»   » ಥಿಯೇಟರ್ ಕಮ್ಮಿ ಅಂತ ಕೊರಗುತ್ತಿಲ್ಲ 'ಪುಟ್ಟಣ್ಣ'

ಥಿಯೇಟರ್ ಕಮ್ಮಿ ಅಂತ ಕೊರಗುತ್ತಿಲ್ಲ 'ಪುಟ್ಟಣ್ಣ'

Posted By:
Subscribe to Filmibeat Kannada

ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಕಿಲ್ಲಿಂಗ್ ವೀರಪ್ಪನ್' ಹೊಸ ವರ್ಷದ ಸಂದರ್ಭದಲ್ಲಿ ತೆರೆಕಾಣುತ್ತಿದೆ. ಈಗಾಗಲೇ 'ಮಾಸ್ಟರ್ ಪೀಸ್' ಹವಾ ಎಲ್ಲೆಲ್ಲೂ ಜೋರಾಗಿದೆ. ಇಂತಹ ಚಿತ್ರಗಳ ನಡುವೆ ಕೋಮಲ್ ಅಭಿನಯದ 'ಕಥೆ-ಚಿತ್ರಕಥೆ-ನಿರ್ದೇಶನ ಪುಟ್ಟಣ್ಣ' ಸಿನಿಮಾ ಕೂಡ ಮುಂದಿನ ವಾರ ಬಿಡುಗಡೆ ಆಗಲಿದೆ.

'ಕಿಲ್ಲಿಂಗ್ ವೀರಪ್ಪನ್' ಮತ್ತು 'ಮಾಸ್ಟರ್ ಪೀಸ್' ಜೊತೆ ಪೈಪೋಟಿಗೆ ಇಳಿದಿರುವ 'ಕಥೆ-ಚಿತ್ರಕಥೆ-ನಿರ್ದೇಶನ ಪುಟ್ಟಣ್ಣ'ಗೆ ಥಿಯೇಟರ್ ಗಳ ಕೊರತೆ ಕಾಡುತ್ತಿದೆ. ಚಿತ್ರಮಂದಿರಗಳು ಕಡಿಮೆ ಸಿಕ್ಕರೂ ಸಿನಿಮಾ ಬಿಡುಗಡೆಗೆ ಚಿತ್ರತಂಡ ಸಕಲ ತಯಾರಿ ಮಾಡಿಕೊಂಡಿದೆ.[ಕಥೆ-ಚಿತ್ರಕಥೆ-ನಿರ್ದೇಶನ 'ಪುಟ್ಟಣ್ಣ' ಸುತ್ತ ಹೊಸ ವಿವಾದ!]

komal-kumar

ಈಗಾಗಲೇ ರಿಲೀಸ್ ಆಗಿರುವ 'ಕಥೆ-ಚಿತ್ರಕಥೆ-ನಿರ್ದೇಶನ ಪುಟ್ಟಣ್ಣ' ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಹೀಗಾಗಿ ಬಿಡುಗಡೆ ಮುಂದಕ್ಕೆ ಹಾಕಿದರೆ ಇಲ್ಲಿವರೆಗೂ ಪಟ್ಟ ಪರಿಶ್ರಮ ವ್ಯರ್ಥ ಅನ್ನೋದು ಚಿತ್ರತಂಡದ ಅಭಿಪ್ರಾಯ. [ಸುದೀಪ್, ಉಪೇಂದ್ರ, ವರ್ಮಾ ಕಾಲೆಳೆದ್ರಾ ಕೋಮಲ್?]

ಹಾರರ್ ಕಮ್ ಕಾಮಿಡಿ ಮಿಶ್ರಿತವಾಗಿರುವ 'ಕಥೆ-ಚಿತ್ರಕಥೆ-ನಿರ್ದೇಶನ ಪುಟ್ಟಣ್ಣ' ಚಿತ್ರದಲ್ಲಿ ಕೋಮಲ್ ನಿರ್ದೇಶಕನ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ ಪ್ರಿಯಾಮಣಿ, ಪೂಜಾ ಗಾಂಧಿ ಪ್ರಮುಖ ಪಾತ್ರದಲ್ಲಿದ್ದಾರೆ. 'ದಂಡುಪಾಳ್ಯ' ಖ್ಯಾತಿಯ ಶ್ರೀನಿವಾಸ್ ರಾಜು ಈ ಚಿತ್ರದ ನಿರ್ದೇಶಕ.

English summary
Komal Kumar starrer 'Kathe Chitrakathe Nirdheshana Puttanna' is releasing on January 1st 2016, in-spite of Theater Scarcity.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada