For Quick Alerts
  ALLOW NOTIFICATIONS  
  For Daily Alerts

  ಷಡ್ಯಂತ್ರದ ನಡುವೆಯೂ 'ಕೋಟಿಗೊಬ್ಬ 3' ಗಳಿಸಿದ್ದೆಷ್ಟು?

  |

  ಸುದೀಪ್ ನಟನೆಯ 'ಕೋಟಿಗೊಬ್ಬ 3' ಸಿನಿಮಾ ಸಮಸ್ಯೆಗಳನ್ನು ಎದುರಿಸಿ ಒಂದು ದಿನ ತಡವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಅದಾಗ್ಯೂ ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ.

  ಅಕ್ಟೋಬರ್ 14 ರಂದು ಸಿನಿಮಾ ಬಿಡುಗಡೆ ಆಗುವುದಕ್ಕಿತ್ತು, ಆದರೆ ಕೆಲವು ವಿತರಕರು ನೀಡಿದ ಸಮಸ್ಯೆಯಿಂದಾಗಿ ಮೊದಲ ದಿನ ರಾಜ್ಯದಾದ್ಯಂತ ಶೋಗಳು ರದ್ದಾಗಿ ಅಕ್ಟೋಬರ್ 15 ರಂದು ಬಿಡುಗಡೆ ಕಂಡಿತು. ಆ ಮೂಲಕ ಮೊದಲ ದಿನದ ಕಲೆಕ್ಷನ್ ಅನ್ನು ಕಳೆದುಕೊಂಡಿತು ಚಿತ್ರತಂಡ.

  ಈ ಬಗ್ಗೆ ಮಾತನಾಡಿದ್ದ ಸಿನಿಮಾದ ನಿರ್ಮಾಪಕ ಸೂರಪ್ಪ ಬಾಬು, ''ಮೊದಲ ದಿನ ಕಲೆಕ್ಷನ್ ಆಗಬೇಕಿದ್ದ 10 ರಿಂದ 12 ಕೋಟಿ ಹಣ ನನಗೆ ನಷ್ಟವಾಗಿದೆ. ನಮ್ಮ ಸಿನಿಮಾಕ್ಕೆ ತೊಂದರೆ ನೀಡಿದವರ ವಿರುದ್ಧ ಕ್ರಮ ಜರುಗಿಸದೇ ಬಿಡುವುದಿಲ್ಲ'' ಎಂದಿದ್ದರು. ಮೊದಲ ದಿನದ 10 ಕೋಟಿ ಕಳೆದುಕೊಂಡರು ಸಿನಿಮಾವು ದೊಡ್ಡ ಹಿಟ್ ಎನ್ನಲಾಗುತ್ತಿದೆ. ಹಾಗಿದ್ದರೆ ಸಿನಿಮಾ ಕಲೆಕ್ಷನ್ ಎಷ್ಟು?

  ಮೊದಲ ದಿನ ಒಳ್ಳೆಯ ಕಲೆಕ್ಷನ್

  ಮೊದಲ ದಿನ ಒಳ್ಳೆಯ ಕಲೆಕ್ಷನ್

  'ಕೋಟಿಗೊಬ್ಬ 3' ಸಿನಿಮಾ ಬಿಡುಗಡೆ ಆದ ಮೊದಲ ದಿನ (ಅಕ್ಟೋಬರ್ 15) ರಂದು 12.50 ಕೋಟಿ ಹಣ ಗಳಿಸಿದೆ. ಅಕ್ಟೋಬರ್ 15 ರಂದು ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿತ್ತು. ಆದರೆ ಮಳೆಯ ನಡುವೆಯೂ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡಿದ್ದಾರೆ. ಆ ಮೂಲಕ ದಾಖಲೆಯ 12.50 ಕೋಟಿ ಹಣ ಕಲೆಕ್ಷನ್ ಮಾಡಿದೆ ಸಿನಿಮಾ. ಹಬ್ಬದ ಕಾರಣ ರಜೆಯೂ ಇದ್ದಿದ್ದು ಸಿನಿಮಾದ ಕಲೆಕ್ಷನ್ ಹೆಚ್ಚಾಗಲು ಕಾರಣವಾಗಿದೆ.

