»   » ನವೆಂಬರ್ 6ರಂದು ತೆರೆಗೆ ಅಪ್ಪಳಿಸಲಿದೆ 'ಕಿಲ್ಲಿಂಗ್ ವೀರಪ್ಪನ್'

ನವೆಂಬರ್ 6ರಂದು ತೆರೆಗೆ ಅಪ್ಪಳಿಸಲಿದೆ 'ಕಿಲ್ಲಿಂಗ್ ವೀರಪ್ಪನ್'

Posted By:
Subscribe to Filmibeat Kannada

ಈ ವರ್ಷದ ದ್ವಿತೀಯಾರ್ಧ ಕನ್ನಡ ಚಿತ್ರರಂಗದ ಪಾಲಿಗೆ ಶುಭದಾಯಕವಾಗಿದೆ. ಉಪ್ಪಿ2, ಕೆಂಡಸಂಪಿಗೆ, ಗೀತಾ ಬ್ಯಾಂಗಲ್ ಸ್ಟೋರ್ಸ್, ಆರೆಕ್ಸ್ ಸೂರಿ, ರಂಗಿತರಂಗ, ಮಳೆ ಮುಂತಾದ ಚಿತ್ರಗಳು ಸಾಕಷ್ಟು ಗಮನ ಸೆಳೆದಿವೆ. ಇದೇ ಹರಿವಿನಲ್ಲೇ ರಜತ ಪರದೆಯ ಮೇಲೆ ಸದ್ಯದಲ್ಲೇ ರಾರಾಜಿಸಲಿದೆ 'ಕಿಲ್ಲಿಂಗ್ ವೀರಪ್ಪನ್'!

ನವೆಂಬರ್ 6ರ ಶುಭ ಶುಕ್ರವಾರದಂದು, ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ 'ಕಿಲ್ಲಿಂಗ್ ವೀರಪ್ಪನ್' ತೆರೆಗೆ ಅಪ್ಪಳಿಸಲಿದೆ. ಬಾಲಿವುಡ್ನ ಸೆನ್ಶೇಷನಲ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮೊಟ್ಟಮೊದಲ ಬಾರಿಗೆ ನಟಿಸುತ್ತಿರುವುದು ವಿಶೇಷ.

2000ರ ಭೀಮನ ಅಮವಾಸ್ಯೆಯಂದು ವರನಟ ಡಾ. ರಾಜ್ ಕುಮಾರ್ ಅವರನ್ನು ಅಪಹರಿಸಿ 108 ದಿನಗಳ ಕಾಲ ತನ್ನ ವಶದಲ್ಲಿಟ್ಟುಕೊಂಡಿದ್ದ ಕಾಡುಗಳ್ಳ ವೀರಪ್ಪನ್ ಕುರಿತಂತೆ ಅನೇಕ ಸಿನೆಮಾಗಳು ಕನ್ನಡದಲ್ಲಿ ಬಂದಿವೆ. ದೇವರಾಜ್ ನಟನೆಯ 'ವೀರಪ್ಪನ್', ಎಎಂಆರ್ ರಮೇಶ್ ನಿರ್ದೇಶನದ 'ಅಟ್ಟಹಾಸ' ಚಿತ್ರಗಳು ವೀರಪ್ಪನ್‌ನ ಆಟಾಟೋಪಗಳನ್ನು ತೆರೆಯ ಮೇಲೆ ಈಗಾಗಲೆ ತೆರೆದಿಟ್ಟಿವೆ. [ಅಟ್ಟಹಾಸ ಚಿತ್ರವಿಮರ್ಶೆ]

Killing Veerappan to hit screens on 6th November

ಮಾತು-ಕೃತಿಗಳಲ್ಲೇ ಸಾಕಷ್ಟು ವಿವಾದ ಸೃಷ್ಟಿಸಿರುವ ರಾಮ್ ಗೋಪಾಲ್ ವರ್ಮಾ ಅವರ ನಿರ್ದೇಶನದ 'ಕಿಲ್ಲಿಂಗ್ ವೀರಪ್ಪನ್' ಏನು ಮೋಡಿ ಮಾಡಲಿದೆ ಎಂದು ಶಿವರಾಜ್ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಶಿವರಾಜ್ ಈ ಚಿತ್ರದಲ್ಲಿ 'ಆಪರೇಷನ್ ಕಕೂನ್'ನ ಮಾಸ್ಟರ್‌ಮೈಂಡ್ ಸೆಂತಾಮರೈ ಕಣ್ಣನ್ ಪಾತ್ರದಲ್ಲಿ ರಾರಾಜಿಸಲಿದ್ದಾರೆ.

ವೀರಪ್ಪನ್ ಪಾತ್ರವನ್ನು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ತರಬೇತಿ ಪಡೆದಿರುವ ಸಂದೀಪ್ ಭಾರದ್ವಾಜ್ ವಹಿಸಿದ್ದಾರೆ. ಮುತ್ತುಲಕ್ಷ್ಮಿ ಪಾತ್ರವನ್ನು ಯಜ್ಞಾ ಶೆಟ್ಟಿ ಪೋಷಿಸಿದ್ದರೆ, 'ನಾನು, ಅವನಲ್ಲ ಅವಳು' ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿರುವ 'ಸಂಚಾರಿ' ವಿಜಯ್ ಪ್ರಮುಖ ಪಾತ್ರ ವಹಿಸಿದ್ದಾರೆ. ಗಡ್ಡ ವಿಜಿ, ಪಾರುಲ್ ಯಾದವ್ ಕೂಡ ತಾರಾಗಣದಲ್ಲಿದ್ದಾರೆ. [ರಾಮ್ ಗೋಪಾಲ್ ವರ್ಮಾ ಬಗ್ಗೆ ಎಂಥಾ ಕಾಮೆಂಟು!]

English summary
Sensational Bollywood director Ram Gopal Varma's latest bilingual movie Killing Veerappan will hit silver screens on Novermber 6th, 2015. Hattrick Hero Shiva Rajkumar is playing the role of Senthamarai Kannan, who masterminded Operation Cocoon. NSD actor Sandeep Bharadwaj will be seen as Veerappan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada