»   » ಸ್ಯಾಂಡಲ್ ವುಡ್ ನಲ್ಲಿ ಭರವಸೆಯ ಮಿಂಚು ಗುಡುಗು

ಸ್ಯಾಂಡಲ್ ವುಡ್ ನಲ್ಲಿ ಭರವಸೆಯ ಮಿಂಚು ಗುಡುಗು

Posted By:
Subscribe to Filmibeat Kannada

ಈ ವರ್ಷ ಸ್ಯಾಂಡಲ್ ವುಡ್ ಹೊಸಹೊಸ ಬೆಳವಣಿಗಳಿಗೆ, ದಾಖಲೆಗಳಿಗೆ ಕಾರಣವಾಗಿದೆ. 2015ನೇ ವರ್ಷ ಭರವಸೆಯ ಮಿಂಚು ಗುಡುಗಿನ ಮೂಲಕ ಭರ್ಜರಿ ಮಳೆ ಸುರಿಸಿದೆ. ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿಯ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಡಿಸೆಂಬರ್ ನಲ್ಲಿ ಬಿಡುಗಡೆಯಾದರೂ 2015ರಲ್ಲಿ ಭರ್ಜರಿ ಬೆಳೆ ತೆಗೆಯುವ ಮೂಲಕ ಎಲ್ಲರನ್ನೂ ಚಿತ್ತವನ್ನೂ ತನ್ನತ್ತ ಸೆಳೆಯಿತು.

ಸಂತೋಷ್ ಆನಂದರಾಮ್ ಅವರ ಚೊಚ್ಚಲ ನಿರ್ದೇಶನದ ಚಿತ್ರ ಸೆಂಚುರಿ ಬಾರಿಸಿದೆ. ಬಾಕ್ಸಾಫೀಸಲ್ಲಿ ಈಗಲೂ ಸದ್ದು ಮಾಡುತಿರುವ ಚಿತ್ರ. ಇದಾದ ಬಳಿಕ ಅಣ್ಣಾವ್ರ ಕುಟುಂಬದ ಕುಡಿ ವಿನಯ್ ರಾಜ್ ಕುಮಾರ್ ಅವರ 'ಸಿದ್ದಾರ್ಥ' ಬಿಡುಗಡೆಯಾಯಿತು. ಈ ಚಿತ್ರದ ಮೂಲಕ ವಿನಯ್ ಭರವಸೆಯ ನಾಯಕ ನಟನಾಗಿ ಹೊರಹೊಮ್ಮಿದ್ದಾರೆ.

ಅದಾದ ಬಳಿಕ ಬಂದ ಪುನೀತ್ ರಾಜ್ ಕುಮಾರ್ ಅವರ 'ಮೈತ್ರಿ' ಚಿತ್ರ ಎಲ್ಲರ ಊಹಾಪೋಹಗಳನ್ನು ತಲೆಕೆಳಗೆ ಮಾಡಿತು. ಚಿತ್ರ ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು. ಪುನೀತ್ ಅವರ ವೃತ್ತಿ ಬದುಕಿನಲ್ಲಿ ಹೊಸ ಮೈಲಿಗಲ್ಲನ್ನು ನೆಟ್ಟಿದ ಚಿತ್ರ. ಆ ಬಳಿಕ ಯುಗಾದಿಗೆ ಬೇವು ಬೆಲ್ಲದಂತೆ 'ರಾಟೆ' ಹಾಗೂ 'ಕೃಷ್ಣಲೀಲಾ' ಚಿತ್ರಗಳು ತೆರೆಕಂಡವು. ಎರಡು ಚಿತ್ರಗಳು ಉತ್ತಮ ಪ್ರಶಂಸೆ ಪಾತ್ರವಾದವು.

'ಕೃಷ್ಣಲೀಲಾ' ಚಿತ್ರದ ರೀಮೇಕ್ ರೈಟ್ಸ್ ಗೆ ಭರ್ಜರಿ ಬೇಡಿಕೆಯೂ ಬಂತು. ಅರ್ಧ ಶತಕ ಪೂರೈಸಿದ ಕೃಷ್ಣಲೀಲಾ ಚಿತ್ರ ಈಗಲೂ ಬಾಕ್ಸ್ ಆಫೀಸಲ್ಲಿ ಸೌಂಡ್ ಮಾಡುತ್ತಿದೆ. ಆಕ್ಷನ್, ರೊಮ್ಯಾನ್ಸ್ ಚಿತ್ರಗಳ ಬಗ್ಗೆ 'ವಾಸ್ತು ಪ್ರಕಾರ' ಚಿತ್ರದ ಮೂಲಕ ಭಿನ್ನ ತಿರುವು ಕೊಟ್ಟರು ಯೋಗರಾಜ್ ಭಟ್.

ಅದಾದ ಬಳಿಕ ಪುನೀತ್ ರಾಜ್ ಕುಮಾರ್ ಅವರ ಮತ್ತೊಂದು ಚಿತ್ರ 'ರಣವಿಕ್ರಮ' ಥಿಯೇಟರ್ ಗಳಿಗೆ ದಾಂಗುಡಿ ಇಡ್ತು. ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು ವಿದೇಶಕ್ಕೂ ಹಾರುತ್ತಿದೆ. ಅಲ್ಲೂ ಒಳ್ಳೆ ಬಿಜಿನೆಸ್ ಮಾಡುವ ಎಲ್ಲಾ ಸೂಚನೆಗಳನ್ನೂ ಕೊಟ್ಟಿದೆ. ಈ ವರ್ಷ ಸ್ಯಾಂಡಲ್ ವುಡ್ ನ ಗುಡುಗು ಮಿಂಚಿನ ಆರ್ಭಟ ನೋಡಿ ಸ್ಲೈಡ್ ನಲ್ಲಿ...

ಶತಕ ಪೂರೈಸಿದ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ

ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿಯ ಈ ಚಿತ್ರ ಶತಕ ಬಾರಿಸಿದ್ದಷ್ಟೇ ಅಲ್ಲದೆ, ಬಾಕ್ಸ್ ಆಫೀಸಲ್ಲಿ ಭರ್ಜರಿ ಸೌಂಡ್ ಮಾಡಿದ ಮಾಡುತ್ತಿರುವ ಚಿತ್ರ. ರಾಜ್ಯದಾದ್ಯಂತ ಚಿತ್ರಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಚಿತ್ರ ತೆಲುಗಿಗೂ ರೀಮೇಕ್ ಆಗಲಿದ್ದು ಸಾಯಿ ಧರ್ಮತೇಜ ನಾಯಕನಾಗುವ ಸಾಧ್ಯತೆಗಳಿವೆ.

ವಾಸ್ತು ಬದಲಾಯಿಸಿದ 'ವಾಸ್ತು ಪ್ರಕಾರ'

ಸ್ಯಾಂಡಲ್ ವುಡ್ ಚಿತ್ರರಂಗದ ಬಾಕ್ಸ್ ಆಫೀಸ್ ವಾಸ್ತು ಬದಲಾಯಿಸಿದ ಚಿತ್ರ ವಾಸ್ತು ಪ್ರಕಾರ. ಈ ಚಿತ್ರ ಏಪ್ರಿಲ್ 2ಕ್ಕೆ 25 ದಿನಗಳನ್ನು ಪೂರೈಸಿಕೊಂಡಿದೆ. ಜಗ್ಗೇಶ್, ರಕ್ಷಿತ್ ಶೆಟ್ಟಿ, ಐಶಾನಿ ಶೆಟ್ಟಿ, ಪರುಲ್ ಯಾದವ್ ಮುಖ್ಯಭೂಮಿಕೆಯಲ್ಲಿರುವ ಚಿತ್ರ. ಈ ಚಿತ್ರ ಮಿಶ್ರ ಪ್ರತಿಕ್ರಿಯೆಗೆ ಪಾತ್ರವಾಗಿದ್ದರೂ ವಾಣಿಜ್ಯ ಪರವಾಗಿ ಒಳ್ಳೆಯ ಫಸಲನ್ನೇ ತೆಗೆದಿದೆ.

