For Quick Alerts
  ALLOW NOTIFICATIONS  
  For Daily Alerts

  ದಿನಗಳು 63.. ಸ್ಟಾರ್ಗಳು 6, ಯಾರದ್ದು ಕಾರುಬಾರು?

  By ಜೀವನರಸಿಕ
  |

  ವರ್ಷಾಂತ್ಯದಲ್ಲಿ ಸಿನಿಮಾಗಳ ರಿಲೀಸ್ ಭರಾಟೆ ಹೆಚ್ಚಾಗೋದು ಸರ್ವೇ ಸಾಮಾನ್ಯ. ಅದ್ರಲ್ಲೂ ಈ ವರ್ಷವಂತೂ ಅದರ ಭರಾಟೆ ಇನ್ನೂ ಜೋರಾಗೇ ಇದೆ. ಸ್ಟಾರ್ಗಳು ಸೂಪರ್ಸ್ಟಾರ್ಗಳ ಸಿನಿಮಾಗಳು ಈ ವರ್ಷದ ಅಂತ್ಯದ ವೇಳೆಗೆ ಒಂದರ ಹಿಂದೊಂದರಂತೆ ತೆರೆಗೆ ಅಪ್ಪಳಿಸಲಿವೆ.

  ವರ್ಷಾಂತ್ಯದಲ್ಲಿ ಸಬ್ಸಿಡಿ ಪಡೆಯೋ ಲೆಕ್ಕಾಚಾರಕ್ಕೆ ಥಿಯೇಟರ್ಗೆ ಬರೋ ಸಣ್ಣಪುಟ್ಟ ಸಿನಿಮಾಗಳ ಹಿಂಡೇ ಇದ್ರೂ ಈ ಭಾರಿಯ ಸರತಿಯಲ್ಲಿ ಸ್ಟಾರ್ ಸಿನಿಮಾದ ಪಟಾಕಿಯೂ ದೀಪಾವಳಿಯಿಂದ ಜೋರಾಗಿಯೇ ಕೇಳಿಬರಲಿದೆ.[ದರ್ಶನ್ ಕೈಗೆ ಪೆಟ್ಟು; 'ಜಗ್ಗು ದಾದಾ' ಶೂಟಿಂಗ್ ಮುಂದಕ್ಕೆ.!]

  ದೀಪಾವಳಿ ಕ್ರಿಸ್ಮಸ್ ರಜೆಗೆ ಕುಟುಂಬ ಸಮೇತ ಥಿಯೇಟರ್ಗೆ ಹೋಗೋಕೆ ನೀವು ರೆಡಿಯಾಗಬಹುದು. ನಿಮ್ಮ ಕಣ್ಮನ ತಣಿಸೋ ನಿರೀಕ್ಷೆ ಮೂಡಿಸಿರೋ ಹತ್ತಾರು ಸಿನಿಮಾಗಳು ಈಯರ್ ಎಂಡ್ನಲ್ಲಿ ನಿಮ್ಮನ್ನ ಥಿಯೇಟರ್ಗೆ ಸೆಳೆಯೋದಂತೂ ಪಕ್ಕಾ.

  ಯಾವ್ಯಾವ ಸ್ಟಾರ್ ಸಿನಿಮಾಗಳು ತೆರೆಗೆ ಬರೋದು ಪಕ್ಕಾ? ಶಿವಣ್ಣ ಅಭಿಮಾನಿಗಳಿಗಂತೂ ಡಬ್ಬಲ್ ಧಮಾಕ. ಸೋ ಈ ಈಯರ್ ಎಂಡ್ ಸಿನಿಮಾಗಳು ದೀಪಾವಳಿಯ ಸದ್ದಿನೊಂದಿಗೆ ಶುರುವಾಗ್ತಿದ್ದು, ಯಾವ್ಯಾವ ಸಿನಿಮಾ ಬರ್ತಿವೆ ಅನ್ನೋ ಕಂಪ್ಲೀಟ್ ಡೀಟೈಲ್ಸ್ಗಾಗಿ ಸ್ಲೈಡ್ ನೋಡ್ತಾ ಹೋಗಿ...[ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಟಾಲಿವುಡ್ ಗೆ ಜಂಪ್ ಆಗ್ತಾರ?]

  ಶಿವರಾಜ್ ಬ್ಲಾಕ್ ಬಸ್ಟರ್ ಕಿಲ್ಲಿಂಗ್ ವೀರಪ್ಪನ್

  ಶಿವರಾಜ್ ಬ್ಲಾಕ್ ಬಸ್ಟರ್ ಕಿಲ್ಲಿಂಗ್ ವೀರಪ್ಪನ್

  ಹ್ಯಾಟ್ರಿಕ್ ಹೀರೋ ಶಿವಣ್ಣನ ಬಹುನಿರೀಕ್ಷಿತ, ರಾಮ್ ಗೋಪಾಲ್ ವರ್ಮ ನಿರ್ದೇಶನದ ಕಿಲ್ಲಿಂಗ್ ವೀರಪ್ಪನ್ ಪಟಾಕಿ ಸದ್ದಿನೊಂದಿಗೆ ತೆರೆಗೆ ಬರೋಕೆ ರೆಡಿ. ಜನವರಿ 12ಕ್ಕೆ ಕಿಲ್ಲಿಂಗ್ ವೀರಪ್ಪನ್ ಥ್ರಿಲ್ಲರ್ ನಿಮ್ಮನ್ನ ಥ್ರಿಲ್ಲಾಗಿಸಲಿದೆಯಂತೆ.

