿಥಿಯನ್ನಾಗಿಯೂ ಪಿವಿಆರ್ ಆಹ್ವಾನಿಸಿತ್ತು. ಈ ಸಂದರ್ಭದಲ್ಲಿ ಮಾಧ್ಯಮದವರೊಟ್ಟಿಗೆ ಮಾತನಾಡಿದ ಕಿಚ್ಚ ಸುದೀಪ್ ವರದಿಗಾರನೋರ್ವ ಕೇಳಿದ ಪ್ರಶ್ನೆಗೆ ಗರಂ ಆಗಿದ್ದಾರೆ.

    ಪಿವಿಆರ್‌ನಲ್ಲಿ ಕನ್ನಡ ನಟರ ಫೋಟೊ ಇಲ್ಲ ಎಂದಿದ್ದಕ್ಕೆ ಸುದೀಪ್ ಗರಂ

    ಪಿವಿಆರ್‌ನಲ್ಲಿ ಕನ್ನಡ ನಟರ ಫೋಟೊ ಇಲ್ಲ ಎಂದಿದ್ದಕ್ಕೆ ಸುದೀಪ್ ಗರಂ

    ಸುದೀಪ್ ಉದ್ಘಾಟಿಸಲು ಆಗಮಿಸಿದ್ದ ರೆಕ್ಸ್ ಮಾಲ್‌ನ ಪಿವಿಆರ್‌ನಲ್ಲಿ ಕನ್ನಡ ನಟರ ಭಾವಚಿತ್ರಗಳು ಇಲ್ಲದೇ ಇದ್ದದ್ದು ಕೆಲವರ ಅಸಮಾಧಾನಕ್ಕೂ ಕಾರಣವಾಗಿತ್ತು. ಹೀಗಾಗಿ ಕಿಚ್ಚ ಸುದೀಪ್‌ಗೂ ಇದೇ ವಿಷಯವಾಗಿ ಪ್ರಶ್ನೆ ಎದುರಾಯಿತು. ಈ ಪ್ರಶ್ನೆಗೆ ಕಿಚ್ಚ ಸುದೀಪ್ ಗರಂ ಆದರು. ಬೆಂಗಳೂರಿನಲ್ಲಿ ಡೈರೆಕ್ಟರ್ ಕಟ್ ಪಿವಿಆರ್ ಉದ್ಘಾಟನೆಯಾಗುತ್ತಿದೆ ಎನ್ನುವ ವಿಷಯಕ್ಕೆ ಖುಷಿಪಡಿ, ಅದನ್ನು ಬಿಟ್ಟು ಚಿಕ್ಕ ಪುಟ್ಟ ತಪ್ಪುಗಳನ್ನು ಹುಡುಕಬೇಡಿ, ಈಗ ತಾನೇ ಟೇಪ್ ಕಟ್ಟಿಂಗ್ ಆಗಿದೆ, ಆಗಲೇ ಇಂತಹ ತಪ್ಪುಗಳನ್ನು ಹುಡುಕಿ ಪ್ರಶ್ನಿಸುವುದು ಸರಿಯಲ್ಲ ಸಮಾಧಾನದಿಂದ ಕಾಯಿರಿ ಎಂದು ಕಿಚ್ಚ ಸುದೀಪ್ ಹೇಳಿದರು.

    ವ್ಯಕ್ತಿಯ ಮುಖ ನೋಡಿ ಮಾತನಾಡಿ

    ವ್ಯಕ್ತಿಯ ಮುಖ ನೋಡಿ ಮಾತನಾಡಿ

    ಇನ್ನು ಈ ವಿಷಯವಾಗಿ ಕಿಚ್ಚ ಸುದೀಪ್ ನೀಡಿದ ಉದಾಹರಣೆಯ ವಿಡಿಯೊವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಓರ್ವ ವ್ಯಕ್ತಿ ಜೊತೆ ಮಾತನಾಡುವಾಗ ಆತನ ಮುಖ ನೋಡುತ್ತಾ ಮಾತನಾಡಿ, ಇಲ್ವಾ ಪಾದ ನೋಡ್ತಾ ಮಾತನಾಡಿ, ಅದನ್ನು ಬಿಟ್ಟು ಆತ ಶರ್ಟ್ ಬಟನ್ ಹಾಕಿಲ್ಲ, ಪ್ಯಾಂಟ್ ಜಿಪ್ ಹಾಕಿಲ್ಲ ಎಂಬ ಸಣ್ಣ ತಪ್ಪುಗಳನ್ನು ಹುಡುಕಿ ಮಾತನಾಡಬೇಡಿ, ಇನ್ನೂ ಫಿನಿಷಿಂಗ್ ಅಗದ ಕಟ್ಟಡದ ಬಗ್ಗೆ ಈಗಲೇ ಕೊಂಕು ನುಡಿಯುವುದು ತಪ್ಪು ಎಂದು ಕಿಚ್ಚ ಸುದೀಪ್ ಹೇಳಿದರು.

    ಪಿವಿಆರ್ ಡೈರೆಕ್ಟರ್ಸ್ ಕಟ್‌ನ ವಿಶೇಷತೆ ಏನು?

    ಪಿವಿಆರ್ ಡೈರೆಕ್ಟರ್ಸ್ ಕಟ್‌ನ ವಿಶೇಷತೆ ಏನು?

    ಪಿವಿಆರ್ ಸಿನಿಮಾಸ್ ಎಂದರೆ ಐಷಾರಾಮಿ, ಸುಸಜ್ಜಿತ ಚಿತ್ರಮಂದಿರ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಇನ್ನು ಇದೇ ಪಿವಿಆರ್ ಸಾಮಾನ್ಯ ಕ್ಲಾಸ್‌ಗಳಿಗಿಂತ ಇನ್ನೂ ಭಿನ್ನ ವಿಭಿನ್ನ ಆಡಿಟೋರಿಯಂಗಳನ್ನು ನಿರ್ಮಿಸಿ ಜನರನ್ನು ಆಕರ್ಷಿಸುತ್ತಿದೆ. ಐಮ್ಯಾಕ್ಸ್ ರೀತಿಯ ದುಬಾರಿ ಹಾಗೂ ನೆಕ್ಸ್ಟ್ ಲೆವೆಲ್ ಸಿನಿಮಾ ಎಕ್ಸ್‌ಪೀರಿಯನ್ಸ್ ಅನ್ನು ಸಿನಿ ರಸಿಕರಿಗೆ ನೀಡಿರುವ ಪಿವಿಆರ್ ಈಗ ಡೈರೆಕ್ಟರ್ಸ್ ಕಟ್ ಮೂಲಕ ಮತ್ತೊಂದು ಹಂತದ ಸಿನಿಮಾ ಎಕ್ಸ್‌ಪೀರಿಯನ್ಸ್ ಅನ್ನು ಚಿತ್ರ ರಸಿಕರಿಗೆ ನೀಡಲು ಮುಂದಾಗಿದೆ. ರಿಯಲ್ ತ್ರಿಡಿ, 4ಕೆ ಪ್ರೊಜೆಕ್ಷನ್ ಜತೆಗೆ ರೇಜರ್ ಶಾರ್ಪ್ ಪಿಕ್ಚರ್ ಕ್ವಾಲಿಟಿ ಮತ್ತು 7.1 ಡಾಲ್ಬಿ ಸರೌಂಡ್ ಸಿಸ್ಟಮ್ ಈ ಆಡಿಟೊರಿಯಂಗಳಲ್ಲಿ ಇರಲಿದೆ.

    English summary
    Kichcha Sudeepa angry at Bengaluru's PVR director's cut launch. Read on
    Saturday, December 3, 2022, 12:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X