For Quick Alerts
  ALLOW NOTIFICATIONS  
  For Daily Alerts

  ಮತ್ತೆ ಬಿಡುಗಡೆಗೆ ಸಜ್ಜಾದ ಸ್ಟಾರ್ಸ್: ಹೊಸ ಪೋಸ್ಟರ್‌ನಿಂದ ಸಿಕ್ತು ಸುಳಿವು

  |

  ಥಿಯೇಟರ್‌ನಲ್ಲಿ 100 ಪರ್ಸೆಂಟ್ ಕೊಡಲಿ ಎಂದು ಕಾಯುತ್ತಿರುವ ಸ್ಟಾರ್ ನಟರ ಚಿತ್ರಗಳಿಗೆ ಅಕ್ಟೋಬರ್‌ನಲ್ಲಿ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ. ಇತ್ತೀಚಿಗಷ್ಟೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಖ್ಯಾತ ನಿರ್ಮಾಪಕರಿಗೆ ಶೀಘ್ರದಲ್ಲೇ 100% ಅವಕಾಶ ಕೊಡುವುದಾಗಿ ಭರವಸೆ ಸಿಕ್ಕಿದೆ. ಈ ಹಿನ್ನೆಲೆ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಲು ತಯಾರಿ ಆರಂಭಿಸಿದ್ದಾರೆ.

  ಸೂರಪ್ಪ ಬಾಬು, ಕೆಪಿ ಶ್ರೀಕಾಂತ್, ಜಯಣ್ಣ ಅವರ ತಂಡವೂ ಸಿಎಂ ಹಾಗೂ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಕಷ್ಟದ ಪರಿಸ್ಥಿತಿಯ ಬಗ್ಗೆ ಹೇಳಿಕೊಂಡರು. ಚಿತ್ರರಂಗದ ಸಮಸ್ಯೆ ಆಲಿಸಿದ ಆರೋಗ್ಯ ಸಚಿವ ಡಾ ಸುಧಾಕರ್ ಹಾಗೂ ಸಿಎಂ ಬೊಮ್ಮಾಯಿ 'ಸದ್ಯದ ಕೊರೊನಾ ಪರಿಸ್ಥಿತಿ, ತಜ್ಞರ ಅಭಿಪ್ರಾಯ ಪಡೆದು ಇನ್ನೆರಡು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ' ಹೇಳಿದ್ದರು.

  ಶಿವಣ್ಣ ಅಭಿಮಾನಿಗಳಿಗೆ ಮತ್ತೆ ನಿರಾಸೆ: ಸದ್ಯಕ್ಕಿಲ್ಲ 'ಭಜರಂಗಿ' ದರ್ಶನಶಿವಣ್ಣ ಅಭಿಮಾನಿಗಳಿಗೆ ಮತ್ತೆ ನಿರಾಸೆ: ಸದ್ಯಕ್ಕಿಲ್ಲ 'ಭಜರಂಗಿ' ದರ್ಶನ

  ಅಕ್ಟೋಬರ್ 1 ರಿಂದ ಕರ್ನಾಟಕ ರಾಜ್ಯದಲ್ಲಿ ಚಿತ್ರಮಂದಿರಗಳಿಗೆ 100% ಅನುಮತಿ ಸಿಗುವ ನಿರೀಕ್ಷೆ ಇದೆ. ಈ ಹಿನ್ನೆಲೆ ಕೆಲವು ದೊಡ್ಡ ಬಜೆಟ್ ಚಿತ್ರಗಳು ತಮ್ಮ ಬಿಡುಗಡೆ ದಿನಾಂಕವನ್ನು ಲಾಕ್ ಮಾಡಿಕೊಳ್ಳುತ್ತಿವೆ. ಮುಂದೆ ಓದಿ...

  ಮೊದಲು ಕೋಟಿಗೊಬ್ಬ 3

  ಮೊದಲು ಕೋಟಿಗೊಬ್ಬ 3

  ಒಂದು ವೇಳೆ ಅಕ್ಟೋಬರ್ 1 ರಿಂದ ಚಿತ್ರಮಂದಿರಗಳಿಗೆ 100% ಅನುಮತಿ ಸಿಕ್ಕರೆ ಮೊದಲು ಬಿಡುಗಡೆಯಾಗುವುದು ಕೋಟಿಗೊಬ್ಬ 3 ಎಂದು ಹೇಳಲಾಗಿದೆ. ಸದ್ಯದ ವರದಿ ಪ್ರಕಾರ ದಸರಾ ಹಬ್ಬಕ್ಕೆ ತೆರೆಗೆ ಬರಬೇಕು ಎಂದು ಯೋಜಿಸಿರುವ ಚಿತ್ರತಂಡ ಅದರ ತಯಾರಿಯಲ್ಲಿದೆ. ಈಗಷ್ಟೇ ಮುಂದಿನ ಬದಲಾವಣೆಗಳೊಂದಿಗೆ ಎಂದು ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಸಿಎಂ ಭೇಟಿ ಬಳಿಕ ಭರವಸೆ ಸಿಕ್ಕಿರುವ ಹಿನ್ನೆಲೆ ಅಂದುಕೊಂಡಂತೆ ಥಿಯೇಟರ್‌ಗೆ ಬರುವ ಲೆಕ್ಕಾಚಾರದಲ್ಲಿದೆ. ಸುದೀಪ್ ನಾಯಕನಾಗಿ ನಟಿಸಿರುವ ಈ ಚಿತ್ರವನ್ನು ಸೂರಪ್ಪ ಬಾಬು ನಿರ್ಮಾಣ ಮಾಡಿದ್ದಾರೆ. ಮಲಯಾಳಂ ನಟಿ ಮಡೋನ್ನಾ ಸಬಾಸ್ಟಿಯನ್ ಸುದೀಪ್‌ಗೆ ನಾಯಕಿಯಾಗಿ ನಟಿಸಿದ್ದಾರೆ. ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಬಗ್ಗೆ ಸಖತ್ ಉತ್ಸುಕರಾಗಿದ್ದಾರೆ. ಇನ್ನು ಉಳಿದಂತೆ ಸಿನಿಮಾದಲ್ಲಿ ರವಿಶಂಕರ್, ಅಫ್ತಾಬ್ ಶಿವ ದಾಸನಿ, ಶ್ರದ್ಧಾ ದಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

  ಆಮೇಲೆ ಭಜರಂಗಿ 2

  ಆಮೇಲೆ ಭಜರಂಗಿ 2

  ಈಗಾಗಲೇ ಎರಡ್ಮೂರು ಸಲ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದ ಭಜರಂಗಿ 2 ಸಿನಿಮಾವೂ ಅಕ್ಟೋಬರ್ ತಿಂಗಳಲ್ಲೇ ತೆರೆಗೆ ಬರುವ ನಿರೀಕ್ಷೆಯಿದೆ. ಕೋಟಿಗೊಬ್ಬ 3 ಚಿತ್ರ ಬಂದ ಎರಡು ವಾರದ ಬಳಿಕ ಶಿವಣ್ಣನ ಸಿನಿಮಾ ಪ್ರೇಕ್ಷಕರೆದುರು ಬರುವ ತಯಾರಿ ನಡೆಸಿದೆ. ಈ ಹಿಂದೆ ಸೆಪ್ಟೆಂಬರ್ 10 ರಂದು ಬರಬೇಕಿತ್ತು. ಭಜರಂಗಿ 2 ಚಿತ್ರಕ್ಕೆ ಹರ್ಷ ಮಾಸ್ಟರ್ ಆಕ್ಷನ್ ಕಟ್ ಹೇಳಿದ್ದು, ಜಯಣ್ಣ-ಭೋಗೇಂದ್ರ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಈಗಾಗಲೇ ಭಜರಂಗಿ ಹಾಡುಗಳು ಹಿಟ್ ಬಾರಿಸಿದೆ. ಶಿವರಾಜ್ ಕುಮಾರ್‌ಗೆ ನಾಯಕಿಯಾಗಿ 'ಜಾಕಿ' ಭಾವನಾ ನಟಿಸಿದ್ದಾರೆ. ನಟಿ ಶ್ರುತಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ಸೌರವ್ ಲೋಕೇಶ್, ಶಿವರಾಜ್ ಕೆ.ಆರ್ ಪೇಟೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ಸುದೀಪ್ 'ಕೋಟಿಗೊಬ್ಬ-3' ಹೊಸ ಬಿಡುಗಡೆ ದಿನಾಂಕ ಇಲ್ಲಿದೆಸುದೀಪ್ 'ಕೋಟಿಗೊಬ್ಬ-3' ಹೊಸ ಬಿಡುಗಡೆ ದಿನಾಂಕ ಇಲ್ಲಿದೆ

  ದುನಿಯಾ 'ಸಲಗ'

  ದುನಿಯಾ 'ಸಲಗ'

  ಈ ಎರಡೂ ಚಿತ್ರಕ್ಕೂ ಮೊದಲು ದುನಿಯಾ ವಿಜಯ್ ನಟಿಸಿ, ಚೊಚ್ಚಲ ಬಾರಿಗೆ ನಿರ್ದೇಸಿದ್ದ ಸಲಗ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಬದಲಾದ ಯೋಜನೆಗಳಿಂದ ಸಲಗ ಚಿತ್ರಕ್ಕೆ ಸ್ವಲ್ಪ ಗೊಂದಲ ಉಂಟಾಗಿದೆ. ಕೋಟಿಗೊಬ್ಬ 3, ಭಜರಂಗಿ 2 ಚಿತ್ರಗಳ ಪೈಪೋಟಿಯಿಂದ ಸ್ವಲ್ಪ ದಿನ ಕಾಯಬೇಕಿದೆ. ಈ ಎರಡು ಸಿನಿಮಾಗಳ ರಿಲೀಸ್ ಮೇಲೆ ಸಲಗ ಎಂಟ್ರಿ ನಿರ್ಧಾರವಾಗಲಿದೆ. ಕೆಪಿ ಶ್ರೀಕಾಂತ್ ನಿರ್ಮಿಸಿರುವ ಈ ಚಿತ್ರದಲ್ಲಿ ವಿಜಯ್ ಜೊತೆ 'ಡಾಲಿ' ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಂಜನಾ ಆನಂದ್ ನಾಯಕಿ. ಚರಣ್ ರಾಜ್ ಸಂಗೀತ ನಿರ್ದೇಶನದ ಹಾಡುಗಳು ಈಗಾಗಲೇ ದೊಡ್ಡ ಮಟ್ಟದಲ್ಲಿ ಹಿಟ್ ಆಗಿವೆ.

  ಚಾರ್ಲಿ 777

  ಚಾರ್ಲಿ 777

  ರಕ್ಷಿತ್ ಶೆಟ್ಟಿ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ 777 ಚಾರ್ಲಿ ಡಿಸೆಂಬರ್‌ಗೆ ಬರುವುದಾಗಿ ಈಗಾಗಲೇ ಘೋಷಿಸಿದೆ. ಡಿಸೆಂಬರ್ 31ರಂದು ರಕ್ಷಿತ್ ಚಿತ್ರ ತೆರೆಗೆ ಬರ್ತಿದೆ. ಈ ಹಿಂದೆ ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ ಚಿತ್ರಗಳು ಸಹ ಡಿಸೆಂಬರ್‌ನಲ್ಲೇ ಚಿತ್ರಮಂದಿರಕ್ಕೆ ಬಂದಿದ್ದವು. ಈಗ ಚಾರ್ಲಿ ಸಹ ಅದೇ ಹೆಜ್ಜೆಯಲ್ಲಿ ಹೆಜ್ಜೆ ಇಟ್ಟಿದೆ. ಇನ್ನು ರಕ್ಷಿತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರಕ್ಕೆ ಕಿರಣ್ ರಾಜ್ ಆಕ್ಷನ್ ಕಟ್ ಹೇಳಿದ್ದಾರೆ. ರಕ್ಷಿತ್ ಜೊತೆಗೆ ಸಂಗೀತ ಶೃಂಗೇರಿ, ರಾಜ್ ಬಿ ಶೆಟ್ಟಿ, ದಾನಿಶ್ ಸೇಠ್, ಬಾಬಿ ಸಿಂಹ ಇನ್ನೂ ಹಲವರು ಕಾಣಿಸಿಕೊಂಡಿದ್ದಾರೆ.

  ವಿಕ್ರಾಂತ್ ರೋಣ

  ವಿಕ್ರಾಂತ್ ರೋಣ

  ಕೋಟಿಗೊಬ್ಬ 3 ಸಿನಿಮಾದ ಬಿಡುಗಡೆ ಮೇಲೆ ವಿಕ್ರಾಂತ್ ರೋಣದ ಭವಿಷ್ಯ ನಿಂತಿದೆ. ಅನೂಪ್ ಭಂಡಾರಿ ನಿರ್ದೇಶಿಸಿರುವ ವಿಕ್ರಾಂತ್ ರೋಣ ಸಿನಿಮಾ ಅದಾಗಲೇ ಶೂಟಿಂಗ್ ಪೂರ್ಣಗೊಳಿಸಿ ಕನ್ನಡದಲ್ಲಿ ಡಬ್ಬಿಂಗ್ ಮುಗಿಸಿದೆ. ಈಗ ಬೇರೆ ಭಾಷೆಗಳ ಡಬ್ಬಿಂಗ್ ಮಾತ್ರ ಬಾಕಿ ಉಳಿದಿದ್ದು ಈ ಚಿತ್ರ ಡಿಸೆಂಬರ್‌ಗೆ ಬರುವಂತೆ ಪ್ಲಾನ್ ಮಾಡಿದೆ ಎಂಬ ಸುದ್ದಿ ಇದೆ. ಅನೂಪ್ ಭಂಡಾರಿ ನಿರ್ದೇಶಿಸಿರುವ ಈ ಚಿತ್ರವನ್ನು ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ. ನಿರೂಪ್ ಭಂಡಾರಿ, ನೀತಾ ಅಶೋಕ್, ರವಿಶಂಕರ್ ಗೌಡ ಸೇರಿದಂತೆ ಹಲವರು ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಬಿಡುಗಡೆಯಾಗಲಿರುವ ಈ ಚಿತ್ರ ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಇತರೆ ಭಾಷೆಯಲ್ಲಿ ಬಿಡುಗಡೆಯಾಗಲಿದೆ.

  English summary
  Kotigobba 3, Salaga and Bhajarangi 2 movies all set for release in october.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X