»   » ಐಐಎಫ್ ಎ ಉತ್ಸವ್: 'ಕಿರಿಕ್ ಪಾರ್ಟಿ' ತಂಡದ ಪ್ರಶಸ್ತಿಗಳ ಮೊತ್ತ 6

ಐಐಎಫ್ ಎ ಉತ್ಸವ್: 'ಕಿರಿಕ್ ಪಾರ್ಟಿ' ತಂಡದ ಪ್ರಶಸ್ತಿಗಳ ಮೊತ್ತ 6

Posted By:
Subscribe to Filmibeat Kannada

2016-2017 ನೇ ಸಾಲಿನ ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಆಕಾಡೆಮಿ(ಐಐಎಫ್ ಎ) ಉತ್ಸವ ಎರಡು ದಿನಗಳ ಕಾಲ ಹೈದರಾಬಾದ್ ನಲ್ಲಿ ಜರುಗಿತು. ಬುಧವಾರ ಮತ್ತು ಗುರುವಾರ(ಮಾರ್ಚ್ 29,30) ನಡೆದ ಐಐಎಫ್ ಎ ಉತ್ಸವದಲ್ಲಿ ದಕ್ಷಿಣ ಭಾರತದ ಖ್ಯಾತ ನಟ-ನಟಿಯರು ಪಾಲ್ಗೊಂಡಿದ್ದರು.

ಹೈದರಾಬಾದ್ ನಲ್ಲಿ ನಡೆದ ಫಾರ್ಚೂನ್ ಸನ್ ಫ್ಲವರ್ ಪ್ರಾಯೋಜಿತ ಐಐಎಫ್ ಎ ಉತ್ಸವದಲ್ಲಿ ದಕ್ಷಿಣ ಭಾರತದ ಪ್ರತಿ ಚಿತ್ರರಂಗದ ಹಲವು ಪ್ರತಿಭಾವಂತ ನಟ, ನಟಿಯರಿಗೆ ಮತ್ತು ಚಿತ್ರಗಳಿಗೆ ಪ್ರಶಸ್ತಿಯನ್ನು ನೀಡಿದ್ದು, ಕನ್ನಡ ಚಿತ್ರರಂಗದಿಂದ 'ಕಿರಿಕ್ ಪಾರ್ಟಿ' ಹಲವು ವಿಭಾಗಗಳಿಂದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

ಐಐಎಫ್ ಎ ಉತ್ಸವದಲ್ಲಿ ನಮ್ಮ ಸ್ಯಾಂಡಲ್ ವುಡ್ ಗೆ ಲಭಿಸಿದ ಪ್ರಶಸ್ತಿಗಳ ಲಿಸ್ಟ್ ಇಲ್ಲಿದೆ ನೋಡಿ..

'ಕಿರಿಕ್ ಪಾರ್ಟಿ' ತಂಡದ ಮೊತ್ತ 6

ಅಂದಹಾಗೆ ಈ ವರ್ಷ (2017) ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ 'ಕಿರಿಕ್ ಪಾರ್ಟಿ' ಐಐಎಫ್ ಎ ಉತ್ಸವದಲ್ಲಿ ಸ್ಯಾಂಡಲ್ ವುಡ್ ನಿಂದ ಹೆಚ್ಚು ಪ್ರಶಸ್ತಿಗಳನ್ನು ಸ್ವೀಕರಿಸಿದ ಸಿನಿಮಾ. ಹೌದು ಚಿತ್ರಕ್ಕೆ ಒಟ್ಟಾರೆ 6 ಪ್ರಶಸ್ತಿಗಳು ಲಭಿಸಿವೆ.

'ಕಿರಿಕ್ ಪಾರ್ಟಿ' ಚಿತ್ರಕ್ಕೆ ಲಭಿಸಿದ ಪ್ರಶಸ್ತಿಗಳು

ಕನ್ನಡ ಚಿತ್ರರಂಗದಿಂದ 'ಕಿರಿಕ್ ಪಾರ್ಟಿ' ಸಿನಿಮಾ ಅತ್ಯುತ್ತಮ ಸಿನಿಮಾ ಪ್ರಶಸ್ತಿಗೆ ಭಾಜನವಾಗಿದ್ದು, ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅಭಿನಯಕ್ಕೆ ಅತ್ಯುತ್ತಮ ನಟ ಪ್ರಶಸ್ತಿ, 'ಕಥೆಯೊಂದ ಹೇಳಿದೆ' ಹಾಡಿಗಾಗಿ ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ, ಅತ್ಯುತ್ತಮ ಕೋರಿಯೋಗ್ರಫಿ ಪ್ರಶಸ್ತಿ ಲಭಿಸಿದೆ. ವಿಜಯ್ ಪ್ರಕಾಶ್ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ, ಬಿ ಅಜನೀಶ್ ಲೋಕನಾಥ್ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಲಭಿಸಿದೆ.

ಅತ್ಯುತ್ತಮ ನಟಿ ಪಾರುಲ್ ಯಾದವ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕ ನಟನಾಗಿದ್ದ 'ಕಿಲ್ಲಿಂಗ್ ವೀರಪ್ಪನ್' ಚಿತ್ರ ರಾಮ್ ಗೋಪಾಲ್ ವರ್ಮ ನಿರ್ದೆಶನದಲ್ಲಿ ಮೂಡಿಬಂದಿತ್ತು. ಕಳೆದ ವರ್ಷ(2016) ಸೂಪರ್ ಹಿಟ್ ಆದ ಈ ಚಿತ್ರದಲ್ಲಿಯ ನಟಿ ಪಾರುಲ್ ಯಾದವ್ ಅಭಿನಯಕ್ಕಾಗಿ ಅವರಿಗೆ ಐಐಎಫ್ ಎ ಉತ್ಸವ್ ಅತ್ಯುತ್ತಮ ನಟಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರಕ್ಕೆ 3 ಪ್ರಶಸ್ತಿಗಳು

'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದಲ್ಲಿಯ ಅಭಿನಯಕ್ಕಾಗಿ ರಕ್ಷಿತ್ ಶೆಟ್ಟಿ ಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ವಸಿಷ್ಠ ಎನ್. ಸಿಂಹ ಅವರಿಗೆ ಅತ್ಯುತ್ತಮ ಖಳನಟ ಪ್ರಶಸ್ತಿ ಹಾಗೂ ಇಂಚರಾ ರಾವ್ ಅವರಿಗೆ ಅತ್ಯುತ್ತಮ ಗಾಯಕಿ ಪ್ರಶಸ್ತಿ ನೀಡಲಾಗಿದೆ.

'ಯೂ-ಟರ್ನ್' ಗೆ ಎರಡು ಪ್ರಶಸ್ತಿಗಳು

2016 ಏಪ್ರಿಲ್ 8 ರಂದು ತೆರೆಕಂಡ 'ಯೂ-ಟರ್ನ್' ಚಿತ್ರ ಕನ್ನಡದ ಅತ್ಯುತ್ತಮ ಪ್ರಯೋಗಾತ್ಮಕ ಸಿನಿಮಾ. ಈ ಸಿನಿಮಾ ನಿರ್ದೇಶಕ ಪವನ್ ಕುಮಾರ್ ಗೆ ಹಲವು ಪ್ರಶಸ್ತಿಗಳನ್ನು ತಂದುಕೊಟ್ಟಿದೆ. ಹೊಸ ಸೇರ್ಪಡೆಯಾಗಿ 'ಯೂ-ಟರ್ನ್' ಚಿತ್ರಕ್ಕೆ ಅತ್ಯುತ್ತಮ ನಿರ್ದೇಶಕನಾಗಿ ಮತ್ತು ಅತ್ಯುತ್ತಮ ಚಿತ್ರಕಥೆಗಾಗಿ ಪವನ್ ಕುಮಾರ್ ಗೆ ಐಐಎಫ್ ಎ ಉತ್ಸವ್ ದಿಂದ ಎರಡು ಪ್ರಶಸ್ತಿಗಳು ಲಭಿಸಿವೆ.

ಅತ್ಯುತ್ತಮ ಹಾಸ್ಯ ನಟ

ಸ್ಯಾಂಡಲ್ ವುಡ್ ನ ಪ್ರಸ್ತುತ ಬೇಡಿಕೆ ಹಾಸ್ಯ ನಟ ಚಿಕ್ಕಣ್ಣ ನಿಗೆ 'ಕೋಟಿಗೊಬ್ಬ-2' ಚಿತ್ರಕ್ಕಾಗಿ ಐಐಎಫ್ ಎ ಉತ್ಸವದ ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

English summary
Kirik Party swept most of the awards under nominations in the Kannada industry at IIFA Utsavam-2017. Here is the list of awards swept by sandalwood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada