»   » ಕಿಚ್ಚ ಸುದೀಪ್ ಸಿನಿ ಇತಿಹಾಸದಲ್ಲೇ ಇದು 'ಮೊಟ್ಟ ಮೊದಲ ಬಾರಿಗೆ'!

ಕಿಚ್ಚ ಸುದೀಪ್ ಸಿನಿ ಇತಿಹಾಸದಲ್ಲೇ ಇದು 'ಮೊಟ್ಟ ಮೊದಲ ಬಾರಿಗೆ'!

Posted By:
Subscribe to Filmibeat Kannada

ಕನ್ನಡ ಬೆಳ್ಳಿತೆರೆ ಮೇಲೆ ಕಿಚ್ಚ ಸುದೀಪ್ ಮಿನುಗಲು ಪ್ರಾರಂಭಿಸಿ ಎರಡು ದಶಕಗಳು ಉರುಳಿವೆ.

'ಸ್ಪರ್ಶ', 'ಹುಚ್ಚ', 'ಸ್ವಾತಿ ಮುತ್ತು', 'ಮೈ ಆಟೋಗ್ರಾಫ್', 'ಮುಸ್ಸಂಜೆ ಮಾತು', 'ವೀರ ಮದಕರಿ', 'ಜಸ್ಟ್ ಮಾತ್ ಮಾತಲ್ಲಿ', 'ಕೆಂಪೇಗೌಡ', 'ವಿಷ್ಣುವರ್ಧನ', 'ಬಚ್ಚನ್', 'ಮಾಣಿಕ್ಯ'....ಸೇರಿದಂತೆ ಅನೇಕ ಸದಭಿರುಚಿಯ ಚಿತ್ರಗಳನ್ನ 20 ವರ್ಷಗಳ ವೃತ್ತಿ ಜೀವನದಲ್ಲಿ ಸುದೀಪ್ ನೀಡಿದ್ದಾರೆ. ಅದರಲ್ಲಿ ಅನೇಕ ಚಿತ್ರಗಳು ಸೂಪರ್ ಡ್ಯೂಪರ್ ಹಿಟ್ ಆಗಿರೋದು ಎಲ್ಲರಿಗೂ ಗೊತ್ತಿರುವ ಸತ್ಯವೇ. ಆದರೂ, ಸುದೀಪ್ ಚಿತ್ರಗಳಿಂದ ದುಡ್ಡಾಗಿದೆ ಅಂತ ಯಾವೊಬ್ಬ ನಿರ್ಮಾಪಕ ಅಥವಾ ವಿತರಕರು ಬಾಯ್ಬಿಟ್ಟು ಹೇಳಿಕೊಂಡಿರ್ಲಿಲ್ಲ.


ಹೀಗಿದ್ದರೂ, ಸುದೀಪ್ ಗೆ ಯಾವತ್ತೂ ಕಡಿಮೆ ಸಂಭಾವನೆ ಸಿಕ್ಕಿರ್ಲಿಲ್ಲ. ನಿರ್ಮಾಪಕರು ಲಾಭ ಮಾಡಿಕೊಂಡರೂ, ಸುದೀಪ್ ಸಿನಿಮಾ 'ಸಕ್ಸಸ್' ಅಂತ ಬ್ರ್ಯಾಂಡ್ ಆಗಿರ್ಲಿಲ್ಲ. ಈಗ ಸುದೀಪ್ ಸಿನಿ ಇತಿಹಾಸದಲ್ಲಿ 'ಕೋಟಿಗೊಬ್ಬ-2' ಚಿತ್ರಕ್ಕೆ 'ಬಂಪರ್ ಹಿಟ್' ಎಂಬ ಟ್ಯಾಗ್ ದೊರಕಿದೆ. [ವಿಮರ್ಶೆ: ಆ 'ಕೋಟಿಗೊಬ್ಬ'ನಂತಲ್ಲ ಈ 'ಕೋಟಿಗೊಬ್ಬ'.!]


ಕನ್ನಡ ಚಿತ್ರರಂಗದ ಹಿಸ್ಟ್ರಿಯಲ್ಲೇ ಮೊಟ್ಟ ಮೊದಲ ಬಾರಿಗೆ ಇಂದು 'ಕೋಟಿಗೊಬ್ಬ-2' ಚಿತ್ರದ ವಿತರಕರು 'ಸಕ್ಸಸ್' ಮೀಟ್ ಆಯೋಜಿಸಿದ್ದರು. ಅದರಲ್ಲಿ 'ಕೋಟಿಗೊಬ್ಬ-2' ಚಿತ್ರದಿಂದ ಎಲ್ಲರಿಗೂ ಲಾಭ ಆಗಿರುವ ಬಗ್ಗೆ ಮಾಧ್ಯಮ ಮತ್ತು ಪತ್ರಿಕಾ ಮಿತ್ರರ ಜೊತೆ ಖುಷಿ ಹಂಚಿಕೊಂಡರು.


ಇದೇ ವೇಳೆ ಕಿಚ್ಚ ಸುದೀಪ್ ಆಡಿದ ಮುತ್ತಿನಂಥ ಮಾತುಗಳು ಇಲ್ಲಿದೆ. ಅದನ್ನೆಲ್ಲಾ ಅವರ ಮಾತುಗಳಲ್ಲೇ ಓದಿರಿ, ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ....


ಇದು ಮೊದಲನೇ ಸಲ!

''ನನ್ನ ಸಿನಿಮಾ ದುಡ್ಡು ಮಾಡ್ತಿದೆ ಅಂತ ಕೇಳಿದ್ದು ಮೊದಲನೇ ಸಲ. ಸೋ, ವಿತರಕರಿಗೆ ನಾನು ಥ್ಯಾಂಕ್ಸ್ ಹೇಳ್ಬೇಕು. ನಾನು ಚಿತ್ರರಂಗಕ್ಕೆ ಬಂದು 20 ವರ್ಷಗಳು ಆಯ್ತು. ಅಲ್ಲಿಂದ ಹಿಡಿದು ಇಲ್ಲಿಯವರೆಗೂ 'ನನ್ನ ಸಿನಿಮಾ ದುಡ್ಡು ಮಾಡ್ತಿದೆ' ಅಂತ ಯಾರೂ ಹೇಳಿಲ್ಲ ನಂಗೆ'' - ಕಿಚ್ಚ ಸುದೀಪ್ [ಒಂದೇ ದಿನದಲ್ಲಿ 'ಕೋಟಿಗೊಬ್ಬ 2' ಗಲ್ಲಾಪೆಟ್ಟಿಗೆಯಲ್ಲಿ ಗಳಿಸಿದ್ದೆಷ್ಟು.?]


ನನ್ನದಲ್ಲದು ನನಗೆ ಬೇಡ!

''ಸಿನಿಮಾ ಚೆನ್ನಾಗಿ ಓಡಿದರೆ, ಎಲ್ಲಾ ಹೀರೋಗಳು ಖುಷಿ ಪಡ್ತಾರೆ. ನಿರ್ಮಾಪಕರ ಜೇಬಿಗೆ ಕೈಹಾಕಿ ದುಡ್ಡು ಕಿತ್ತು ಕೊಳ್ಳುವ ಕೆಲಸ ಅಲ್ಲ ಹೀರೋಗಳದ್ದು. ಹೀಗಿರುವಾಗ, ಪ್ರತಿಯೊಬ್ಬರಿಗೂ ಒಳ್ಳೆಯದ್ದು ಆಗಲಿ ಅಂತ ಬಯಸುತ್ತೇವೆ ಹೊರತು, ನಮ್ಮದು ಯಾವುದು ಅಲ್ಲವೋ, ಅದು ನಮಗೆ ಬೇಡ'' - ಕಿಚ್ಚ ಸುದೀಪ್ ['ಕೋಟಿಗೊಬ್ಬ 2' ಚಿತ್ರದಿಂದ ಅಭಿಮಾನಿಗಳಿಗೆ ಬಿಸಿಬಿಸಿ ಸುದ್ದಿ]


ಇವತ್ತು ತುಂಬಾ ಖುಷಿ ಆಗ್ತಿದೆ!

''ಐ ಆಮ್ ವೆರಿ ಹ್ಯಾಪಿ ಟುಡೇ. ನನ್ನ ಸಿನಿಮಾ ದುಡ್ಡು ಮಾಡ್ತು. ಬಂಡವಾಳ ಹಾಕಿರೋದು ಒಂದು ವಾರದಲ್ಲಿ ವಾಪಸ್ ಬರುತ್ತೆ ಅಂತ ಹೇಳ್ತಿದ್ದಾರೆ. ತುಂಬಾ ಖುಷಿ ಕೊಡ್ತು ನನಗೆ'' - ಕಿಚ್ಚ ಸುದೀಪ್ [ವಿಮರ್ಶಕರ ಮನ ಲೂಟಿ ಮಾಡಿದನಾ 'ಈ' ಕೋಟಿಗೊಬ್ಬ.?]


ನನ್ನ ವೃತ್ತಿ ಜೀವನದ ಮೊದಲ ಸಕ್ಸಸ್ ಫುಲ್ ಸಿನಿಮಾ!

''I swear, This is my first successful film in my career'' - ಕಿಚ್ಚ ಸುದೀಪ್ [ಅಚ್ಚರಿ : ಸುದೀಪ್ ನಟನೆಯ 'ಕೋಟಿಗೊಬ್ಬ-2' ಚಿತ್ರದಲ್ಲಿ 'ಶಿವಣ್ಣ'.!]


'ಕೋಟಿಗೊಬ್ಬ' ಚಿತ್ರದ ಆಶೀರ್ವಾದ

''ನನಗೆ ಅನ್ಸುತ್ತೆ ಬಹುಶಃ 'ಕೋಟಿಗೊಬ್ಬ' ಚಿತ್ರದಿಂದ ಸಿಕ್ಕಿರುವ ಆಶೀರ್ವಾದ ಇದು. ಈ ಮಟ್ಟಕ್ಕೆ 'ಕೋಟಿಗೊಬ್ಬ-2' ಚಿತ್ರ ಯಶಸ್ವಿ ಆಗ್ತಿದೆ, ಎಲ್ಲರೂ ಓಪನ್ ಆಗಿ ಹೇಳಿಕೊಳ್ತಿದ್ದಾರೆ ಅಂದ್ರೆ ಇದು ಮಿರಾಕಲ್. ಈ ಮಿರಾಕಲ್ ಹೀಗೆ ಮುಂದುವರೆಯಲಿ ಅಂತ ಬಯಸುತ್ತೇನೆ'' - ಕಿಚ್ಚ ಸುದೀಪ್


ಏನೂ ಚೇಂಜ್ ಆಗಲ್ಲ!

''ಬಿಜಿನೆಸ್ ಎಂದ ತಕ್ಷಣ, ನನ್ನ ವ್ಯಕ್ತಿತ್ವ ಆಗಲಿ...ಸಿನಿಮಾ ಮೇಲಿರುವ ಪ್ರೀತಿ ಆಗಲಿ ಯಾವತ್ತೂ ಚೇಂಜ್ ಆಗಲ್ಲ. I'm still the same'' - ಕಿಚ್ಚ ಸುದೀಪ್


ಯಶಸ್ಸಿಗೆ ಎಲ್ಲರೂ ಕಾರಣ

''ಈ ಸಕ್ಸಸ್ ನಲ್ಲಿ ಮೊದಲು ನನಗೆ ಕಾಣುವುದು ನಿರ್ದೇಶಕ ಕೆ.ಎಸ್.ರವಿಕುಮಾರ್. ಅವರು ಇಲ್ಲದೆ ಇದು ಇಲ್ಲ. ಹಾಗೂ ಸೂರಪ್ಪ ಬಾಬು ಇಲ್ಲದೆ ಈ ಸಿನಿಮಾ ಆಗ್ತಿರ್ಲಿಲ್ಲ. ಪ್ರತಿಯೊಬ್ಬ ಕಲಾವಿದರು, ತಂತ್ರಜ್ಞರು ಈ ಚಿತ್ರವನ್ನ ಅಚ್ಚುಕಟ್ಟಾಗಿ ಮಾಡಿದ್ದಾರೆ. ಯಶಸ್ಸು ಎಲ್ಲರಿಗೂ ಸಲ್ಲಬೇಕು'' - ಕಿಚ್ಚ ಸುದೀಪ್


ಜನರ ಪ್ರೀತಿಗಿಂತ ಹೆಚ್ಚು ಸಂಭಾವನೆ ಬೇಡ

''ಟ್ವಿಟ್ಟರ್ ನಲ್ಲಿ ನನಗೆ ಬಹಳ ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ. ಇದಕ್ಕಿಂತ ಒಳ್ಳೆಯ ಪೇಮೆಂಟ್ ನನಗೆ ಸಿಗಲು ಸಾಧ್ಯವಿಲ್ಲ. ಥ್ಯಾಂಕ್ಯು ಎಲ್ಲರಿಗೂ'' - ಕಿಚ್ಚ ಸುದೀಪ್


English summary
Success Meet was arranged by 'Kotigobba-2' Producer Surappa Babu and distributors today, at 'Gold Finch' Hotel, Bengaluru to disclose the 4 days Collection report of the movie. During the interaction with the press and media, Kiccha Sudeep said ''Kotigobba 2' is the first successful film in my career''.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada