For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ಹೊಸ 'ಭೀಷ್ಮ'ನಾಗಿ ಕಿಶೋರ್

  By Rajendra
  |

  ನಟ ಕಿಶೋರ್ ಅವರ ಮುಂದಿನ ಚಿತ್ರಕ್ಕೆ 'ಕರ್ಣ' ಎಂದು ಹೆಸರಿಡಲು ನಿರ್ಧರಿಸಲಾಗಿತ್ತು. ಆದರೆ ಈಗ ಅದು ಭೀಷ್ಮ ಎಂದಾಗಿದೆ. ಇದಕ್ಕೆ ಚಿತ್ರತಂಡ ಕೊಡುವ ಕಾರಣ 'ಕರ್ಣ' ಶೀರ್ಷಿಕೆ ಸಿಗಲಿಲ್ಲ ಎಂಬುದು. ಒಟ್ಟಾರೆಯಾಗಿ ಕರ್ಣನನ್ನು 'ಭೀಷ್ಮ' ಮಾಡಲಾಗಿದೆ.

  ಉಳಿದಂತೆ ಚಿತ್ರತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ. 'ತುಂಡೈಕ್ಳ ಸವಾಸ' ಚಿತ್ರದ ಬಳಿಕ ಕಿಶೋರ್ ಕನ್ನಡದಲ್ಲಿ ಅಭಿನಯಿಸುತ್ತಿರುವ ಚಿತ್ರವಿದು. ಪ್ರತಿಜ್ಞೆಗೆ ಹೆಸರಾದವನು, ಪಿತಾಮಹ ಎನ್ನಿಸಿಕೊಂಡವನು 'ಭೀಷ್ಮ'. ಆದರೆ ಈ ಭೀಷ್ಮ ಪೌರಣಿಕವೂ ಅಲ್ಲ ಐತಿಹಾಸಿಕವೂ ಅಲ್ಲವಂತೆ. ಆಧುನಿಕ 'ಭೀಷ್ಮ'ನಿವನು ಎನ್ನುತ್ತದೆ ಚಿತ್ರತಂಡ. [ಸ್ಯಾಂಡಲ್ ವುಡ್ ಕರ್ಣನಾಗಿ ಮಿಂಚಲಿರುವ ಕಿಶೋರ್]

  ಈ ಚಿತ್ರವನ್ನು ನಿರ್ಮಿಸುತ್ತಿರುವವರು ಜಿ ರಾಮಂದ್ರನ್. ಈಗಾಗಲೆ ಅವರು ಹೆಂಡ್ತೀರ ದರ್ಬಾರ್, ಸೂಪರ್ ಶಾಸ್ತ್ರಿ ಚಿತ್ರಗಳನ್ನು ತಮ್ಮ ಜಿಆರ್ ಗೋಲ್ಡ್ ಫಿಲಂಸ್ ಲಾಂಛನದಲ್ಲಿ ನಿರ್ಮಿಸಿದ್ದಾರೆ. ಈಗ 'ಭೀಷ್ಮ' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

  ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ರವಿರಾಜ್. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಸಹ ಅವರೇ ಹೆಣೆದಿದ್ದಾರೆ. ಚಿತ್ರದ ನಾಯಕಿ ಹಾರ್ದಿಕಾ ಶೆಟ್ಟಿ. ಚಿತ್ರದ ನಿರ್ಮಾಪಕ ರಾಮಚಂದ್ರನ್ ಅವರು ಗಮನಾರ್ಹ ಪಾತ್ರವೊಂದನ್ನು ಪೋಷಿಸುತ್ತಿದ್ದಾರೆ.

  ಛಾಯಾಗ್ರಹಣ ದಯಾಳ್ ಓಶೋ, ಕಲೆ ಕೃಷ್ಣಮಾಚಾರಿ, ಸಂಕಲನ ದೇವರಾಜ್, ಚಿತ್ರದ ಉಳಿದ ತಾರಾಗಣದಲ್ಲಿ ಶ್ರೀ ಚಂದ್ರು, ಶೋಭರಾಜ್, ಜಿ.ಆರ್ ಮುಂತಾದವರು ಇದ್ದಾರೆ. ಇನ್ನುಳಿದ ತಾರಾಗಣ ಹಾಗೂ ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದೆ. (ಏಜೆನ್ಸೀಸ್)

  English summary
  Kishore lead Kannada movie Karna renamed as Bhishma. Hardika Shetty is being paired opposite Kishore in this film. Producer G Ramachandran and directed by Raviraj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X