»   » 'ಮಿಲನ' ನಟಿ ಪಾರ್ವತಿಗೆ ಅವಹೇಳನಕಾರಿ ಸಂದೇಶ ಕಳಿಸಿದ್ದ ವ್ಯಕ್ತಿ ಬಂಧನ !

'ಮಿಲನ' ನಟಿ ಪಾರ್ವತಿಗೆ ಅವಹೇಳನಕಾರಿ ಸಂದೇಶ ಕಳಿಸಿದ್ದ ವ್ಯಕ್ತಿ ಬಂಧನ !

Posted By:
Subscribe to Filmibeat Kannada

ಸೌತ್ ಇಂಡಿಯಾದ ಜನಪ್ರಿಯ ನಟಿ ಪಾರ್ವತಿ ಬಗ್ಗೆ ನಿಂದನೆ ಮಾಡಿದ್ದ ಕಿಡಿಗೇಡಿಯ ಬಂಧನ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಪಾರ್ವತಿ ಬಗ್ಗೆ ಕೆಟ್ಟದಾಗಿ ಕಮೆಂಟ್ ಹಾಕಿದ್ದ ಓರ್ವ ವ್ಯಕ್ತಿಯನ್ನು ಕೊಚ್ಚಿ ಪೊಲೀಸರು ಬಂದಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಅನೇಕ ಬಾರಿ ನಟ ನಟಿಯರ ಮೇಲೆ ಕೆಲವರು ಅವಹೇಳನಕಾರಿ ಸಂದೇಶಗಳನ್ನು ಕಳುಹಿಸುತ್ತಾರೆ. ಇಂತಹ ಸಂದರ್ಭದಲ್ಲಿ ಅನೇಕರು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ನಟಿ ಪಾರ್ವತಿ ಈ ರೀತಿಯ ಘಟನೆಗಳು ಮುಂದೆ ಆಗದಿರುವ ರೀತಿ ಅವರು ಕಳುಹಿಸಿದ ಕಮೆಂಟ್ ಗಳ ಸ್ಕ್ರೀನ್ ಶಾಟ್ ಸಮೇತ ಪೊಲೀಸರಿಗೆ ದೂರು ಕೊಟ್ಟಿದ್ದರು.

Kochi police arrested a man on charges of trolling Parvathi

ಸೈಬರ್ ಕ್ರೈಂ ಪೊಲೀಸರ ಸಹಾಯದಿಂದ ಆರೋಪಿ ಕೇರಳದ ವಡಕ್ಕಂಚೇರಿಯ ಪ್ರಿಂಟೊ ಎಂದು ಗುರುತಿಸಲಾಗಿದೆ. ಅಲ್ಲದೆ ಪಾರ್ವತಿ ದೂರು ನೀಡಿದ 24 ಗಂಟೆಗಳಲ್ಲಿ ಕೊಚ್ಚಿ ಪೊಲೀಸರು ಆತನನ್ನು ಬಂದಿಸಿದ್ದಾರೆ. ಇತ್ತೀಚಿಗಷ್ಟೆ 'ನಟ ಮಮ್ಮುಟಿ ಅವರ ಸಿನಿಮಾವೊಂದರಲ್ಲಿ ಮಹಿಳೆಯರ ಬಗ್ಗೆ ಅವಹೇಳನಕಾರಿಯಾದ ಸಂಭಾಷಣೆ ಇದೆ' ಎಂದು ನಟಿ ಪಾರ್ವತಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸದಿದ್ದರು. ಒಬ್ಬ ಸೂಪರ್ ಸ್ಟಾರ್ ಬಾಯಲ್ಲಿ ಈ ರೀತಿಯ ಸಂಭಾಷಣೆ ಬರಬಾರದು ಎಂದು ಗರಂ ಆಗಿದ್ದರು.

ಆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ಟ್ರೋಲ್ ಗಳು ಹೆಚ್ಚಾಗಿತ್ತು. ಈಗ ಅದೇ ರೀತಿ ಎಲ್ಲೆ ಮೀರಿ ಮಾತನಾಡಿದ ಕಿಡಿಗೇಡಿಯ ವಿರುದ್ಧ ಪಾರ್ವತಿ ದೂರು ನೀಡಿ ಆತನನ್ನು ಪೊಲೀಸರಿಗೆ ಅತಿಥಿ ಆಗುವಂತೆ ಮಾಡಿದ್ದಾರೆ. ಅಂದಹಾಗೆ, ಮಲೆಯಾಳಂ ಭಾಷೆಯ ಅನೇಕ ಸೂಪರ್ ಹಿಟ್ ಸಿನಿಮಾದಲ್ಲಿ ನಟಿಸಿದ್ದ ಪಾರ್ವತಿ ಇತ್ತೀಚಿಗಷ್ಟೆ ಬಾಲಿವುಡ್ ಪ್ರವೇಶ ಮಾಡಿದ್ದರು. ಇನ್ನು ಕನ್ನಡದಲ್ಲಿ 'ಮಿಲನ', ಪೃಧ್ವಿ ಚಿತ್ರದಲ್ಲಿ ಪಾರ್ವತಿ ನಟಿಸಿದ್ದರು.

English summary
Kochi police arrested a man on charges of trolling south indian actress Parvathi on social media.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X