  ಶನಿವಾರ-ಭಾನುವಾರವೂ ಒಳ್ಳೆಯ ಕಲೆಕ್ಷನ್: ಸುದೀಪ್

  ಶನಿವಾರ-ಭಾನುವಾರವೂ ಒಳ್ಳೆಯ ಕಲೆಕ್ಷನ್: ಸುದೀಪ್

  ಇನ್ನು ಶನಿವಾರ ಹಾಗೂ ಭಾನುವಾರವೂ ಸಿನಿಮಾದ ಒಳ್ಳೆಯ ಕಲೆಕ್ಷನ್ ಮುಂದುವರೆದಿದ್ದು, ಶನಿವಾರ ಮತ್ತು ಭಾನುವಾರ ಒಟ್ಟು 25 ಕೋಟಿ ಹಣವನ್ನು 'ಕೋಟಿಗೊಬ್ಬ 3' ಕೆಲಕ್ಷನ್ ಮಾಡಿದೆ. ಆ ಮೂಲಕ ಸಿನಿಮಾದ ಈವರೆಗಿನ ಒಟ್ಟು ಕಲೆಕ್ಷನ್ 40 ಕೋಟಿ ಸಮಿಪಕ್ಕೆ ಹೋಗಿ ನಿಂತಿದೆ. 'ಕೋಟಿಗೊಬ್ಬ 3' ಚಿತ್ರತಂಡ ಕಲೆಕ್ಷನ್ ಮಾಹಿತಿಯನ್ನು ಪೋಸ್ಟರ್‌ ಮೂಲಕ ಹಂಚಿಕೊಂಡಿದ್ದು, ಸಿನಿಮಾ ಒಳ್ಳೆಯ ಕಲೆಕ್ಷನ್ ಆಗಿರುವ ಸುದ್ದಿಯನ್ನು ಸುದೀಪ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಖುಷಿಪಡುತ್ತಿದ್ದಾರೆ.

  ಮಳೆಯ ನಡುವೆಯೂ ಕಲೆಕ್ಷನ್: ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಸುದೀಪ್

  ಮಳೆಯ ನಡುವೆಯೂ ಕಲೆಕ್ಷನ್: ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಸುದೀಪ್

  ''ಮೊದಲ ದಿನ ಮಳೆ ಬಂದರೆ ಶೇ 60% ಕಲೆಕ್ಷನ್ ಆದರೆ ಅದೇ ಬಹಳ ಒಳ್ಳೆಯ ಕಲೆಕ್ಷನ್ ಎಂದುಕೊಳ್ಳುತ್ತೇವೆ. ಆದರೆ ಮಳೆ ಆದರೂ 'ಕೋಟಿಗೊಬ್ಬ 3' ಸಿನಿಮಾದ ಕಲೆಕ್ಷನ್ ಕುಸಿದಿಲ್ಲ. ಅಭಿಮಾನಿಗಳು ಹೆಚ್ಚಿನ ಜೋಶ್‌ನಿಂದ ಬಂದು ಸಿನಿಮಾ ನೋಡುತ್ತಿದ್ದಾರೆ. ಕುಟುಂಬ ಸಮೇತ ಬಂದು ಸಿನಿಮಾ ನೋಡುತ್ತಿದ್ದಾರೆ. ಅದರಲ್ಲೂ ಸಂಜೆ ಶೋಗೆ ಮಹಿಳೆಯರು ಹೆಚ್ಚು ಬರುತ್ತಿದ್ದಾರೆ'' ಎಂದು ಸುದೀಪ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

  ಮೊದಲ ದಿನ ಬಿಡುಗಡೆ ಆಗದ 'ಕೋಟಿಗೊಬ್ಬ 3'

  ಮೊದಲ ದಿನ ಬಿಡುಗಡೆ ಆಗದ 'ಕೋಟಿಗೊಬ್ಬ 3'

  'ಕೋಟಿಗೊಬ್ಬ 3' ಸಿನಿಮಾ ಅಕ್ಟೋಬರ್ 14 ರಂದು ಬಿಡುಗಡೆ ಆಗಬೇಕಿತ್ತು. ಆದರೆ ಇಬ್ಬರು ವಿತರಕರು ನಿರ್ಮಾಪಕ ಸೂರಪ್ಪ ಬಾಬುಗೆ ಬಾಕಿ ಹಣ ನೀಡದ ಕಾರಣ ಸಿನಿಮಾಕ್ಕೆ ಯುಎಫ್‌ಓ ಪರವಾನಗಿ ಸಿಗಲಿಲ್ಲ. ಹಾಗಾಗಿ ಸಿನಿಮಾದ ಶೋಗಳು ರದ್ದಾಗಿದ್ದವು. ಚಿತ್ರರಂಗದ ಹಿರಿಯ ವಿತರಕರೊಬ್ಬರು 'ಕೋಟಿಗೊಬ್ಬ 3' ಸಿನಿಮಾದ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ ಎಂದು ಚಿತ್ರತಂಡ ಆರೋಪ ಮಾಡಿದೆ. ತಮಗೆ ಸಮಯಕ್ಕೆ ಸರಿಯಾಗಿ ಹಣ ಕೊಡದ ವಿತರಕರ ವಿರುದ್ಧ ದೂರು ನೀಡುವುದಾಗಿ ಸೂರಪ್ಪ ಬಾಬು ಈಗಾಗಲೇ ಹೇಳಿದ್ದಾರೆ. ವಿತರಕರು ಈಗಾಗಲೇ ಸೂರಪ್ಪ ಬಾಬು ವಿರುದ್ಧ ಚಿತ್ರದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  English summary
  Kotigobba 3 Box Office Collection: Sudeep Starrer Collects Rs 40cr in First Weekend. First day collection is 12.50 crore rs.
  Monday, October 18, 2021, 17:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X