For Quick Alerts
  ALLOW NOTIFICATIONS  
  For Daily Alerts

  ಸೆನ್ಸಾರ್ ಮುಗಿಸಿದ ಸುದೀಪ್ 'ಕೋಟಿಗೊಬ್ಬ'-ವಿಜಯ್ 'ಸಲಗ'

  |

  ಕನ್ನಡದ ಎರಡು ದೊಡ್ಡ ಚಿತ್ರಗಳು ಒಂದೇ ದಿನ ತೆರೆಗೆ ಬರ್ತಿದೆ. ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 3 ಹಾಗೂ ದುನಿಯಾ ವಿಜಯ್ ಅಭಿನಯದ ಸಲಗ ಚಿತ್ರಗಳು ದಸರಾ ಹಬ್ಬದ ವಿಶೇಷವಾಗಿ ಏಕಕಾಲಕ್ಕೆ ಥಿಯೇಟರ್‌ಗೆ ಲಗ್ಗೆಯಿಡುತ್ತಿವೆ. ಕೊರೊನಾ ಕಾರಣಕ್ಕಾಗಿ ಬಹಳ ದಿನಗಳಿಂದ ಕಾಯುತ್ತಿದ್ದ ಚಿತ್ರಗಳು ಇನ್ನಷ್ಟು ದಿನ ಕಾಯಲು ಸಿದ್ಧವಿಲ್ಲದೇ ದಸರಾ ಹಬ್ಬಕ್ಕೆ ದರ್ಶನ ಕೊಡುವ ನಿರ್ಧಾರಕ್ಕೆ ಬಂದಿವೆ.

  ಅಕ್ಟೋಬರ್ 14 ರಂದು ಈ ಎರಡು ಚಿತ್ರಗಳು ರಿಲೀಸ್ ಆಗುತ್ತಿವೆ. ಮುಂದಿನ ವಾರ ಚಿತ್ರಮಂದಿರಕ್ಕೆ ಬರಲು ಸಜ್ಜಾಗಿರುವ ಈ ಎರಡು ಚಿತ್ರಗಳು ಈಗಷ್ಟೇ ಸೆನ್ಸಾರ್ ಮಂಡಳಿಯಿಂದ ಹಸಿರು ನಿಶಾನೆ ಪಡೆದು ಪಾಸ್ ಆಗಿದೆ.

  ಸಲಗ-ಕೋಟಿಗೊಬ್ಬ ದಸರಾ ಹಬ್ಬವನ್ನೇ ಟಾರ್ಗೆಟ್ ಮಾಡ್ತಿರೋದೇಕೆ?ಸಲಗ-ಕೋಟಿಗೊಬ್ಬ ದಸರಾ ಹಬ್ಬವನ್ನೇ ಟಾರ್ಗೆಟ್ ಮಾಡ್ತಿರೋದೇಕೆ?

  ಸುದೀಪ್ ನಟನೆಯ ಕೋಟಿಗೊಬ್ಬ 3 ಚಿತ್ರವೂ ಕಳೆದ ರಾತ್ರಿ ಸೆನ್ಸಾರ್ ಮುಗಿಸಿದ್ದು, ಯು/ಎ ಪ್ರಮಾಣಪತ್ರ ಪಡೆದುಕೊಂಡಿದೆ ಎನ್ನುವ ವಿಚಾರ ಹೊರಬಿದ್ದಿದೆ. ಅದಕ್ಕೂ ಒಂದು ದಿನ ಮುಂಚೆ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ಸಲಗ ಚಿತ್ರವೂ ಸೆನ್ಸಾರ್ ಮುಗಿಸಿದ್ದು, 'ಎ' ಪ್ರಮಾಣಪತ್ರ ಪಡೆದಿದೆ. ಮುಂದೆ ಓದಿ...

  ಯಾವುದೇ ಕಟ್ ಇಲ್ಲದೇ ಪಾಸ್ ಆದ 'ಸಲಗ'

  ಯಾವುದೇ ಕಟ್ ಇಲ್ಲದೇ ಪಾಸ್ ಆದ 'ಸಲಗ'

  ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶಿಸಿರುವ ಸಲಗ ಚಿತ್ರವೂ ಅಂಡರ್‌ವರ್ಲ್ಡ್‌ ಆಧರಿತ ಘಟನೆಗಳ ಸುತ್ತ ತಯಾರಾಗಿದೆ. ರಾ ಸ್ಟೈಲ್ ಮೇಕಿಂಗ್, ರಾ ಡೈಲಾಗ್ಸ್ ಚಿತ್ರದ ಪ್ರಮುಖ ಆಕರ್ಷಣೆ. ಟೀಸರ್ ಹಾಗೂ ಹಾಡುಗಳ ಮೂಲಕ ಸಖತ್ ಗಮನ ಸೆಳೆದಿದ್ದ ಸಲಗ ಚಿತ್ರಕ್ಕೆ ಎ ಪ್ರಮಾಣಪತ್ರ ಸಿಗುವುದು ಬಹುತೇಕ ಖಚಿತವಾಗಿತ್ತು. ರೌಡಿಸಂ ಸಿನಿಮಾ ಎಂಬ ಕಾರಣಕ್ಕೆ 'ಎ' ಸರ್ಟಿಫಿಕೇಟ್ ಸಿಕ್ಕಿದೆ ಹೊರತು ಬೇರೆ ಯಾವ ಕಾರಣಕ್ಕೂ ಅಲ್ಲ. ಯಾವುದೇ ಕಟ್ ಇಲ್ಲದೇ ಚಿತ್ರ ಸೆನ್ಸಾರ್ ಮಂಡಳಿಯಿಂದ ಪಾಸ್ ಆಗಿದೆ.

  ಕೋಟಿಗೊಬ್ಬನಿಗೆ ಸಿಕ್ತು ಯು/ಎ

  ಕೋಟಿಗೊಬ್ಬನಿಗೆ ಸಿಕ್ತು ಯು/ಎ

  ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 3 ಚಿತ್ರ ಮಂಗಳವಾರ ಸೆನ್ಸಾರ್ ಮುಗಿಸಿದೆ. ಔಟ್ ಅಂಡ್ ಔಟ್ ಎಂಟರ್‌ಟೈನ್‌ಮೆಂಟ್ ಚಿತ್ರವಾಗಿರುವ ಕೋಟಿಗೊಬ್ಬ 3 ಸಿನಿಮಾಗೆ ಯು/ಎ ಪ್ರಮಾಣಪತ್ರ ಸಿಕ್ಕಿದೆ. ಅಕ್ಟೋಬರ್ 14ಕ್ಕೆ ಸಿನಿಮಾ ತೆರೆಗೆ ಬರಲಿದ್ದು, ಅಕ್ಟೋಬರ್ 7ಕ್ಕೆ ಟ್ರೈಲರ್ ಬರಲಿದೆ.

  ಒಂದೇ ದಿನ 'ಸಲಗ', 'ಕೋಟಿಗೊಬ್ಬ 3' ಬಿಡುಗಡೆ: ಸಲಹೆ ನೀಡಿದ ಶಿವರಾಜ್‌ ಕುಮಾರ್ಒಂದೇ ದಿನ 'ಸಲಗ', 'ಕೋಟಿಗೊಬ್ಬ 3' ಬಿಡುಗಡೆ: ಸಲಹೆ ನೀಡಿದ ಶಿವರಾಜ್‌ ಕುಮಾರ್

  ಪ್ರಿ-ರಿಲೀಸ್ ಕಾರ್ಯಕ್ರಮದಲ್ಲೂ ಫೈಟ್

  ಪ್ರಿ-ರಿಲೀಸ್ ಕಾರ್ಯಕ್ರಮದಲ್ಲೂ ಫೈಟ್

  ಭಾರಿ ನಿರೀಕ್ಷೆ ಮೂಡಿಸಿರುವ ಕೋಟಿಗೊಬ್ಬ ಮತ್ತು ಸಲಗ ಎರಡು ಚಿತ್ರವೂ ಒಂದೇ ದಿನ ಥಿಯೇಟರ್‌ಗೆ ಬರ್ತಿದೆ. ಈಗ ಒಂದೇ ದಿನ ಪ್ರಿ-ರಿಲೀಸ್ ಕಾರ್ಯಕ್ರಮ ಆಯೋಜನೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಎರಡೂ ಚಿತ್ರಗಳು ಅಕ್ಟೋಬರ್ 10ರಂದು ಸಂಜೆ 6 ಗಂಟೆಗೆ ಪ್ರಿ-ರಿಲೀಸ್ ಕಾರ್ಯಕ್ರಮ ಆಯೋಜಿಸಿದೆ. ಇದು ಸಹಜವಾಗಿ ಎರಡು ಚಿತ್ರಗಳ ನಡುವೆ ನೇರಾ ಹಣಾಹಣಿ ಇದ್ದಂತೆ ಕಾಣುತ್ತಿದೆ.

  ಕೋಟಿಗೊಬ್ಬ 2 ಸೀಕ್ವೆಲ್

  ಕೋಟಿಗೊಬ್ಬ 2 ಸೀಕ್ವೆಲ್

  ಸೂರಪ್ಪ ಬಾಬು ನಿರ್ಮಾಣದಲ್ಲಿ ತಯಾರಾಗಿರುವ ಕೋಟಿಗೊಬ್ಬ 3 ಚಿತ್ರದಲ್ಲಿ ಮಲಯಾಳಂ ನಟಿ ಮಡೋನ್ನಾ ಸಬಾಸ್ಟಿಯನ್ ನಾಯಕಿಯಾಗಿ ನಟಿಸಿದ್ದಾರೆ. ಸುದೀಪ್ ಜೊತೆ ರವಿಶಂಕರ್, ಅಫ್ತಾಬ್ ಶಿವ ದಾಸನಿ, ಶ್ರದ್ಧಾ ದಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

  ಸಂತೋಷ್ ಚಿತ್ರಮಂದಿರದಲ್ಲಿ ಸಲಗ

  ಸಂತೋಷ್ ಚಿತ್ರಮಂದಿರದಲ್ಲಿ ಸಲಗ

  ದುನಿಯಾ ವಿಜಯ್ ನಿರ್ದೇಶಿಸಿ, ನಟಿಸಿರುವ ಈ ಚಿತ್ರದಲ್ಲಿ ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಂಜನಾ ಪ್ರಕಾಶ್ ನಾಯಕಿ. ಕಾಕ್ರೋಚ್ ಖ್ಯಾತಿಯ ಸುಧೀ, ಯಶ್ ಶೆಟ್ಟಿ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದು, ಕೆಪಿ ಶ್ರೀಕಾಂತ್ ನಿರ್ಮಿಸಿದ್ದಾರೆ. ಕೆಜಿ ರಸ್ತೆಯಲ್ಲಿರುವ ಸಂತೋಷ್ ಮೇನ್ ಥಿಯೇಟರ್ ಸೇರಿದಂತೆ ರಾಜ್ಯಾದ್ಯಂತ ಪ್ರಮುಖ ಚಿತ್ರಮಂದಿರಗಳಲ್ಲಿ ಸಲಗ ಎಂಟ್ರಿಯಾಗಲಿದೆ.

  English summary
  Kiccha Sudeep Starrer Kotigobba 3 has been censored with U/A certificate and Duniya Vijay's Salaga censored with A certificate. now both movies are ready to release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X