»   » 'ರುದ್ರತಾಂಡವ' ಟ್ರೇಲರ್ ಗೆ ಮಾರುಹೋದ ತಮಿಳು ನಟ

'ರುದ್ರತಾಂಡವ' ಟ್ರೇಲರ್ ಗೆ ಮಾರುಹೋದ ತಮಿಳು ನಟ

Posted By:
Subscribe to Filmibeat Kannada

'ರುದ್ರತಾಂಡವ'....ಈ ಸಿನಿಮಾ ಸೆಟ್ಟೇರಿದಾಗಿನಿಂದಲೂ ಸ್ಯಾಂಡಲ್ ವುಡ್ ನಲ್ಲಿ ಹಲ್ ಚಲ್ ಎಬ್ಬಿಸುತ್ತಿದೆ. ಸೀರೆಯುಟ್ಟ 'ಸ್ವೀಟಿ' ರಾಧಿಕಾ ಕುಮಾರಸ್ವಾಮಿ ಮತ್ತು ಟಪೋರಿ ಲುಕ್ ನಲ್ಲಿ ಚಿರಂಜೀವಿ ಸರ್ಜಾ ಕಾಣಿಸಿಕೊಂಡಿರುವ 'ರುದ್ರತಾಂಡವ' ಚಿತ್ರದ ಪ್ರೊಮೋ ಮತ್ತು ಟ್ರೇಲರ್ ಗಳು ಈಗಾಗಲೇ ಜನಮನ್ನಣೆ ಗಿಟ್ಟಿಸಿದೆ.

'ರುದ್ರತಾಂಡವ' ಚಿತ್ರದ ರಿಲೀಸ್ ಗಾಗಿ ಅಭಿಮಾನಿಗಳು ಕಾಯುತ್ತಿರುವ ಬೆನ್ನಲೇ, ಚಿತ್ರತಂಡದಿಂದ ಒಂದು ಅಚ್ಚರಿ ಸುದ್ದಿ ಹೊರಬಿದ್ದಿದೆ. ಅದೇನಪ್ಪಾ ಅಂದ್ರೆ, 'ರುದ್ರತಾಂಡವ' ಚಿತ್ರದ ಟ್ರೇಲರ್ ನೋಡಿ ಕಾಲಿವುಡ್ ನ ಖ್ಯಾತ ನಟ ವಿಶಾಲ್ ಮೆಚ್ಚಿಕೊಂಡಿದ್ದಾರಂತೆ.


Kannada Movie Rudra Tandava

ಅಷ್ಟಕ್ಕೂ, 'ರುದ್ರತಾಂಡವ' ಸಿನಿಮಾ ತಮಿಳಿನ ಸೂಪರ್ ಹಿಟ್ 'ಪಾಂಡಿಯ ನಾಡು' ಚಿತ್ರದ ರೀಮೇಕ್. ಅದರ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದವರು ವಿಶಾಲ್. 'ಪಾಂಡಿಯ ನಾಡು' ರೀಮೇಕ್ ಆಗುತ್ತಿದೆ ಅಂದಾಗ ಸಂತಸ ಪಟ್ಟಿದ್ದ ವಿಶಾಲ್, ಇದೀಗ ಬಿಡುಗಡೆಯಾಗಿರುವ 'ರುದ್ರತಾಂಡವ' ಟ್ರೇಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ['ರುದ್ರತಾಂಡವ'ದಲ್ಲಿ ಪವರ್ ಸ್ಟಾರ್ ಪುನೀತ್ ಗಾನಸುಧೆ]


'ರುದ್ರತಾಂಡವ' ಮೇಕಿಂಗ್ ಸ್ಟೈಲ್ ಗೆ ಮಾರುಹೋಗಿರುವ ವಿಶಾಲ್, ''ಸಿನಿಮಾ ಬಿಡುಗಡೆಯಾದಾಗ, ಫಸ್ಟ್ ಡೇ ಫಸ್ಟ್ ಶೋ ಖಂಡಿತ ನೋಡುತ್ತೇನೆ'' ಅಂತ ಚಿತ್ರತಂಡಕ್ಕೆ ತಿಳಿಸಿದ್ದಾರಂತೆ.['ರುದ್ರತಾಂಡವ'ದಲ್ಲಿ ಪವರ್ ಸ್ಟಾರ್ ಪುನೀತ್ ಗಾನಸುಧೆ]


Kannada Movie Rudra Tandava

ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅರ್ಜುನ್ ಸರ್ಜಾ ರಿಂದ ಭೇಷ್ ಅನಿಸಿಕೊಂಡಿರುವ 'ರುದ್ರತಾಂಡವ' ನಿರ್ದೇಶಕ ಗುರು ದೇಶಪಾಂಡೆಗೆ ಕಾಲಿವುಡ್ ನಿಂದಲೂ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆಯಂತೆ. [ಕರುನಾಡ ಚಕ್ರವರ್ತಿ 'ಶಿವ'ಣ್ಣ ಮೆಚ್ಚಿದ 'ರುದ್ರತಾಂಡವ']


ಸ್ಯಾಂಡಲ್ ವುಡ್ ನಿಂದ ಹಿಡಿದು ಕಾಲಿವುಡ್ ವರೆಗೂ ಸದ್ದು ಸುದ್ದಿ ಮಾಡುತ್ತಿರುವ 'ರುದ್ರತಾಂಡವ' ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸೆನ್ಸಾರ್ ಆದ್ಮೇಲೆ ಚಿತ್ರದ ಬಿಡುಗಡೆ ದಿನಾಂಕ ಫೈನಲ್ ಆಗಲಿದೆ. (ಏಜೆನ್ಸೀಸ್)

English summary
Kollywood Actor Vishal has wooed Kannada Movie Rudra Tandava, which is the official remake of Pandiya Naadu. By watching the Kannada version trailer of his movie, Vishal has complimented the team. Rudra Tandava features Radhika Kumaraswamy, Chiranjeevi Sarja and others, directed by Guru Deshpande.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X