ರಾಮ್ ಗೋಪಾಲ್ ವರ್ಮಾ ಅವರ ವೀರಪ್ಪನ್

ಈ ವರ್ಷ ಪ್ರಕಟವಾಗಿರುವ ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಕಿಲ್ಲಿಂಗ್ ವೀರಪ್ಪನ್' ಚಿತ್ರ ಹಲವಾರು ಕಾರಣಗಳಿಗೆ ಇಡೀ ದೇಶದ ಗಮನಸೆಳೆದಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ ಚಿತ್ರ ಇದಾಗಿದ್ದು ಶಿವಲಿಂಗ ಹಾಗೂ ಸಂತೆಯಲ್ಲಿ ನಿಂತ ಕಬೀರ ಚಿತ್ರಗಳ ಬಳಿಕ ಸೆಟ್ಟೇರಲಿದೆ.

ಕಸ್ತೂರಿ ನಿವಾಸದ 'ರಾಜಕುಮಾರ'

ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರದ ಯಶಸ್ಸಿನ ಬಳಿಕ ಸಂತೋಷ್ ಆನಂದರಾಮ್ ಕೈಗೆತ್ತಿಕೊಂಡಿರುವ ಚಿತ್ರ 'ರಾಜಕುಮಾರ'. ತನ್ನ ಟೈಟಲ್ ಮೂಲಕವೇ ಸ್ಯಾಂಡಲ್ ವುಡ್ ಗಮನಸೆಳೆದಿದೆ. ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು ಕಸ್ತೂರಿ ನಿವಾಸ ಗೆಟಪ್ ನಲ್ಲಿ ಪುನೀತ್ ಕಾಣಿಸಿಕೊಂಡು ಎಲ್ಲರ ಗಮನಸೆಳೆದಿದ್ದಾರೆ.

ಆಕ್ಷನ್ ಕಟ್ ಗೆ ಕೈಹಾಕಿರುವ ಗೀತಸಾಹಿತಿ ಕವಿರಾಜ್

ಗೀತಸಾಹಿತಿ ಕವಿರಾಜ್ ಅವರು ಇದೇ ಮೊದಲ ಬಾರಿಗೆ ರಿಯಲ್ ಸ್ಟೋರಿಯೊಂದನ್ನು ಕೈಗೆತ್ತಿಕೊಂಡಿದ್ದಾರೆ. ತಮ್ಮ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಮದುವೆಯ ಮಮತೆಯ ಕರೆಯೋಲೆ ಎಂದು ಹೆಸರಿಟ್ಟಿದ್ದು, ಸೃಜನ್ ಗೌಡ ಮತ್ತು ಅಮೂಲ್ಯಾ ಮುಖ್ಯ ಭೂಮಿಕೆಯಲ್ಲಿದಾರೆ.

ಮಾಣಿಕ್ಯ ಬಳಿಕ ಬರುತ್ತಿದ್ದಾನೆ 'ರನ್ನ'

ಮಾಣಿಕ್ಯ ಚಿತ್ರದ ಬಳಿಕ ಸುದೀಪ್ ಅವರ ಅಭಿಮಾನಿಗಳು ನಿರೀಕ್ಷಿಸುತ್ತಿರುವ ಚಿತ್ರ 'ರನ್ನ'. ಇದು ತೆಲುಗಿನ 'ಅತ್ತಾರಿಂಟಿಕಿ ದಾರೇದಿ' ಚಿತ್ರದ ರೀಮೇಕ್ ಆದರೂ ಸುದೀಪ್ ಚಿತ್ರಗಳಿಗಿರುವ ಮಾರುಕಟ್ಟೆ ಚಿತ್ರವನ್ನು ನಿರೀಕ್ಷಿಸುವಂತೆ ಮಾಡಿದೆ. ಇದೇ ಮೇ.7ರಂದು ಚಿತ್ರ ತೆರೆಗೆ ಬರುತ್ತಿದೆ.

ಭರ್ಜರಿಯಾಗಿ ತೆರೆಗೆ ಬರುತ್ತಿರುವ ಭರ್ಜರಿ

ಅದ್ದೂರಿ ಹಾಗೂ ಬಹದ್ದೂರ್ ಚಿತ್ರಗಳ ಬಳಿಕ ಧ್ರುವ ಸರ್ಜಾ ಅವರ ಮತ್ತೊಂದು ಚಿತ್ರ ಸೆಟ್ಟೇರಿದೆ. ರಚಿತಾ ರಾಮ್ ನಾಯಕಿಯಾಗಿರುವ ಈ ಚಿತ್ರಕ್ಕೆ ಭರ್ಜರಿ ಎಂದು ಹೆಸರಿಡಲಾಗಿದ್ದು, ಇನ್ನೊಂದು ಅದ್ದೂರಿ ಚಿತ್ರ ಎಂದೇ ಬಿಂಬಿತವಾಗಿದೆ.

ಡಿಕೆ ರವಿ ನಿಗೂಢ ಸಾವಿನ ಕಥೆಯೇ?

ದಕ್ಷ ಐಎಎಸ್ ಅಧಿಕಾರಿ ಎಂದೇ ಗುರುತಿಸಿಕೊಂಡಿದ್ದ ಡಿಕೆ ರವಿ ಅವರ ನಿಗೂಢ ಸಾವಿನ ಕಥೆಯನ್ನು ತೆರೆಗೆ ತರಲಾಗುತ್ತಿದೆಯೇ? ರಾಜ್, ಕಾರ್ತಿಕ್ ಮತ್ತು ಮೈತ್ರಿಯಾ ಗೌಡ ಮುಖ್ಯಭೂಮಿಕೆಯಲ್ಲಿರುವ ಚಿತ್ರ ಇದು.

ಜೋಗಿ ಪ್ರೇಮ್ ಅವರ ಆರ್ ದಿ ಕಿಂಗ್

ಸಿದ್ದಾರ್ಥ ಚಿತ್ರದ ಬಳಿಕ ವಿನಯ್ ರಾಜ್ ಅಭಿನಯಿಸುತ್ತಿರುವ ಮತ್ತೊಂದು ಚಿತ್ರ 'ಆರ್ ದಿ ಕಿಂಗ್'. ಈ ಚಿತ್ರಕ್ಕೆ ಜೋಗಿ ಪ್ರೇಮ್ ಆಕ್ಷನ್ ಕಟ್ ಹೇಳುತ್ತಿದ್ದು ಪ್ರೇಮ್ ಈ ಬಾರಿ ಏನು ಮಾಡುತ್ತಾರೋ ಎಂಬ ಕುತೂಹಲ ಇದೆ.

ಬುಲೆಟ್ ಪ್ರಕಾಶ್ ಈಗ ನಿರ್ಮಾಪಕ

ಕಾಮಿಡಿ ಪಾತ್ರಗಳ ಮೂಲಕ ಗಮನಸೆಳೆದ ನಟ ಬುಲೆಟ್ ಪ್ರಕಾಶ್. ಈಗವರು ನಿರ್ಮಾಪಕರಾಗಿ ಬದಲಾಗುತ್ತಿದ್ದಾರೆ. ಅದೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರಕ್ಕೆ ಎಂಬುದು ವಿಶೇಷ.

English summary
2015 has turned to be the fruitful year ever to Kannada film industry. A lot of things have taken place this year in Sandalwood. It all started from Yash-Radhika Pandit's Mr and Mrs Ramachari, which released in December 2014. Directed by debut director Santhosh Anandram, the film has successfully completed 100 days at theatres and is still continuing its business.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada