»   » ಕೈಗೆ ಸಿಗದ ಪಾರುಲ್; ಕಾದು ಸುಸ್ತಾದ ಕೋಮಲ್

ಕೈಗೆ ಸಿಗದ ಪಾರುಲ್; ಕಾದು ಸುಸ್ತಾದ ಕೋಮಲ್

Posted By:
Subscribe to Filmibeat Kannada

'ಗೋವಿಂದಾಯ ನಮಃ' ಖ್ಯಾತಿಯ ನಟಿ ಪಾರುಲ್ ಯಾದವ್ ಈಗ ಯಾರ ಕೈಗೂ ಸಿಗುತ್ತಿಲ್ಲ. ಯಾರಿಗೇಕೆ, ಸ್ವತಃ ಕೋಮಲ್ ಈ ಪಾರುಲ್ ಗಾಗಿ ಕಾದು ಕಾದು ಸುಸ್ತಾಗಿ ಕೊನೆಗೆ ಬೇರೆಯವರನ್ನು ಹುಡುಕುತ್ತಿದ್ದಾರೆ. ಅರೆ, ಕೋಮಲ್ ಯಾಕೆ ಪಾರುಗೆ ಕಾಯ್ತಿದಾರೆ ಎಂಬ ಪ್ರಶ್ನೆಯೇ? ಬೇರೆ ಕಾರಣವೇನೂ ಇಲ್ಲ. ಅವರ ಮುಂಬರುವ 'ನಂದೀಶ' ಚಿತ್ರಕ್ಕೆ 'ಅತಿಥಿ' ಪಾತ್ರಕ್ಕಾದರೂ ಬರುವಷ್ಟು ಪುರುಸೊತ್ತು ಇರಬಹುದು ಎಂದುಕೊಂಡ ಕೋಮಲ್, ಕಾದಿದ್ದೇ ಬಂತು, ಪಾರುಲ್ ಬರಲಿಲ್ಲ.

ಹಾಗಂತ, ಪಾರುಲ್ ಹಾಗೂ ಕೋಮಲ್ ಮಧ್ಯೆ ಸಂಬಂಧವೇನೂ ಕೆಟ್ಟಿಲ್ಲ. ಆದರೆ, ಈಗ ಪಾರುಲ್ ಬುಕ್ ಆಗಿರುವ ಚಿತ್ರಗಳ ಸಂಖ್ಯೆಯೇ ಅಷ್ಟಿದೆ. ಕಿಚ್ಚ ಸುದೀಪ್ 'ಬಚ್ಚನ್'ಗೆ ನಾಯಕಿರಲ್ಲೊಬ್ಬರಾಗಿರುವ ಪಾರುಲ್, ಇನ್ನೂ ಹಲವು ಚಿತ್ರಗಳಿಗೆ ನಾಯಕಿಯಾಗಿದ್ದಾರೆ. ಹೀಗಾಗಿ ಕೋಮಲ್ ಕರೆದರೂ ಬರುವಷ್ಟು ಕಾಲಾವಕಾಶ ಪಾರುಲ್ ಅವರಿಗಿಲ್ಲ. ಕೋಮಲ್ ಮಾತ್ರ 'ನಂದೀಶ' ಅತಿಥಿ ಪಾತ್ರಕ್ಕೆ ಪಾರುಲ್ ಬೇಕೆಂದು ಕೋಮಲ್ ಸಾಕಷ್ಟು ಕಾದರು.ವೇಸ್ಟ್ ಆಯ್ತು!

ಕೋಮಲ್ ಹೋಮ್ ಬ್ಯಾನರಿನಲ್ಲಿ ಮೂಡಿಬರುತ್ತಿರುವ 'ನಂದೀಶ' ಚಿತ್ರಕ್ಕೆ ಮಲಯಾಳಿ ಬೆಡಗಿ ಮಾಳವಿಕಾ ನಾಯಕಿ. "ಈ ಚಿತ್ರದಲ್ಲಿ ನಾಯಕಿ ಹೊರತಾಗಿ ಇನ್ನೊಂದು ಬಹುಮುಖ್ಯ ಪಾತ್ರವಿದೆ. ಅದನ್ನು ಅತಿಥಿ ಪಾತ್ರವೆಂದೂ ಕರೆಯಬಹುದು. ಆ ಪಾತ್ರ ಪಾರುಲ್ ಯಾದವ್ ಮಾಡಿದರೆ ಚೆಂದ ಎಂದು ಸಾಕಷ್ಟು ಕಾದೆವು. ಆದರೆ ಅವರು ಸಿಗದಿರುವುದರಿಂದ ನಾವೀಗ ಬೇರೆಯವರ ಹುಡುಕಾಟದಲ್ಲಿ ತೊಡಗಿದ್ದೇವೆ" ಎಂದಿದ್ದಾರೆ ಕಾಮಿಡಿ ಸ್ಟಾರ್ ಕೋಮಲ್.

ತಮ್ಮ ಜೊತೆ ಕೆಲಸ ಮಾಡಿದವರು ಕರೆದರೂ ಮತ್ತೆ ಬರಲಾಗದಷ್ಟು ಬಿಜಿಯಾಗಿರುವುದನ್ನು ನೋಡಿ ಕೋಮಲ್ ಅವರಿಗೆ ಬೇಸರಕ್ಕಿಂತ ಹೆಚ್ಚಾಗಿ ಖುಷಿಯಾಗಿದೆಯಂತೆ. ಬೇರೆಯವರು ಬೆಳೆಯುವುದನ್ನು ನೋಡಿ ಖುಷಿ ಪಡುವ ಮನಸ್ಸು ಕೋಮಲ್ ಅವರದಂತೆ. ತಮ್ಮ 'ಚಮ್ಕಾಯ್ಸಿ ಚಿಂದಿ ಉಡಾಯ್ಸಿ' ಚಿತ್ರದಲ್ಲಿ ನಟಿಸಿದ್ದ ನಿಧಿ ಸುಬ್ಬಯ್ಯ ಈಗ ಬಾಲಿವುಡ್ ಬೆಡಗಿ ಎನಿಸಿರುವುದು ಹಾಗೂ ಪಾರುಲ್ ಯಾದವ್ ಸಿಕ್ಕಾಪಟ್ಟೆ ಬಿಜಿಯಾಗಿರುವುದು ಎರಡೂ ಕೊಮಲ್ ಅವರಿಗೆ ಭಾರಿ ಖುಷಿ ನೀಡಿದೆಯಂತೆ.

ಒಂಬತ್ತು ವರ್ಷಗಳ ಹಿಂದೆ ಮಲಯಾಳಂನಲ್ಲಿ ಬಂದಿದ್ದ 'ತಿಲಕಂ' ರಿಮೇಕ್ ಕನ್ನಡ ಚಿತ್ರ ಈ ನಂದೀಶ. ಅಲ್ಲಿ ದಿಲೀಪ್ ಮತ್ತು ಕಾವ್ಯಾ ಮಾಧವನ್ ನಟಿಸಿದ್ದ ಪಾತ್ರಗಳನ್ನು ಇಲ್ಲಿ ಕೋಮಲ್ ಮತ್ತು ಮಾಳವಿಕಾ ನಟಿಸುತ್ತಿದ್ದಾರೆ. ಪಾರುಲ್ ಯಾದವ್ ಅವರನ್ನು ಸಂಪರ್ಕಿಸಲಾಗಿದ್ದ ಅಲ್ಲಿಯ ಭಾವನಾ ಪಾತ್ರಕ್ಕೆ ಇಲ್ಲಿ ಯಾರು ಬರುತ್ತಾರೆ ಎಂಬುದಷ್ಟೇ ಈಗ ಸದ್ಯಕ್ಕಿರುವ ಕುತೂಹಲ. ಕನ್ನಡದಲ್ಲಿ ಇದನ್ನು ನಿರ್ದೇಶಿಸುತ್ತಿರುವುದು ಸಾಯಿಪ್ರಕಾಶ್.  (ಒನ್ ಇಂಡಿಯಾ ಕನ್ನಡ)

English summary
Govindaya Namaha fame actress Parul Yadav Opts Out from Actor Komal Kumar's upcoming movie 'Nandeesh'. Om Saiprakash direction this movie is waiting to Parul Yadav for a important Role. But, because of heavy demand, Parul Opts Out from this project. 
 
Please Wait while comments are loading...