  ಶಿವಣ್ಣನ ಮತ್ತೊಂದು ಸಿನೆಮಾ ಶಿವಲಿಂಗ

  ಶಿವಣ್ಣನ ಮತ್ತೊಂದು ಸಿನೆಮಾ ಶಿವಲಿಂಗ

  ನವೆಂಬರ್ನಲ್ಲಿ ಕಿಲ್ಲಿಂಗ್ ವೀರಪ್ಪನ್ ಥ್ರಿಲ್ಲಿಂಗ್ ಆಗಿದ್ರೆ, ಶಿವಣ್ಣ-ಪಿ ವಾಸು ಕಾಂಬಿನೇಷನ್ನ ಧಮಾಕೇದಾರ್ ಚಿತ್ರ ಶಿವಲಿಂಗ ಡಿಸೆಂಬರ್ನಲ್ಲಿ ರಾಜ್ಯಾದ್ಯಂತ ತೆರೆಗಪ್ಪಳಿಸಲಿದೆ ಅನ್ನೋದು ನಿರ್ಮಾಪಕರ ಮೂಲಗಳ ಮಾಹಿತಿ.

  ರಾಕಿಂಗ್ ಸ್ಟಾರ್‌ನ ಮಾಸ್ಟರ್ ಪೀಸ್

  ರಾಕಿಂಗ್ ಸ್ಟಾರ್‌ನ ಮಾಸ್ಟರ್ ಪೀಸ್

  ಈ ವರ್ಷದ ಮತ್ತೊಂದು ಬಹುನಿರೀಕ್ಷಿತ ಚಿತ್ರ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮಾಸ್ಟರ್ ಪೀಸ್. ಮಾಸ್ಟರ್ಪೀಸ್ನ ಮಸ್ತ್ ಮಜಾ ಕಥೆಗಾಗಿ, ಯಶ್ರ ಮತ್ತೊಂದು ಬಿಗ್ ಹಿಟ್ಗಾಗಿ ಅಭಿಮಾನಿಗಳು ಕಾತರದಿಂದ ಕಾದಿದ್ದು, ಸದ್ಯ ಚಿತ್ರದ ಹಾಡುಗಳ ಚಿತ್ರೀಕರಣ ನಡೀತಾ ಇದೆ. ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರದ ಹಾಗೇ ಇದೂ ಕ್ರಿಸ್ಮಸ್ ಗಿಫ್ಟ್ ಅನ್ನೋ ಲೆಕ್ಕಾಚಾರ ಸಿನಿಪಂಡಿತರದ್ದು.

  ವಿರಾಟ್ ಯಾವಾಗ ಎದ್ದು ಬರುತ್ತೋ

  ವಿರಾಟ್ ಯಾವಾಗ ಎದ್ದು ಬರುತ್ತೋ

  ಸದ್ಯಕ್ಕೆ ಸೈಲೆಂಟಾಗಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಲ್ಲಿರೋ ವಿರಾಟ್ ಯಾವಾಗ ಎದ್ದು ಬರುತ್ತೋ ಗೊತ್ತಿಲ್ಲ. ಗಜ ಬಂದ್ರೆ ಗೊತ್ತಲ್ಲ. ಸುಂಟ್ರಗಾಳಿ ಬಂದಾಗ ಅಲ್ಮೋಸ್ಟ್ ಎಲ್ಲರೂ ಸೈಡಿಗೆ ನಿಲ್ಲಲೇಬೇಕು. ಆದ್ರೆ ನಿರ್ದೇಶಕ ಹೆಚ್ ವಾಸು ಸಿನಿಮಾದ ಬಗ್ಗೆ ತುಟಿ ಪಿಟಕ್ ಅಂದಿಲ್ಲ.

  ದನಕಾಯೋನು ಬಂದೇಬರ್ತವ್ನಂತೆ

  ದನಕಾಯೋನು ಬಂದೇಬರ್ತವ್ನಂತೆ

  ಭಟ್ಟರು ದುನಿಯಾ ವಿಜಯ್ ಕಾಂಬಿನೇಷನ್ನ ಮೊದಲ ಚಿತ್ರ ದನಕಾಯೋನು ಟೀಸರ್ ಸಖತ್ ಕಿಕ್ ಕೊಟ್ಟಿದೆ. ಚಿತ್ರವನ್ನ ಶತಾಯಗತಾಯ ಈ ವರ್ಷಾನೇ ತೆರೆಗೆ ತರ್ಬೇಕು ಅನ್ನೋ ಪ್ರಯತ್ನದಲ್ಲಿ ಯೋಗರಾಜ ಭಟ್ಟರು ಕೊನೆಯ ಹಂತದ ಚಿತ್ರೀಕರಣದಲ್ಲಿದ್ದಾರೆ. ದನಕಾಯೋನು ಮೂಲಕ ಈ ವರ್ಷವೇ ಭಟ್ರು ಮತ್ತು ವಿಜಯ್ ಅಭಿಮಾನಿಗಳಿಗೆ ಡಿಸೆಂಬರ್ ಧಮಾಕ ಸಿಕ್ಕಿದ್ರೆ ಸೂಪರ್ ಅಲ್ವಾ?

  ರಥಾವರ ಡಿಸೆಂಬರಲ್ಲಿ ಗ್ಯಾರಂಟಿ

  ರಥಾವರ ಡಿಸೆಂಬರಲ್ಲಿ ಗ್ಯಾರಂಟಿ

  ಇನ್ನು ಉಗ್ರಂ ಮುರಳಿಯ ರಥಾವರ ಬಂದ್ರೆ ಜನ್ರು ಒಂದು ಸಾರಿ ಥಿಯೇಟರ್ಗೆ ನುಗ್ಗೋದ್ರಲ್ಲಿ ಅನುಮಾನವಿಲ್ಲ. ರಥಾವರದ ರಂಗು ಈ ವರ್ಷದ ಡಿಸೆಂಬರ್ನಲ್ಲಿ ನಿಮ್ಮ ಮುಂದಿರೋದು ಗ್ಯಾರಂಟಿ ಅಂದಿದ್ದಾರೆ ಮುರಳಿ. ಆದ್ರೆ ದಿನಾಂಕ ನಿರ್ಧಾರ ಆಗಬೇಕಷ್ಟೇ.

  ಸಖತ್ ಕ್ರೇಜ್ ಹುಟ್ಟಿಸಿರುವ ರಿಕ್ಕಿ

  ಸಖತ್ ಕ್ರೇಜ್ ಹುಟ್ಟಿಸಿರುವ ರಿಕ್ಕಿ

  ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ರಿಕ್ಕಿ ಸಿನಿಮಾ ಟ್ರೈಲರ್ನಿಂದ ಕ್ರೇಜ್ ಹುಟ್ಟುಹಾಕಿದೆ. ಚಿತ್ರವನ್ನ ದೀಪಾವಳಿಯ ನಂತರದ ವಾರ ಅಥವಾ ನವೆಂಬರ್ ಕೊನೆಯಲ್ಲಿ ರಿಲೀಸ್ ಮಾಡಲಿದೆ ಚಿತ್ರತಂಡ. ರಕ್ಷಿತ್‌ಗೆ ಜೋಡಿಯಾಗಿ ಹರಿಪ್ರಿಯಾ ಇದ್ದಾರೆ. ಚಿತ್ರಪ್ರಿಯರಿಗೆ ಇನ್ನೇನು ಬೇಕು?

  ಗಣೇಶ್‌ಗೆ ವಿಭಿನ್ನ ಇಮೇಜ್ ನೀಡಲಿದೆ ಸ್ಟೈಲ್ಕಿಂಗ್

  ಗಣೇಶ್‌ಗೆ ವಿಭಿನ್ನ ಇಮೇಜ್ ನೀಡಲಿದೆ ಸ್ಟೈಲ್ಕಿಂಗ್

  ಗೋಲ್ಡನ್ ಸ್ಟಾರ್ ಗಣೇಶ್ ಸಿನಿಜೀವನಕ್ಕೆ ವಿಭಿನ್ನ ಈಮೇಜ್ ನೀಡಲಿರೋ ಚಿತ್ರ ಈ ಸ್ಟೈಲ್ಕಿಂಗ್ ಈ ಹಿಂದೆ 420, ರೋಮಿಯೋ ಚಿತ್ರ ಮಾಡಿದ್ದ ಪಿಸಿ ಶೇಖರ್ ಗಣೇಶ್ರನ್ನ ನೀವು ಈ ಹಿಂದೆ ನೋಡದ ರೀತಿಯಲ್ಲಿ ಪ್ರೆಸೆಂಟ್ ಮಾಡ್ತಿದ್ದು, ಚಿತ್ರ ನವೆಂಬರ್ ಕೊನೆಯ ವೇಳೆಗೆ ತೆರೆಗಪ್ಪಳಿಸೋ ನಿರೀಕ್ಷೆಯಿದೆ.

  English summary
  Many Kannada movies are slated for release towards the year end, starting from Deepavali. Killing Veerappan, Master Piece, Shiva Linga, Viraat, Ricky, Danakayonu, Rathavara, Style King are few of the movies with star cast. It will be full entertainment for the movie lovers.
  Friday, October 30, 2015, 16:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X