For Quick Alerts
  ALLOW NOTIFICATIONS  
  For Daily Alerts

  ಪ್ರಾಣಾಪಾಯದಿಂದ ಬಚಾವ್ ಆದ 'ಚಕ್ರವ್ಯೂಹ' ಕೇಡಿ ಅರುಣ್ ವಿಜಯ್

  By Harshitha
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 25ನೇ ಸಿನಿಮಾ 'ಚಕ್ರವ್ಯೂಹ'ದಲ್ಲಿ ಕಾಲಿವುಡ್ ನಟ ಅರುಣ್ ವಿಜಯ್ ಖತರ್ನಾಕ್ ಕೇಡಿಯಾಗಿ ಅಭಿನಯಿಸುತ್ತಿರುವ ಬಗ್ಗೆ ನಾವೇ ನಿಮಗೆ ಹೇಳಿದ್ವಿ.

  ತಮಿಳಿನಲ್ಲಿ ನಾಯಕ ನಟನಾಗಿ, ಖಳನಟನಾಗಿ ಖ್ಯಾತಿ ಪಡೆದಿರುವ ಅರುಣ್ ವಿಜಯ್ ಕನ್ನಡದಲ್ಲಿ ಪವರ್ ಸ್ಟಾರ್ ಗೆ ಟಕ್ಕರ್ ಕೊಡುವುದಕ್ಕೆ ಹೋಗಿ ಮೂಗಿನ ಮೂಳೆ ಮುರಿದುಕೊಂಡಿದ್ದಾರೆ. [ಪುನೀತ್ ರಾಜ್ ಕುಮಾರ್ ಗೆ ಟಕ್ಕರ್ ಕೊಡಲಿರುವ ತಮಿಳು ಕೇಡಿ]

  ಹೌದು, ಪುನೀತ್ ರಾಜ್ ಕುಮಾರ್ ಜೊತೆ ಭರ್ಜರಿ ಆಕ್ಷನ್ ಸನ್ನಿವೇಶದಲ್ಲಿ ಪಾಲ್ಗೊಂಡಿದ್ದ ಅರುಣ್ ವಿಜಯ್ ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. [ವ್ಹಾವ್! ಪವರ್ ಸ್ಟಾರ್ ಮನೆಯಲ್ಲಿ ಕಾಲಿವುಡ್ ಸ್ಟಾರ್ಸ್ ಸೆಲ್ಫಿ]

  ಗಾಜಿನ ಜೊತೆ ಹೊಡೆದಾಟದ ದೃಶ್ಯದಲ್ಲಿ ಅರುಣ್ ವಿಜಯ್ ಮಗ್ನರಾಗಿದ್ದರು. ಆಗ ಅದ್ಹೇಗೋ ಅರುಣ್ ವಿಜಯ್ ರವರ ಮೂಗಿಗೆ ಏಟು ಬಿದ್ದಿದೆ. ತಕ್ಷಣ ಅವರನ್ನ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. CT BRAIN SCANNING ನಲ್ಲಿ ಮೂಗು ಮೂಳೆ ಮುರಿದಿರುವುದು ಪತ್ತೆ ಆಗಿದೆ. ಮೂಗಿನ ಜೊತೆ ಕಣ್ಣು ಮತ್ತು ಕೆನ್ನೆಗೂ ಗಾಯವಾಗಿದೆ.

  ನೋವು ಸಹಿಸಿಕೊಂಡು ಆಸ್ಪತ್ರೆಯಲ್ಲಿರುವ ಅರುಣ್ ವಿಜಯ್ ಈ ಬಗ್ಗೆ ಖುದ್ದು ಮಾಡಿರುವ ಟ್ವೀಟ್ ಇಲ್ಲಿದೆ.

  ಸಾಹಸ ಮಾಡುವುದಕ್ಕೆ ಹೋಗಿ ಸಾವಿನೊಂದಿಗೆ ಸರಸವಾಡಿರುವ ಅರುಣ್ ವಿಜಯ್ ಆದಷ್ಟು ಬೇಗ ಗುಣಮುಖರಾಗಲಿ ಅಂತ ಹಾರೈಸೋಣ.

  English summary
  Kollywood Actor Arun Vijay has fractured his nasal bones while performing stunts for Kannada Actor Puneeth Rajkumar starrer 'Chakravyuha'. Kollywood Director Saravanan is directing this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X