»   » ದೀಪಾವಳಿಗೆ ಸಖತ್ ಸದ್ದು ಮಾಡಲಿದೆ ಕಿಲ್ಲಿಂಗ್ ವೀರಪ್ಪನ್!

ದೀಪಾವಳಿಗೆ ಸಖತ್ ಸದ್ದು ಮಾಡಲಿದೆ ಕಿಲ್ಲಿಂಗ್ ವೀರಪ್ಪನ್!

Posted By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಚಿತ್ರ ಕಿಲ್ಲಿಂಗ್ ವೀರಪ್ಪನ್ ಅಕ್ಟೋಬರ್ನಲ್ಲಿ ತೆರೆ ಕಾಣುತ್ತೆ ಅನ್ನೋ ಸುದ್ದಿ ಬಂದಿತ್ತು. ಶಿವಣ್ಣನ ಅಭಿಮಾನಿಗಳಿಗೆ ವಜ್ರಕಾಯ ನಂತ್ರ ಮತ್ತೊಂದು ಭರ್ಜರಿ ಚಿತ್ರ ಇಷ್ಟು ಬೇಗ ತೆರೆಗೆ ಬರುತ್ತಾ ಅಂತ ಫುಲ್ ಖುಷಿಯೂ ಆಗಿತ್ತು.

ಈ ನಡುವೆ ಮಗಳ ಮದುವೆಯಲ್ಲಿ ಹ್ಯಾಟ್ರಿಕ್ ಹೀರೋ ಬ್ಯುಸಿಯಾದ್ರು. ಅದಾದ ನಂತ್ರ ಇತ್ತೀಚೆಗೆ ಲಘು ಹೃದಯಾಘಾತ ಆಗಿ ಆಸ್ಪತ್ರೆಗೆ ಸೇರಿ ಹುಷಾರಾಗಿ ಬಂದು ಅಭಿಮಾನಿಗಳಲ್ಲಿ ಉಂಟಾಗಿದ್ದ ಆತಂಕವನ್ನ ದೂರ ಮಾಡಿದ್ರು.['ಕಿಲ್ಲಿಂಗ್ ವೀರಪ್ಪನ್', ಸೆಕೆಂಡ್ ಟ್ರೈಲರ್ ನ 10 ಕುತೂಹಲಕಾರಿ ಅಂಶಗಳು]

Killing Veerappan grand release on Deepavali

ಇತ್ತೀಚೆಗೆ ಅನಾರೋಗ್ಯದಿಂದ ಆತಂಕಗೊಂಡಿದ್ದ ಅಭಿಮಾನಿಗಳಿಗೆ ಈಗ ಶಿವಣ್ಣ ಕ್ಯಾಂಪಿನಿಂದ ಒಂದು ಸಿಹಿ ಸುದ್ದಿ ಬಂದಿದೆ. ಅದು ಸೌತ್ ಇಂಡಿಯನ್ ಸೆನ್ಸೇಷನಲ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಕಿಲ್ಲಿಂಗ್ ವೀರಪ್ಪನ್ ಬಿಡುಗಡೆಯ ದಿನಾಂಕ.

ನವೆಂಬರ್ 12ಕ್ಕೆ ದೀಪಾವಳಿಯ ದಿನ ರಾಮ್ ಗೋಪಾಲ್ ವರ್ಮಾ -ಶಿವಣ್ಣ ಕಾಂಬಿನೇಷನ್ನ ಮೊದಲ ಚಿತ್ರ ತೆರೆಗೆ ಲಗ್ಗೆ ಇಡಲಿದೆ. ತೆಲುಗಿನಲ್ಲೂ ತಯಾರಾಗ್ತಿರೋ ಚಿತ್ರ ತೆಲುಗು ವರ್ಷನ್ನಲ್ಲಿ ಯಾವಾಗ ತೆರೆ ಕಾಣುತ್ತೆ ಅನ್ನೋ ಮಾಹಿತಿ ಸದ್ಯಕ್ಕೆ ಹೊರಬಂದಿಲ್ಲ.[ಶಿವಣ್ಣ 'ಕಿಲ್ಲಿಂಗ್ ವೀರಪ್ಪನ್', ಚಿತ್ರದಿಂದ ಒಂದು ಗುಡ್ ನ್ಯೂಸ್!]

Killing Veerappan grand release on Deepavali

ಆದರೆ, ಚಿತ್ರ ಬಿಡುಗಡೆಯ ಮೊದಲೇ ಟ್ರೇಲರ್ ಗಳು ಭಾರೀ ನಿರೀಕ್ಷೆ ಹುಟ್ಟಿಸಿವೆ. ಪೊಲೀಸ್ ಅಧಿಕಾರಿಯಾಗಿ ಶಿವರಾಜ್ ಕುಮಾರ್ ಅವರ ಖಡಕ್ ಡೈಲಾಗುಗಳು, ವೀರಪ್ಪನ್ ಪಾತ್ರ ಪೋಷಿಸುತ್ತಿರುವ ಸಂದೀಪ್ ಭಾರದ್ವಾಜ್ ಅವರು ಅಟ್ಟಹಾಸ ವೀಕ್ಷಕರ ಎದೆಬಡಿತವನ್ನು ಹೆಚ್ಚಿಸಿವೆ. ಚಿತ್ರ ಬಿಡುಗಡೆಯ ದಿನವೂ ದೂರವೇನಿಲ್ಲ. ಸೋ, ದೀಪಾವಳಿಗೆ ಕಿಲ್ಲಿಂಗ್ ವೀರಪ್ಪನ್ ಶಕತ್ ಸದ್ದು ಮಾಡುವುದು ಗ್ಯಾರಂಟಿ.

English summary
Kannada movie Killing Veerappan, directed by Ram Gopal Varma, will be released on Deepavali (Diwali), November 12 all over Karnataka, India. Shiva Rajkumar will be playing police officer who shot Veerappan. Sandeep Bharadwaj will be seen as forest brigand Veerappan. ದೀಪಾವಳಿಗೆ ಸಖತ್ ಸದ್ದು ಮಾಡಲಿದೆ ಕಿಲ್ಲಿಂಗ್ ವೀರಪ್ಪನ್!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada